CM Reviews Expressway: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ವೀಕ್ಷಣೆಗೆ ದುಂದುವೆಚ್ಚ ಯಾಕೆ ಮುಖ್ಯಮಂತ್ರಿಯವರೇ?

|

Updated on: Jul 29, 2023 | 1:31 PM

ಅಷ್ಟೆಲ್ಲ ವಾಹನಗಳು ಸಿಎಂ ಹಿಂದೆ ಹೋಗುವ ಅವಶ್ಯಕತೆಯಿದೆಯೇ? ಸರ್ಕಾರಕ್ಕೆ ಮಿತವ್ಯಯ ಸಾಧಿಸುವ ಯೋಚನೆ ಇಲ್ಲವೇ ಎಂಬ ಗೊಂದಲ ಮೂಡುತ್ತದೆ.

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಅದು ಲೋಕಾರ್ಪಣೆಗೊಳ್ಳುವ ಮೊದಲಿಂದ ವಿವಾದಕ್ಕೆ ಸಿಲುಕಿದೆ. ನಿರ್ಮಾಣ ಹಂತದಲ್ಲೂ ರಸ್ತೆ ಅವೈಜ್ಞಾನಿಕವಾಗಿದೆ (unscientific) ಎಂಬ ದೂರಗಳು ಪ್ರತಿನಿತ್ಯ ಕೇಳಿಬರುತ್ತಿದ್ದವು. ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ಸಿದ್ದರಾಮಯ್ಯ (Siddaramaiah) ಸರ್ಕಾರವನ್ನು ಕಳವಳಕ್ಕೀಡು ಮಾಡಿದೆ. ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಹೆಚ್ಚುಕಡಿಮೆ ಪ್ರತಿದಿನ ದಶಪಥ ಹೆದ್ದಾರಿ ಪರಿಶೀಲನೆಗೆ ತೆರಳುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಹೆದ್ದಾರಿ ವೀಕ್ಷಣೆಗೆ ತೆರಳಿದರು. ಅವರೊಂದಿಗೆ ಮಂಡ್ಯ ಜಲ್ಲೆ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಸಹ ಇದ್ದರು. ಮುಖ್ಯಮಂತ್ರಿ ತಮ್ಮ ನಿವಾಸದಿಂದ ಹೊರಬೀಳುವುದನ್ನು ವಿಡಿಯೋದಲ್ಲಿ ನೋಡಬಹುದು. ಅದು ಸರಿ, ಅವರ ಕಾರನ್ನು ಎಷ್ಟು ವಾಹನಗಳು ಹಿಂಬಾಲಿಸುತ್ತವೆ ಅನ್ನೋದನ್ನು ಗಮನಿಸಿ. ಅಷ್ಟು ವಾಹನಗಳು ಸಿಎಂ ಹಿಂದೆ ಹೋಗುವ ಅವಶ್ಯಕತೆಯಿದೆಯೇ? ಸರ್ಕಾರಕ್ಕೆ ಮಿತವ್ಯಯ ಸಾಧಿಸುವ ಯೋಚನೆ ಇಲ್ಲವೇ ಎಂಬ ಗೊಂದಲ ಮೂಡುತ್ತದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರ ಬೃಹತ್ 52,000 ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಅದು ಸರ್ಕಾರದ ಮೇಲೆ ಹೆಚ್ಚುವರಿ ಹೊರೆ ತಾನೆ? ಅದನ್ನು ಸರಿದೂಗಿಸಲು ಯಾವೆಲ್ಲ ಬಾಬತ್ತಿನಲ್ಲಿ ಉಳಿಸಲು ಸಾಧ್ಯವೋ ಅದನ್ನು ಸಿದ್ದರಾಮಯ್ಯ ಮತ್ತವರ ಸಚಿವರು ಮಾಡಬೇಕು. ಪೆಟ್ರೋಲಿಯಂ ಉತ್ನನ್ನಗಳ ಬೆಲೆಗಳು ಅವರಿಗೆ ಗೊತ್ತಿಲ್ಲದಿಲ್ಲ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 29, 2023 12:56 PM