ಮಹಿಳೆಯರು ಸುರಕ್ಷತೆ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ, ಯುವತಿಯರಿಗಾಗಿ ಟೈಲ್ಸ್ ಬ್ರೇಕಿಂಗ್ ವಿಧಾನ ತರಬೇತಿ

|

Updated on: Mar 10, 2024 | 7:42 PM

ನಗರದಲ್ಲಿ ಮಹಿಳೆಯರು ಸುರಕ್ಷತಾ ಕ್ರಮಗಳನ್ನ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಕರಾಟೆ ಶಾಲೆ ಎನ್ನಿಸಿಕೊಂಡಿರುವ ಓಎಸ್ ಕೆ ಫೆಡೇರೇಷನ್ ಆಫ್ ಇಂಡಿಯಾ 50ಕ್ಕೂ ಹೆಚ್ಚು ಮಹಿಳೆಯರಿಗೆ ಕರಾಟೆ (Karate) ಮೂಲಕ ಸುರಕ್ಷತಾ ಆಯಾಮಗಳ ತರಬೇತಿ ನೀಡಿದೆ. ಅಂತಾರಾಷ್ಟ್ರೀಯ ಮಹಿಳಾ (Women) ದಿನ  (International Women’s Day) ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಈ ತರಬೇತಿ ಏರ್ಪಡಿಸಿದ್ದು ವಿಶೇಷವಾಗಿತ್ತು. ಸ್ವರಕ್ಷಣೆಯಲ್ಲಿ ಈ ಕ್ರಮಗಳನ್ನ ಅನುಸರಿಸಿ ಅಪಾಯದಿಂದ ಪಾರಾಗಬಹುದಾಗಿದೆ. ಇದೇ ವೇಳೆ ಕರಾಟೆಯಲ್ಲಿ ಕಷ್ಟಕರ ಆಯಾಮವಾಗಿರುವ ಟೈಲ್ಸ್ […]

ನಗರದಲ್ಲಿ ಮಹಿಳೆಯರು ಸುರಕ್ಷತಾ ಕ್ರಮಗಳನ್ನ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಕರಾಟೆ ಶಾಲೆ ಎನ್ನಿಸಿಕೊಂಡಿರುವ ಓಎಸ್ ಕೆ ಫೆಡೇರೇಷನ್ ಆಫ್ ಇಂಡಿಯಾ 50ಕ್ಕೂ ಹೆಚ್ಚು ಮಹಿಳೆಯರಿಗೆ ಕರಾಟೆ (Karate) ಮೂಲಕ ಸುರಕ್ಷತಾ ಆಯಾಮಗಳ ತರಬೇತಿ ನೀಡಿದೆ. ಅಂತಾರಾಷ್ಟ್ರೀಯ ಮಹಿಳಾ (Women) ದಿನ  (International Women’s Day) ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಈ ತರಬೇತಿ ಏರ್ಪಡಿಸಿದ್ದು ವಿಶೇಷವಾಗಿತ್ತು.

ಸ್ವರಕ್ಷಣೆಯಲ್ಲಿ ಈ ಕ್ರಮಗಳನ್ನ ಅನುಸರಿಸಿ ಅಪಾಯದಿಂದ ಪಾರಾಗಬಹುದಾಗಿದೆ. ಇದೇ ವೇಳೆ ಕರಾಟೆಯಲ್ಲಿ ಕಷ್ಟಕರ ಆಯಾಮವಾಗಿರುವ ಟೈಲ್ಸ್ ಬ್ರೇಕಿಂಗ್ ವಿಧಾನವನ್ನ ಕೂಡ ತಿಳಿಸಿಕೊಡಲಾಯಿತು. ಈ ಕ್ರಮಗಳನ್ನ ಅನುಸರಿಸುವ ಬಗೆಯನ್ನ ತಿಳಿದುಕೊಂಡ ಮಹಿಳೆಯರು ಅವರ ಸಂತಸವನ್ನು ಹಂಚಿಕೊಂಡರು. ಓಎಸ್ ಕೆ ಫೆಡೇರೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದ ಸುರೇಶ್ ಕೆಣಿಚಿರಾ ಮಾತನಾಡಿ ಪ್ರತಿ ಶಾಲಾಮಟ್ಟದಲ್ಲಿ ಕರಾಟೆಯನ್ನ ಸೇರಿಸಬೇಕೆಂದು ತಿಳಿಸಿದರು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ