ಲಡಾಖ್: ಕಾರ್ಗಿಲ್ನಲ್ಲಿ ಸಂಭ್ರಮದ ಪೊಂಗಲ್ ಆಚರಿಸಿದ ಭಾರತೀಯ ಸೈನಿಕರು; ವಿಡಿಯೋ ಇಲ್ಲಿದೆ
Pongal Celebrations: ಕಾರ್ಗಿಲ್ನಲ್ಲಿ ಭಾರತೀಯ ಸೈನಿಕರು ಸಂಭ್ರಮದಿಂದ ಪೊಂಗಲ್ ಹಬ್ಬವನ್ನು ಆಚರಿಸಿದ್ದಾರೆ. ಇದೇ ವೇಳೆ ದೇಶದ ಜನರಿಗೂ ಶುಭಾಶಯ ಕೋರಿದ್ದಾರೆ.
ಲಡಾಖ್: ಕೊರೆಯುವ ಚಳಿಯಲ್ಲೂ ಸೈನಿಕರು ದೇಶ ಕಾಯುತ್ತಿದ್ದಾರೆ. ಹಾಗೆಯೇ ಹಬ್ಬದ ಸಂದರ್ಭದಲ್ಲಿ ದೇಶದ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಹಿಮಾಚ್ಛಾದಿತ ಪ್ರದೇಶದಲ್ಲಿ ಪೊಂಗಲ್ ಸಂಭ್ರಮಾಚರಣೆಯ (Pongal Celebrations) ವಿಡಿಯೋವನ್ನು ಭಾರತೀಯ ಸೇನೆ ಹಂಚಿಕೊಂಡಿದೆ. ಲಡಾಖ್ (Ladakh) ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರ್ಗಿಲ್ನಲ್ಲಿ ಭಾರತೀಯ ಸೈನಿಕರು ಸಂಭ್ರಮದಿಂದ ಪೊಂಗಲ್ ಹಬ್ಬ ಆಚರಿಸಿದ್ದಾರೆ. ಜತೆಗೆ ದೇಶದ ಜನರಿಗೂ ಅವರು ಶುಭ ಕೋರಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸೈನಿಕರಿಗೆ ಧನ್ಯವಾದ ಸಲ್ಲಿಸಿ, ಶುಭಾಶಯ ಕೋರಿದ್ದಾರೆ.
#WATCH | Ladakh: Indian Army soldiers deployed in forward areas of Drass, Kargil district wish countrymen on the occasion of #Pongal
(Video Source: Indian Army) pic.twitter.com/XOCPh5T8YE
— ANI (@ANI) January 14, 2022
ಇದನ್ನೂ ಓದಿ:
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತೀಯ ಸೈನಿಕರಿಂದ ಲೋಹ್ರಿ ಹಬ್ಬದ ಸಂಭ್ರಮಾಚರಣೆ
ಪತ್ತೆಯಾಯ್ತು ಆಲೂಗಡ್ಡೆ ರೂಪದ ಗ್ರಹ; ಇಲ್ಲಿ ಒಂದು ವರ್ಷವೆಂದರೆ ಎಷ್ಟು ಗಂಟೆ ಗೊತ್ತಾ? ಕುತೂಹಲಕಾರಿ ಮಾಹಿತಿ ಇಲ್ಲಿದೆ