AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi: ತಳ್ಳುವ ಗಾಡಿ ತಂದು ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಗ್ಯಾಂಗ್​!

Belagavi: ತಳ್ಳುವ ಗಾಡಿ ತಂದು ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಗ್ಯಾಂಗ್​!

Sahadev Mane
| Updated By: ಪ್ರಸನ್ನ ಹೆಗಡೆ|

Updated on: Dec 02, 2025 | 2:19 PM

Share

ಇತ್ತೀಚೆಗೆ ಬೆಂಗಳೂರಿನಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ದರೋಡೆ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಗದು ಸಮೇತ ಎಟಿಎಂ ಯಂತ್ರದ ದರೋಡೆ ನಡೆದಿದೆ. ಇಂಡಿಯಾ ಬ್ಯಾಂಕ್​​ ಎಂಟಿಎಂಗೆ ಮೂವರ ಗ್ಯಾಂಗ್​​ ಕನ್ನಹಾಕಿದ್ದು, ಖದೀಮರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಳಗಾವಿ, ಡಿಸೆಂಬರ್​​ 02: ತಳ್ಳುಗಾಡಿ ತಂದು ಎಟಿಎಂ ಯಂತ್ರವನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಬೆಳಗಾವಿ ತಾಲೂಕು ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಯಾ ಬ್ಯಾಂಕ್​​ ಎಂಟಿಎಂಗೆ ಮೂವರ ಗ್ಯಾಂಗ್​​ ಕನ್ನಹಾಕಿದೆ.  ಎಟಿಎಂ ಯಂತ್ರ ಹೊರ ತೆಗೆದು ತಳ್ಳುವ ಗಾಡಿಯಲ್ಲಿಟ್ಟುಕೊಂಡು, ಸುಮಾರು 200 ಮೀಟರ್​​ ಗ್ಯಾಂಗ್​​ ಕ್ರಮಿಸಿದೆ. ಅಲ್ಲಿಂದ ತಮ್ಮ ವಾಹನಕ್ಕೆ ಎಟಿಎಂ ಯಂತ್ರ ಸಾಗಿಸಿ, ​​ ಎಸ್ಕೇಪ್​​ ಆಗಿದೆ. ಖದೀಮರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಹಣ ಎಟಿಎಂನಲ್ಲಿತ್ತು ಎನ್ನಲಾಗಿದೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.