Daily Devotional: ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ?
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ? ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮಾನವನ ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ದಾರಿದ್ರ್ಯ ಎಂಬ ಪದವನ್ನು ಬಳಸುತ್ತೇವೆ. ಎಷ್ಟೇ ಕಷ್ಟಪಟ್ಟರೂ ಪ್ರಯೋಜನವಿಲ್ಲದೆ ಇರುವುದು, ಉದ್ಯೋಗ ಸಿಗದಿರುವುದು, ಅಥವಾ ಶಿಕ್ಷಣದಲ್ಲಿ ಯಶಸ್ಸು ಕಾಣದಿರುವುದು ದಾರಿದ್ರ್ಯದ ಲಕ್ಷಣಗಳು. ಈ ದಾರಿದ್ರ್ಯಕ್ಕೆ ಅನೇಕ ಕಾರಣಗಳಲ್ಲಿ ಕೋಪವೂ ಒಂದು ಪ್ರಮುಖ ಕಾರಣವಾಗಿದೆ. ಗ್ರಹದೋಷ, ಪೂರ್ವ ಜನ್ಮದ ದೋಷಗಳು ಅಥವಾ ಪಿತೃ ದೋಷಗಳಷ್ಟೇ ಅಲ್ಲದೆ, ಕೋಪವು ವ್ಯಕ್ತಿಯನ್ನು ಅದೋಗತಿಗೆ ಕೊಂಡೊಯ್ಯುತ್ತದೆ.
ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ? ಈ ಪ್ರಶ್ನೆಗೆ ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮಾನವನ ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ದಾರಿದ್ರ್ಯ ಎಂಬ ಪದವನ್ನು ಬಳಸುತ್ತೇವೆ. ಎಷ್ಟೇ ಕಷ್ಟಪಟ್ಟರೂ ಪ್ರಯೋಜನವಿಲ್ಲದೆ ಇರುವುದು, ಉದ್ಯೋಗ ಸಿಗದಿರುವುದು, ಅಥವಾ ಶಿಕ್ಷಣದಲ್ಲಿ ಯಶಸ್ಸು ಕಾಣದಿರುವುದು ದಾರಿದ್ರ್ಯದ ಲಕ್ಷಣಗಳು. ಈ ದಾರಿದ್ರ್ಯಕ್ಕೆ ಅನೇಕ ಕಾರಣಗಳಲ್ಲಿ ಕೋಪವೂ ಒಂದು ಪ್ರಮುಖ ಕಾರಣವಾಗಿದೆ. ಗ್ರಹದೋಷ, ಪೂರ್ವ ಜನ್ಮದ ದೋಷಗಳು ಅಥವಾ ಪಿತೃ ದೋಷಗಳಷ್ಟೇ ಅಲ್ಲದೆ, ಕೋಪವು ವ್ಯಕ್ತಿಯನ್ನು ಅದೋಗತಿಗೆ ಕೊಂಡೊಯ್ಯುತ್ತದೆ.
ಒಬ್ಬ ಕಂಪನಿಯ ಮಾಲೀಕನು ತನ್ನ ನೌಕರರ ಮೇಲೆ ಅತಿಯಾದ ಕೋಪ ಮಾಡಿಕೊಂಡರೆ, ನೌಕರರು ಆ ಸಂಸ್ಥೆಯನ್ನು ತೊರೆಯುತ್ತಾರೆ. ಇದರಿಂದ ಕಂಪನಿಯು ನಷ್ಟ ಅನುಭವಿಸಿ ಮಾಲೀಕನು ದಾರಿದ್ರ್ಯಕ್ಕೆ ತುತ್ತಾಗುತ್ತಾನೆ. ಕೋಪದಲ್ಲಿ ಆವೇಶಭರಿತ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.ಕಂಸನ ಅಹಂಕಾರ ಮತ್ತು ರಾವಣನ ಕೋಪ ಇಡೀ ಕುಟುಂಬದ ನಾಶಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ಪುರಾಣಗಳಿಂದ ತಿಳಿಯಬಹುದು. ಕೋಪವು ಧನಹಾನಿ, ಮಾನಹಾನಿ ಮತ್ತು ಪ್ರಾಣಹಾನಿಗೆ ಕಾರಣವಾಗುತ್ತದೆ. ಯಾವುದೇ ಹೋಮ, ಪೂಜೆ, ವ್ರತಗಳನ್ನು ಕೋಪದಿಂದ ಮಾಡಿದರೆ ಫಲ ಸಿಗುವುದಿಲ್ಲ. ಕೋಪವನ್ನು ಬಿಟ್ಟರೆ ಕುಬೇರನಾಗಬಹುದು ಎಂದು ಗುರೂಜಿ ಹೇಳಿದ್ದಾರೆ.
