ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್; ಖುಷಿಯಿಂದ ಬೀಗುತ್ತಿರುವ ಉದ್ಯಮಿ ಸ್ಟಾರ್ ಚಂದ್ರು
ನಾಗಮಂಗಲ ತಾಲ್ಲೂಕು ಕನ್ನಾಘಟ್ಟ ಗ್ರಾಮದವರಾಗಿರುವ 58-ವರ್ಷ ವಯಸ್ಸಿನ ಚಂದ್ರು, ತಮ್ಮ ಕುಟುಂಬದವರೆಲ್ಲ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ ಮತ್ತು ತಾನೂ ಒಬ್ಬ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿದರು. ಸಂಸತ್ತಿಗೆ ಆಯ್ಕೆಯಾದರೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಎಲ್ಲ ಕಾರ್ಯಕ್ರಮಗಳ ಸೂಕ್ತ ಅನುಷ್ಠಾನಕ್ಕೆ ಶ್ರಮಿಸುವುದಾಗಿ ಚಂದ್ರು ಹೇಳಿದರು.
ಮಂಡ್ಯ: ಸ್ಥಳೀಯರಿಂದ ಸ್ಟಾರ್ ಚಂದ್ರು (Star Chandru) ಎಂದು ಗುರುತಿಸಲ್ಪಡುವ ಉದ್ಯಮಿ ವೆಂಕಟರಮಣೇಗೌಡ (Venkatramanegowda) ಅವರಿಗೆ ಕಾಂಗ್ರೆಸ್ ಪಕ್ಷವು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದೆ. ನಿನ್ನೆ ಎಐಸಿಸಿ (AICC) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಮಂಡ್ಯ ಸೇರಿದಂತೆ ರಾಜ್ಯ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಟಿಕೆಟ್ ಘೋಷಣೆಯಾದ ಬಳಿಕ ಸಂತಸದಿಂದ ಬೀಗುತ್ತಿದ್ದ ಚಂದ್ರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಚಂದ್ರಶೇಖರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಮಂಡ್ಯದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು. ಶಿವರಾತ್ರಿಯ ಶುಭದಿನದಲ್ಲಿ ಟಿಕೆಟ್ ಸಿಕ್ಕಿರುವುದು ತನ್ನ ಅದೃಷ್ಟವೆಂದು ಹೇಳಿದ ಚಂದ್ರು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮವಹಿಸಿ ಕೆಲಸ ಮಾಡುವುದಾಗಿ ಹೇಳಿದರು. ನಾಗಮಂಗಲ ತಾಲ್ಲೂಕು ಕನ್ನಾಘಟ್ಟ ಗ್ರಾಮದವರಾಗಿರುವ 58-ವರ್ಷ ವಯಸ್ಸಿನ ಚಂದ್ರು, ತಮ್ಮ ಕುಟುಂಬದವರೆಲ್ಲ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ ಮತ್ತು ತಾನೂ ಒಬ್ಬ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿದರು. ಸಂಸತ್ತಿಗೆ ಆಯ್ಕೆಯಾದರೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಎಲ್ಲ ಕಾರ್ಯಕ್ರಮಗಳ ಸೂಕ್ತ ಅನುಷ್ಠಾನಕ್ಕೆ ಶ್ರಮಿಸುವುದಾಗಿ ಚಂದ್ರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Mallikarjun Kharge: ಲೋಕಸಭಾ ಚುನಾವಣೆ ನಿಮಗೆ ಮತ ಚಲಾಯಿಸಲಿರುವ ಕೊನೇ ಅವಕಾಶ, ಆಮೇಲೆ ಪ್ರಜಾಪ್ರಭುತ್ವವಿರಲ್ಲ: ಖರ್ಗೆ