ಕದನ ವಿರಾಮ ಉಲ್ಲಂಘಿಸಿದ ಪಾಕ್ಗೆ ವಾಟಾಳ್ ನಾಗರಾಜ್ ಖಡಕ್ ಕ್ಲಾಸ್
ವಾಟಾಳ್ ನಾಗರಾಜ್ ಅವರು ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯನ್ನು ಖಂಡಿಸಿದ್ದಾರೆ ಮತ್ತು ಭಾರತೀಯ ಸೇನೆಯ ದಿಟ್ಟ ಪ್ರತಿಕ್ರಿಯೆಯನ್ನು ಶ್ಲಾಘಿಸಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ವೈಫಲ್ಯಗೊಂಡಿದ್ದರೂ, ಭಾರತ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಂದೇ ದನಿಯಿಂದ ಯೋಧರನ್ನು ಬೆಂಬಲಿಸುತ್ತಿರುವುದನ್ನು ಅವರು ಸ್ವಾಗತಿಸಿದ್ದಾರೆ. ಪ್ರತಿಯೊಬ್ಬರೂ ದೇವರ ಜೊತೆಗೆ ಯೋಧರನ್ನು ನೆನಪಿಸಿಕೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.
ಮೈಸೂರು, ಮೇ 11: ಪಾಕಿಸ್ತಾನಕ್ಕೆ (Pakistan) ನಮ್ಮ ಭಾರತೀಯ ಸೇನೆ (Indian Army) ದಿಟ್ಟ ಪ್ರತ್ಯುತ್ತರ ಕೊಡುತ್ತಿದೆ. ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿ ಶಾಂತಿ ನೆಲೆಸಲು ಪ್ರಯತ್ನ ಮಾಡಿತ್ತು. ಆದರೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಕದನ ವಿರಾಮ ಉಲ್ಲಂಘನೆ ಮಾಡಿದರೆ ಯುದ್ಧಕ್ಕೆ ತಯಾರು ಮಾಡಬೇಕು. ನಮ್ಮ ಭಾರತೀಯ ಸೈನಿಕರು ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದಿಸುತ್ತೇನೆ. ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷದವರು ಒಂದೇ ಧ್ವನಿಯಲ್ಲಿದ್ದಾರೆ. ಪ್ರತಿಯೊಬ್ಬರೂ ದೇವರ ಜೊತೆಗೆ ಯೋಧರನ್ನೂ ನೆನಪಿಸಿಕೊಳ್ಳಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
