ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿಸಲಿರುವ ಬಾಂಬ್ಗಾಗಿ ಸೋಮವಾರದವರೆಗೆ ಕಾಯಬೇಕು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ರಮೇಶ ಜಾರಕಿಹೊಳಿ ನಡುವೆ ಎಣ್ಣೆ-ಸೀಗೆಕಾಯಿ ಸಂಬಂಧ. ಕಾಂಗ್ರೆಸ್ ಪಕ್ಷದ ಒಬ್ಬ ಮಹಾನಾಯಕನ ಷಡ್ಯಂತ್ರ ರಮೇಶ್ ಹೇಳುತ್ತಿರುವುದು ಕನಕಪುರದ ಬಂಡೆ ಕುರಿತಾಗಿಯೇ ಎಂಬ ಸಂಶಯ ಹುಟ್ಟಿಕೊಂಡಿದೆ.
ಬೆಳಗಾವಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಮಂತ್ರಿಯಾಗಿ ನಂತರ ಒಂದು ಅಶ್ಲೀಲ ಸಿಡಿ ಪ್ರಕರಣದಲ್ಲಿ ಹೆಸರು, ಖ್ಯಾತಿಯ ಜೊತೆ ಮಂತ್ರಿ ಪದವಿಯನ್ನೂ ಕಳೆದುಕೊಂಡ ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿ ಮತ್ತೇ ಸುದ್ದಿಯಲ್ಲಿದ್ದಾರೆ. ಉಡುಪಿಯಲ್ಲಿ ಅತ್ಮಹತ್ಯೆ ಮೂಲಕ ಸಾವನ್ನಪ್ಪಿದ ಬೆಳಗಾವಿಯ ಸಂತೋಷ ಪಾಟೀಲ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಒಂದು ಸ್ಫೋಟಕ ಮಾಹಿತಿ ನೀಡುವುದಾಗಿ ಅವರು ಗುರುವಾರ ಬೆಳಗಾವಿಯಲ್ಲಿ ಹೇಳಿದರು. ಸಂತೋಷ ಪರಿಚಯ ರಮೇಶ್ ಅವರಿಗೆ ಮೊದಲಿನಿಂದಲೂ ಇತ್ತೆನ್ನುವುದು ಮಾಜಿ ಸಚಿವರ ಮಾತಿನಿಂದ ಗೊತ್ತಾಗುತ್ತದೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗಿನಿಂದ ಅವರನ್ನು ಬಲ್ಲೆ ಎಂದು ಅವರು ಹೇಳುತ್ತಾರೆ. ಸೂತಕದ ಮನೆಯ ಬಗ್ಗೆ ಹೆಚ್ಚು ಮಾತಾಡಬಾರದು ಅನ್ನುವ ಅವರು ಸಂತೋಷರ ಪತ್ನಿ ಮತ್ತು ಸಹೋದರಿಗೆ ಸರ್ಕಾರದಿಂದ ನೆರವು ಒದಗಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಓಕೆ, ಅವರ ಹೇಳುತ್ತಿರುವ ಸ್ಫೋಟಕ ವಿಷಯಕ್ಕೆ ಬರೋಣ. ತಾನು ಮತ್ತು ಕೆ ಎಸ್ ಈಶ್ವರಪ್ಪ ಒಂದು ಷಡ್ಯಂತ್ರಕ್ಕೆ ಬಲಿಯಾಗಿರುವುದಾಗಿಯೂ ಮತ್ತು ಎರಡರ ಕರ್ತೃ ಒಬ್ಬರೇ ಆಗಿದ್ದಾರೆ ಎನ್ನುವ ರಮೇಶ್, ಆ ‘ಕರ್ತೃನ’ ಹೆಸರನ್ನು ಬಹಿರಂಗಗೊಳಿಸದೆ ಸೋಮವಾರ ಒಂದು ಪತ್ರಿಕಾಗೋಷ್ಟಿ ಕರೆದು ಎಲ್ಲವನ್ನೂ ಖುಲಾಸೆ ಮಾಡುವುದಾಗಿ ಹೇಳುತ್ತಾರೆ. ಗುರುವಾರ ಮಧ್ಯಾಹ್ನ ಮಾಧ್ಯಮದವರೊಂದಿಗೆ ಮಾತಾಡಿದ ಅವರು ಈಶ್ವರಪ್ಪ ಯಾವ ಕಾರಣಕ್ಕೂ ರಾಜೀನಾಮೆ ನೀಡಬಾರದು ಅಂತ ಹೇಳುತ್ತಾರೆ.
ಅದರೆ, ಸಾಯಂಕಾಲದ ಸಮಯ ಈಶ್ವರಪ್ಪ ಶುಕ್ರವಾರ ಸಾಯಂಕಾಲ ರಾಜೀನಾಮೆ ನೀಡುವ ಘೋಷಣೆಯನ್ನು ಮಾಡಿಬಿಟ್ಟರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ರಮೇಶ ಜಾರಕಿಹೊಳಿ ನಡುವೆ ಎಣ್ಣೆ-ಸೀಗೆಕಾಯಿ ಸಂಬಂಧ. ಕಾಂಗ್ರೆಸ್ ಪಕ್ಷದ ಒಬ್ಬ ಮಹಾನಾಯಕನ ಷಡ್ಯಂತ್ರ ರಮೇಶ್ ಹೇಳುತ್ತಿರುವುದು ಕನಕಪುರದ ಬಂಡೆ ಕುರಿತಾಗಿಯೇ ಎಂಬ ಸಂಶಯ ಹುಟ್ಟಿಕೊಂಡಿದೆ.
ಅವರು ಹೆಸರು ಖುಲಾಸೆ ಮಾಡಲು 3-4 ದಿನಗಳ ಸಮಯ ಯಾಕೆ ತೆಗದುಕೊಳ್ಳುತ್ತಿದ್ದಾರೆ ಅಂತ ಸುಲಭಕ್ಕೆ ಅರ್ಥವಾಗದು. ಪಕ್ಷದ ಹೈಕಮಾಂಡ್, ರಾಜ್ಯದ ಬಿಜೆಪಿ ನಾಯಕರ ಜೊತೆ ಮಾತಾಡಿ ಅವರ ಅನುಮತಿ ಪಡೆದುಕೊಳ್ಳಬೇಕಿದೆ ಎಂದು ರಮೇಶ್ ಹೇಳುತ್ತಾರೆ.
ಅವರು ಸಿಡಿಸಲಿರುವ ಬಾಂಬ್ ಗೋಸ್ಕರ ಸೋಮವಾದವರೆಗೆ ಕಾಯಲೇಬೇಕು.
ಇದನ್ನೂ ಓದಿ: KS Eshwarappa Resigns: ಶುಕ್ರವಾರ ಸಂಜೆ ರಾಜೀನಾಮೆ ನೀಡುವೆ -ಸಚಿವ ಕೆ ಎಸ್ ಈಶ್ವರಪ್ಪ ಘೋಷಣೆ