IND vs SA: ಫೋಟೋ ಶೂಟ್ನಲ್ಲಿ ಮಿರಮಿರ ಮಿಂಚಿದ ಟೀಂ ಇಂಡಿಯಾ ಆಟಗಾರರು
India vs South Africa ODI: ನವೆಂಬರ್ 30 ರಂದು ರಾಂಚಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿ ಆರಂಭವಾಗಲಿದೆ. ಪಂದ್ಯಕ್ಕೂ ಮುನ್ನ ನಡೆದ ಟೀಂ ಇಂಡಿಯಾದ ಫೋಟೋಶೂಟ್‌ನಲ್ಲಿ ತಂಡದ ಎಲ್ಲಾ ಆಟಗಾರರು ಮಿರಮಿರ ಮಿಂಚಿದ್ದಾರೆ. ಇದರ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯು ನವೆಂಬರ್ 30 ರಂದು ರಾಂಚಿಯಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಫೋಟೋಶೂಟ್ ನಡೆಸಿದ್ದು, ಅದರ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ವೀಡಿಯೊದಲ್ಲಿ, ರಿಷಭ್ ಪಂತ್, ಅರ್ಷದೀಪ್ ಸಿಂಗ್ ಮತ್ತು ರೋಹಿತ್ ಶರ್ಮಾ ತಮಾಷೆಯ ಮನಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದಾರೆ. ಆದರೆ ಅತ್ಯಂತ ತಮಾಷೆಯ ಘಟನೆ ರಿಷಭ್ ಪಂತ್‌ಗೆ ಸರಿಯಾಗಿ ನಗಲು ಸಾಧ್ಯವಾಗಿಲ್ಲ. ಛಾಯಾಗ್ರಾಹಕ ಪಂತ್ ಅವರನ್ನು ಸ್ವಲ್ಪ ಚೆನ್ನಾಗಿ ನಗುವಂತೆ ಕೇಳಿದಾಗ, ಪಂತ್ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ
ಟೀಂ ಇಂಡಿಯಾದ ಇತರ ಆಟಗಾರರಂತೆ, ಪಂತ್ ಕೂಡ ಫೋಟೋಶೂಟ್‌ಗೆ ಬಂದರು. ಛಾಯಾಗ್ರಾಹಕ ಅವರ ಕೆಲವು ಫೋಟೋಗಳನ್ನು ತೆಗೆದುಕೊಂಡು ನಂತರ ಸ್ವಲ್ಪ ಚೆನ್ನಾಗಿ ನಗುವಂತೆ ಕೇಳಿದರು. ಇದಕ್ಕೆ ಉತ್ತರಿಸಿದ ಪಂತ್, ನಿದ್ರೆಯಿಂದ ಈಗ ಎದ್ದಿರುವುದಾಗಿ ಉತ್ತರಿಸಿದರು. ಪಂತ್ ತಮ್ಮ ಫೋಟೋ ತೆಗೆಯುತ್ತಿರುವಾಗ, ಅವರ ಕಣ್ಣುಗಳಲ್ಲಿ ನಿದ್ರೆ ಕಾಣುತ್ತಿತ್ತು. ಮತ್ತೊಂದೆಡೆ, ಅರ್ಷದೀಪ್ ಸಿಂಗ್, ‘ಫೋಟೋ ಸರಿಯಾಗಿಲ್ಲದಿದ್ದರೆ, ಮತ್ತೆ ತೆಗೆದುಕೊಳ್ಳಿ’ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆಲ್ಲುವುದು ಟೀಂ ಇಂಡಿಯಾಕ್ಕೆ ನಿರ್ಣಾಯಕ. ಏಕೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಈಗಾಗಲೇ ಸೋತಿದೆ. 0-2 ಕ್ಲೀನ್ ಸ್ವೀಪ್ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಾಗಿ ಏಕದಿನ ಸ್ವರೂಪದಲ್ಲಿ ತಂಡದಿಂದ ಉತ್ತಮ ಪ್ರದರ್ಶನದಲ್ಲಿ ನಿರೀಕ್ಷೆಯಲ್ಲಿ ಗಂಭೀರ್ ಇದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿತ್ತು. ಈಗ ಇದು ದಕ್ಷಿಣ ಆಫ್ರಿಕಾ ವಿರುದ್ಧವೂ ಸಂಭವಿಸಿದರೆ, ಮುಖ್ಯ ಕೋಚ್‌ನಿಂದ ಹಿಡಿದು ಇಡೀ ತಂಡದ ಮೇಲೆ ಒತ್ತಡ ಖಂಡಿತವಾಗಿಯೂ ಹೆಚ್ಚಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ