AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cup 2025: ವಿಶ್ವ ಗೆದ್ದ ಭಾರತದ ವನಿತಾ ಪಡೆಯ ಸಂಭ್ರಮ ಹೇಗಿತ್ತು ನೋಡಿ

World Cup 2025: ವಿಶ್ವ ಗೆದ್ದ ಭಾರತದ ವನಿತಾ ಪಡೆಯ ಸಂಭ್ರಮ ಹೇಗಿತ್ತು ನೋಡಿ

ಪೃಥ್ವಿಶಂಕರ
|

Updated on: Nov 03, 2025 | 12:44 AM

Share

Indian Women's Cricket Team: ದಶಕಗಳ ಕಾಯುವಿಕೆಯ ನಂತರ ಭಾರತದ ವನಿತಾ ಕ್ರಿಕೆಟ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ನವಿ ಮುಂಬೈನಲ್ಲಿ ನಡೆದ ICC ಏಕದಿನ ವಿಶ್ವಕಪ್ 2025 ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ. 299 ರನ್‌ಗಳ ಗುರಿ ನೀಡಿದ ಭಾರತ, ಆಫ್ರಿಕಾವನ್ನು 246ಕ್ಕೆ ಆಲೌಟ್ ಮಾಡಿ 52 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವು ತಂಡಕ್ಕೆ ದಶಕಗಳ ಕನಸನ್ನು ನನಸು ಮಾಡಿದೆ.

ದಶಕಗಳ ಕಾಯುವಿಕೆಯ ನಂತರ ಭಾರತ ವನಿತಾ ಪಡೆ ಕೊನೆಗೂ ಇತಿಹಾಸ ನಿರ್ಮಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ 2025 ರ ಟ್ರೋಫಿಯನ್ನು ಎತ್ತಿಹಿಡಿದಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 299 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡವನ್ನು ಟೀಂ ಇಂಡಿಯಾದ ಬೌಲರ್‌ಗಳು 45.2 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಮಾಡಿ ತಂಡಕ್ಕೆ 52 ರನ್‌ಗಳ ಗೆಲುವು ತಂದುಕೊಟ್ಟರು. ಭಾರತ ಇದಕ್ಕೂ ಮೊದಲು 2005 ಮತ್ತು 2017 ರಲ್ಲಿ ವಿಶ್ವಕಪ್ ಫೈನಲ್ ಆಡಿತ್ತು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ತನ್ನ ಕನಸನ್ನು ನನಸು ಮಾಡಿಕೊಂಡಿರುವ ಟೀಂ ಇಂಡಿಯಾ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಸಂಭ್ರಮದಲ್ಲಿ ಮಿಂದೆತ್ತಿತ್ತು. ತಂಡದ ಎಲ್ಲಾ ಆಟಗಾರ್ತಿಯರು ಮೈದಾನದಲ್ಲಿ ಆನಂದಭಾಷ್ಪ ಹರಿಸಿದರು.