AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುಮ್ನೆ ಹೋಗಲೋ’; ಕೆಣಕಿದ ಸಿಎಸ್​​ಕೆ ಆಟಗಾರನಿಗೆ ಮೈಚಳಿ ಬಿಡಿಸಿದ ತಿಲಕ್ ವರ್ಮ

‘ಸುಮ್ನೆ ಹೋಗಲೋ’; ಕೆಣಕಿದ ಸಿಎಸ್​​ಕೆ ಆಟಗಾರನಿಗೆ ಮೈಚಳಿ ಬಿಡಿಸಿದ ತಿಲಕ್ ವರ್ಮ

ರಾಜೇಶ್ ದುಗ್ಗುಮನೆ
|

Updated on:Apr 24, 2026 | 8:50 AM

Share

ಕ್ರಿಕೆಟ್ ಮ್ಯಾಚ್​​ಗಳಲ್ಲಿ ಕಿರಿಕ್​​ಗಳು ಸಾಮಾನ್ಯ. ಈಗ ಮುಂಬೈ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಕಿರಿಕ್ ಆಗಿದೆ. ಜೇಮೀ ಓವರ್​​ಟನ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ತಿಲಕ್ ವರ್ಮ ಮಧ್ಯೆ ಜಗಳ ನಡೆದಿದೆ. ಆಗ ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆಸಿಕೊಂಡರು. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಕಿರಕ್ ಆಗಿದೆ. ಸಿಎಸ್​​ಕೆ ಬೌಲರ್ ಆಲ್ ರೌಂಡರ್ ಜೇಮೀ ಓವರ್​​ಟನ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ತಿಲಕ್ ವರ್ಮ ಮಧ್ಯೆ ಕಿರಿಕ್ ನಡೆದಿದೆ. ತಿಲಕ್ ವರ್ಮ ಅವರು ಎರಡು ರನ್ ಎಂದು ಕೂಗುತ್ತಾ ಒಂದೇ ರನ್ ತೆಗೆದರು. ಇದರಿಂದ ಸುಖಾಸುಮ್ಮನೆ ಸಿಟ್ಟಾದ ಓವರ್​​ಟನ್​ ಅವರು, ಏಕೆ ಎರಡು ರನ್ ಓಡಿಲ್ಲ ಎಂದು ಕೇಳಿದರು. ಆಗ ತಿಲಕ್ ವರ್ಮ ಫೀಲ್ಡರ್ ಅಲ್ಲೇ ಇದ್ದಿದ್ದು ಕಾಣಿಸಿಲ್ಲವೇ ಎಂದು ಕೇಳಿದರು. ಫೀಲ್ಡರ್ ದೂರ ಇದ್ದ ಓಡಬಹುದಿತ್ತು ಎಂದರು ಓವರ್​​ಟನ್​. ಆ ಬಳಿಕ ಸುಮ್ಮನೆ ಹೋಗುವಂತೆ ಒಬ್ಬರಿಗೊಬ್ಬರು ಹೇಳಿಕೊಂಡರು. ಆ ಸಂದರ್ಭದ ವಿಡಿಯೋ ಮೇಲಿದೆ. ತಿಲಕ್ ವರ್ಮ ಅವರ ಖಡಕ್ ತಿರುಗೇಟಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

 

Published on: Apr 24, 2026 08:47 AM
Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More