ಚೀನಾ ಸೈನಿಕರ ಮೇಲೆ ಒಂದು ಕಣ್ಣಿಟ್ಟೇ ಗಲ್ವಾನ್ ಕಣಿವೆ  ಹಿಮಪ್ರದೇಶದಲ್ಲಿ ಭಾರತೀಯ ಸೈನಿಕರು ಗನ್ ಕೆಳಗಿಟ್ಟು ಬ್ಯಾಟ್ ಕೈಗೆತ್ತಿಕೊಂಡರು!

Arun Kumar Belly

|

Updated on: Mar 04, 2023 | 11:18 AM

ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಗಡಿ ಕಾಯುವ ನಮ್ಮ ಸೈನಿಕರಿಗೆ ಒಂದಷ್ಟು ಮನರಂಜನೆ, ಕರ್ತವ್ಯಕ್ಕೆ ಹೊರತಾದ ಚಟುವಟಿಕೆ ಬೇಕೇಬೇಕು

ಚೀನಾ ಗಡಿಭಾಗ ಗಲ್ವಾನ್ ಕಣಿವೆ (Galwan valley) ಪ್ರದೇಶ ಬಹಳ ಸೂಕ್ಷ್ಮಅಂತ ನಮಗೆ ಗೊತ್ತಿದೆ. ಇಲ್ಲಿ ನಮ್ಮ ಮತ್ತು ಚೀನಾ (China) ದೇಶದ ಸೈನಿಕರ ನಡುವೆ ಸದಾ ಸಂಘರ್ಷ, ತಿಕ್ಕಾಟ ನಡೆಯುತ್ತಿರುತ್ತದೆ. ಇದು ಹಿಮಾವೃತ ಪ್ರದೇಶವಾಗಿರುವುರಿಂದ ಮೈ ಕೊರೆಯುವ ಚಳಿ ಮಾರಾಯ್ರೇ. ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಗಡಿ ಕಾಯುವ ನಮ್ಮ ಸೈನಿಕರಿಗೆ ಒಂದಷ್ಟು ಮನರಂಜನೆ (entertainment), ಕರ್ತವ್ಯಕ್ಕೆ ಹೊರತಾದ ಚಟುವಟಿಕೆ ಬೇಕೇಬೇಕು. ಹಾಗಾಗೇ ಹಿಮ ಆವರಿಸಿರುವ ಪರ್ವತ ಪ್ರದೇಶಗಳ ನಡುವೆ ಸ್ಥಳ ಮಾಡಿಕೊಂಡು ಕ್ರಿಕೆಟ್ ಆಡುತ್ತಿದ್ದಾರೆ. ಪಿಚ್ ಮೇಲೆ ಹಾಸಲು ಅವರರು ಒಂದು ಮ್ಯಾಟನ್ನು ಸಹ ಸಹ ತಯಾರಿಮಾಡಿಕೊಂಡಿದ್ದಾರೆ! ವೆಲ್ ಡನ್ ಬಾಯ್ಸ್ , ಎಂಜಾಯ್ ದಿ ಗೇಮ್!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada