DK Shivakumar DA Case; ಸರ್ಕಾರದ ನಿರ್ಧಾರ ಹಾಗಿರಲಿ, ಕೋರ್ಟ್ ತೀರ್ಮಾನ ಅಂತಿಮವಾಗಲಿದೆ: ಬಿಎಸ್ ಯಡಿಯೂರಪ್ಪ

|

Updated on: Nov 24, 2023 | 2:07 PM

ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಹಳ ಸೌಮ್ಯ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದು ಆಶ್ವರ್ಯ ಹುಟ್ಟಿಸುತ್ತದೆ. ಯಾಕೆಂದರೆ, ಸಿದ್ದರಾಮಯ್ಯ ಸರ್ಕಾರ, ಯಡಿಯೂರಪ್ಪನವರ ನಿರ್ಧಾರವನ್ನು ತಪ್ಪೆಂದು ಪ್ರೊಜೆಕ್ಟ್ ಮಾಡುವ ಪ್ರಯತ್ನದಲ್ಲಿದೆ. ಪ್ರಕರಣ ಕೋರ್ಟ್ ನಲ್ಲಿರುವವುದರಿಂದ ಹಿರಿಯ ಮುತ್ಸದ್ದಿ ಯಡಿಯೂರಪ್ಪ ಹೀಗೆ ಮಾತಾಡಿರಬಹುದು.

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಶಾಸಕರಾಗಿದ್ದ ಡಿಕೆ ಶಿವಕುಮಾರ್ (DK Shivakumar) ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿದ್ದು, ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ (BS Yediyurappa). ಹಾಗಾಗಿ, ಈಗಿನ ಕಾಂಗ್ರೆಸ್ ಸರ್ಕಾರ (Congress government) ಸಿಬಿಐ ತನಿಖೆಯ ಆದೇಶ ಹಿಂಪಡೆದಿರುವ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯ ಹೆಚ್ಚು ಮಹತ್ವದೆನಿಸುತ್ತದೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಯಡಿಯೂರಪ್ಪನರೊಂದಿಗೆ ಮಾತಾಡಿದಾಗ ಬಹಳ ಅವರು ಅಳೆದು ತೂಗಿ ತಮ್ಮ ಪ್ರತಿಕ್ರಿಯೆ ನೀಡಿದರು. ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ಅಂತಿಮ ನಿರ್ಣಾಯ ತೆಗೆದುಕೊಳ್ಳೋದು ನ್ಯಾಯಾಲಯ, ಸರ್ಕಾರದ ನಿರ್ಧಾರವಂತೂ ಕಾನೂನು ಬಾಹಿರ, ನ್ಯಾಯಾಲಯದ ತೀರ್ಪಿಗಾಗಿ ಕಾದು ನೋಡೋಣ ಎಂದು ಅವರು ಹೇಳಿದರು. ಶಿವಕುಮಾರ್ ಅವರನ್ನು ಸರ್ಕಾರ ರಕ್ಷಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಅದರ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on