ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಸಂವಿಧಾನ ರಚನೆಯಾಗಿದ್ದು ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ನಂತರ: ಡಿಕೆ ಶಿವಕುಮಾರ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಸಂವಿಧಾನ ರಚನೆಯಾಗಿದ್ದು, ರಾಷ್ಟ್ರಧ್ವಜದ ಸ್ವರೂಪಕ್ಕೆ ಮನ್ನಣೆ ಸಿಕ್ಕಿದ್ದು ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ನಂತರ ಎಂದು ಶಿವಕುಮಾರ ಹೇಳಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ನಡುವೆ ಮಾತಿನ ಕಾಳಗ ಜೋರಾಗೇ ನಡೆಯುತ್ತಿದೆ. ಈಗಿನ ಕಾಂಗ್ರೆಸ್ ನಾಯಕರಲ್ಲಿ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟಗಾರರಲ್ಲ ಅಂತ ಕುಮಾರಸ್ವಾಮಿ ಅವರು ಹೇಳಿದ್ದಕ್ಕೆ ಶಿವಕುಮಾರ ಲೇವಡಿ ಮಾಡುತ್ತಾ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಸಂವಿಧಾನ ರಚನೆಯಾಗಿದ್ದು, ರಾಷ್ಟ್ರಧ್ವಜದ ಸ್ವರೂಪಕ್ಕೆ ಮನ್ನಣೆ ಸಿಕ್ಕಿದ್ದು ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ನಂತರ ಎಂದರು.