Wrestlers resume protest: ನಿಗಾ ಸಮತಿ ವರದಿ ಜಾರಿಗೊಳಿಸುವಂತೆ ದೆಹಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಪುನರಾರಂಭಿಸಿದ ಕುಸ್ತಿಪಟುಗಳು

Wrestlers resume protest: ನಿಗಾ ಸಮತಿ ವರದಿ ಜಾರಿಗೊಳಿಸುವಂತೆ ದೆಹಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಪುನರಾರಂಭಿಸಿದ ಕುಸ್ತಿಪಟುಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 24, 2023 | 2:09 PM

ಸಮಿತಿಯ ಸದಸ್ಯರೇ ವರದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವರೆಂದರೆ, ಅದನ್ನು ಕುಸ್ತಿಪಟುಗಳು ಹೇಗೆ ಅಂಗೀಕರಿಸಲು ಸಾಧ್ಯ? ವರದಿಯಲ್ಲಿ ದೋಷಗಳಿರುವುದು ಸ್ಪಷ್ಟವಾಗುತ್ತದೆ.

ನವದೆಹಲಿ: ಅಂತರರಾಷ್ಟ್ರೀಯ ಕುಸ್ತಿಪಟುಗಳು ಬಜರಂಗ ಪೂನಿಯಾ (Bajrang Punia), ಸಾಕ್ಷಿ ಮಲ್ಲಿಕ್ ಮತ್ತು ವಿನೇಶ್ ಪೋಗಟ್ ಸೇರಿದಂತೆ ಭಾರತದ ಅಗ್ರಮಾನ್ಯ ಪೈಲ್ವಾನ್ ಗಳು ರವಿವಾರದಿಂದ ದೆಹಲಿಯ ಜಂತರ್ ಮಂತರ್ ಬಳಿ ಪ್ರತಿಭಟನೆಯನ್ನು ಪುನರಾರಂಭಿಸಿದ್ದಾರೆ. ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಅರೋಪಗಳ ತನಿಖೆ ನಡೆಸಿದ ನಿಗಾ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಬೇಕೆಂದು ಆಗ್ರಹಿಸಿ ಕುಸ್ತಿಪಟುಗಳು ಪ್ರತಿಭಟನೆಯನ್ನು ಮತ್ತೇ ಆರಂಭಿಸಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪೊಲೀಸ್ ಗೆ ದೂರು ಸಲ್ಲಿಸಿ 48 ತಾಸುಗಿಂತ ಹೆಚ್ಚು ಸಮಯವಾದರೂ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ ಎಂದು ಕುಸ್ತಿಪಟುಗಳು ಹೇಳುತ್ತಿದ್ದಾರೆ.

ಇದನ್ನೂಓದಿ:  ಲೋಕಾಯುಕ್ತ ಭರ್ಜರಿ ಬೇಟೆ: ಬಿಬಿಎಂಪಿ ಹೆಚ್ಚುವರಿ ನಿರ್ದೇಶಕ ಗಂಗಾಧರಯ್ಯ ಮನೆಯಲ್ಲಿ ಸಿಕ್ತು ವಿದೇಶಿ ಕರೆನ್ಸಿ, ನಗದು, ಚಿನ್ನ!

‘ದೂರು ಸಲ್ಲಿಸಿ 48 ಗಂಟೆ ಕಳೆದರೂ ಇದುವರೆಗೆ ಎಫ್ ಐಆರ್ ದಾಖಲಾಗಿಲ್ಲ. ಲೈಂಗಿಕ ಶೋಷಣೆಯಂಥ ಗಂಭೀರ ಆರೋಪವನ್ನು ಕಡೆಗಣಿಸಲಾಗುತ್ತಿದೆ. ಲೈಂಗಿಕ ಕಿರುಕುಳದ ವಿರುದ್ಧ ಕ್ರಮ ಜರುಗಿಸಿದ ನಂತರವೇ ನಾವು ಪ್ರತಿಭಟನೆ ನಿಲ್ಲಿಸುತ್ತೇವೆ,’ ಎಂದು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಪದಕ ವಿಜೇತೆ ವಿನೇಶ್ ಪೋಗಟ್ ದೃಢವಾಗಿ ಹೇಳುತ್ತಾರೆ.

ಸಮಿತಿಯ ಸದಸ್ಯರೇ ವರದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವರೆಂದರೆ, ಅದನ್ನು ಕುಸ್ತಿಪಟುಗಳು ಹೇಗೆ ಅಂಗೀಕರಿಸಲು ಸಾಧ್ಯ? ವರದಿಯಲ್ಲಿ ದೋಷಗಳಿರುವುದು ಸ್ಪಷ್ಟವಾಗುತ್ತದೆ.

‘ನಾವು ಸಲ್ಲಸಿರುವ ದೂರಿನಲ್ಲಿ ಒಬ್ಬ ಅಪ್ರಾಪ್ತೆಯೂ ಸಂತ್ರಸ್ತೆ ಅನ್ನೋದನ್ನು ವಿವರಿಸಿದ್ದೇವೆ. ಆದಾಗ್ಯೂ ಯಾವುದೇ ಕ್ರಮ ಜರುಗಿಸಿಲ್ಲ. ದೆಹಲಿ ಮಹಿಳಾ ಆಯೋಗ ನಮ್ಮ ಪರ ನಿಂತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ನ್ಯಾಯ ಸಿಗುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ,’ ರಿಯೋ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲ್ಲಿಕ್ ಹೇಳುತ್ತಾರೆ.

ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿ ಇದ್ದರೂ ಕಾಂಗ್ರೆಸ್​ಗೆ ಬೆಂಬಲಿಸಿ ಎಂದ ಹೆಚ್​ಡಿ ಕುಮಾರಸ್ವಾಮಿ ಆಪ್ತ, ಜೆಡಿಎಸ್ ಮುಖಂಡ ಎಸ್ ಎಲ್ ಭೋಜೇಗೌಡ; ವಿಡಿಯೋ ವೈರಲ್  

‘ಎಲ್ಲ ಕುಸ್ತಿಪಟುಗಳು ಮತ್ತು ಮಕ್ಕಳು ಹೇಳುತ್ತಿರುವ ಹಾಗೆ ದೂರು ಸಲ್ಲಿಸಿ ಎರಡು ದಿನ ಕಳೆದರೂ ಪೊಲೀಸ್ ಎಫ್ ಐಆರ್ ದಾಖಲಿಸಿಲ್ಲ. ಅಥ್ಲೀಟ್ ಗಳು ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದಾಗ ಅಧಿಕಾರದಲ್ಲಿರುವವರು ಟ್ವೀಟ್ ಗಳನ್ನು ಮಾಡಿ ಅಭಿನಂದನೆ ಸಲ್ಲಿಸುತ್ತಾರೆ ಆದರೆ ಕ್ರೀಡಾಪಟುಗಳಿಗೆ ಅನ್ಯಾಯವಾದಾಗ ಮೌನವಹಿಸುತ್ತಾರೆ. ನಿಗಾ ಸಮಿತಿಯಲ್ಲಿ ಕೆಲ ಸದಸ್ಯರೇ ವರದಿಯಲ್ಲಿರುವ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ,’ ಎಂದು ಟೋಕಿಯೋ ಒಲಂಪಿಕ್ಸ್ ಪದಕ ವಿಜೇತ ಬಜರಂಗ್ ಪೂನಿಯಾ ಹೇಳುತ್ತಾರೆ.

ನಿಗಾ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಮತ್ತು ಜಂತರ್ ಮಂತರ್ ಬಿಟ್ಟು ಕದಲುವುದಿಲ್ಲ ಎಂದು ಕುಸ್ತಿಪಟುಗಳು ಶಪಥ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ