IND vs NZ, ICC World Cup: ಮನಮೋಹಕ ತಾಣ ಧರ್ಮಶಾಲಾಗೆ ಬಂದ ಟೀಮ್ ಇಂಡಿಯಾ ಪ್ಲೇಯರ್ಸ್: ವಿಡಿಯೋ
Team India arrives in Dharamshala: ಅಕ್ಟೋಬರ್ 22 ರಂದು ಟೀಮ್ ಇಂಡಿಯಾ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೀಸಿಯೇಷನ್ ಸ್ಟೇಡಿಯಂನಲ್ಲಿ ನ್ಯೂಝಿಲೆಂಡ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಭಾರತದ ಎಲ್ಲ ಆಟಗಾರರು ಧರ್ಮಶಾಲಾಗೆ ಬಂದಿಳಿದಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನಂತರ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ (ICC World Cup) ತಮ್ಮ ಸತತ ನಾಲ್ಕು ಪಂದ್ಯಗಳ ಜಯದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಪುಣೆಯಿಂದ ಧರ್ಮಶಾಲಾಗೆ ತಲುಪಿದೆ. ಭಾನುವಾರ, ಅಕ್ಟೋಬರ್ 22 ರಂದು ಟೀಮ್ ಇಂಡಿಯಾ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೀಸಿಯೇಷನ್ ಸ್ಟೇಡಿಯಂನಲ್ಲಿ ನ್ಯೂಝಿಲೆಂಡ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಭಾರತದ ಎಲ್ಲ ಆಟಗಾರರು ಧರ್ಮಶಾಲಾಗೆ ಬಂದಿಳಿದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರು ಧರ್ಮಶಾಲಾಗೆ ತಲುಪಿದ ವಿಡಿಯೋವನ್ನು ಹಂಚಿಕೊಂಡಿದೆ. ಇಲ್ಲಿದೆ ನೋಡಿ ಆ ವಿಡಿಯೋ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ