SRH vs DC: ಡೆಲ್ಲಿ ವಿರುದ್ಧ ಅಬ್ಬರಿಸಿದ ಅಭಿಷೇಕ್; ಸ್ಫೋಟಕ ಅರ್ಧಶತಕ

Updated on: Apr 21, 2026 | 10:52 PM

Abhishek Sharma's Blazing Fifty: ಐಪಿಎಲ್ 2026 ರ 31ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೈದರಾಬಾದ್‌ನಲ್ಲಿ ಮುಖಾಮುಖಿಯಾಗಿವೆ. ಬೌಲಿಂಗ್ ಸ್ನೇಹಿ ಪಿಚ್​ನಲ್ಲಿ ಆರಂಭಿಕ ಅಭಿಷೇಕ್ ಶರ್ಮಾ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು. ಟ್ರಾವಿಸ್ ಹೆಡ್ ಅವರೊಂದಿಗೆ 97 ರನ್‌ಗಳ ಜೊತೆಯಾಟದ ಮೂಲಕ ಸನ್‌ರೈಸರ್ಸ್‌ಗೆ ಉತ್ತಮ ಅಡಿಪಾಯ ಹಾಕಿದರು, ಪಂದ್ಯದ ಗತಿಯನ್ನು ಬದಲಾಯಿಸಿದರು.

ಐಪಿಎಲ್ 2026 ರ 31 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಆರಂಭಿಕ ಅಭಿಷೇಕ್ ಶರ್ಮಾ ಮತ್ತೆ ನೆರವಾಗಿದ್ದಾರೆ. ಬೌಲಿಂಗ್ ಸ್ನೇಹಿ ಪಿಚ್​ನಲ್ಲಿ ನಿಧಾನಗತಿಯ ಆರಂಭ ಪಡೆದುಕೊಂಡ ಅಭಿಷೇಕ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಈ ಪಂದ್ಯದಲ್ಲಿ ಸನ್‌ರೈಸರ್ಸ್​ಗೆ ಸ್ಫೋಟಕ ಆರಂಭ ಸಿಗಲಿಲ್ಲ. ಮೊದಲ 6 ಓವರ್​ಗಳಲ್ಲಿ ಸನ್‌ರೈಸರ್ಸ್ ತಂಡ 67 ರನ್ ಮಾತ್ರ ಕಲೆಹಾಕಿತು. ಆದರೆ ತಂಡ ಒಂದೇ ಒಂದು ವಿಕೆಟ್ ಕಳೆದುಕೊಂಡಿರಲಿಲ್ಲ. ಆದಾಗ್ಯೂ ಇಲ್ಲಿಂದ ಗೇರ್ ಬದಲಿಸಿದ ಅಭಿಷೇಕ್ 25 ಎಸೆತಗಳಲ್ಲಿ ಈ ಆವೃತ್ತಿಯ ಮೂರನೇ ಅರ್ಧಶತಕವನ್ನು ಪೂರೈಸಿದರು. ಇದರ ಜೊತೆಗೆ ಹೆಡ್ ಅವರೊಂದಿಗೆ ಮೊದಲ ವಿಕೆಟ್​ಗೆ 97 ರನ್​ಗಳ ಜೊತೆಯಾಟವನ್ನು ರಚಿಸಿದರು.

Published on: Apr 21, 2026 08:22 PM
Follow Us
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More