‘ಮಗನಿಗೆ ಇಂದಲ್ಲ ನಾಳೆ ಯಶಸ್ಸು ಸಿಗುತ್ತದೆ’; ಇಂದ್ರಜಿತ್ ಲಂಕೇಶ್ ಭರವಸೆ
ಇಂದ್ರಿಜಿತ್ ಲಂಕೇಶ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಈಗ ಅವರು ಮಗ ಸಮರ್ಜಿತ್ನ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾಗೆ ‘ಗೌರಿ’ ಟೈಟಲ್ ಇಡಲಾಗಿದೆ. ಈ ಚಿತ್ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಮಗನ ಸಿನಿಮಾ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇಂದ್ರಿಜಿತ್ ಲಂಕೇಶ್ ಅವರು ‘ಗೌರಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಮಗನನ್ನೇ ಪರಿಚಯ ಮಾಡುತ್ತಿದ್ದಾರೆ. ಸಾನ್ಯಾ ಅಯ್ಯರ್ ಈ ಚಿತ್ರಕ್ಕೆ ನಾಯಕಿ. ಮಗನ ನಟನೆ ಬಗ್ಗೆ ಅವರು ಮಾತನಾಡಿದ್ದಾರೆ. ‘ನಿರ್ದೇಶನ ಮಾಡುವಾಗ ಮಗ ಎಂದು ನಾನು ನೋಡಿಲ್ಲ. 6-7 ವರ್ಷ ಕಷ್ಟಪಟ್ಟಿದ್ದಾನೆ. ನಟನೆ ತರಬೇತಿ ಪಡೆದಿದ್ದಾರೆ. ನಾನು ನರ್ವಸ್ ಆಗಿದ್ದೇನೆ. ಇಂದಲ್ಲ ನಾಳೆ ಮಗನಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ’ ಎಂದಿದ್ದಾರೆ ಇಂದ್ರಜಿತ್. ಸುದೀಪ್ ಅವರು ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಈ ಬಗ್ಗೆ ಇಂದ್ರಜಿತ್ಗೆ ಖುಷಿ ಇದೆ. ‘ಸುದೀಪ್ ಅವರು ಅನೇಕರಿಗೆ ಮಾದರಿ. ನನ್ನ ಮಗನ ಬಗ್ಗೆ ವಿಶೇಷ ಪ್ರೀತಿ ಇದೆ. ಅದಕ್ಕೆ ನಾನು ಋಣಿ’ ಎಂದಿದ್ದಾರೆ ಇಂದ್ರಜಿತ್. ಆಗಸ್ಟ್ 15ರಂದು ‘ಗೌರಿ’ ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.