ಮಿಸ್​ ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋ ರಿಲೀಸ್ ಮಾಡಿದ ಇಸ್ರೋ

ಮಿಸ್​ ಮಾಡದೆ ನೋಡಿ! ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋ ರಿಲೀಸ್ ಮಾಡಿದ ಇಸ್ರೋ

ಸಾಧು ಶ್ರೀನಾಥ್​
|

Updated on:Aug 25, 2023 | 12:06 PM

Pragyan rover landing: ತಾಜಾ ಆಗಿ ವಿಕ್ರಮ್ ಸೆರೆ ಹಿಡಿದ ಅದ್ಭುತ ವಿಡಿಯೋ ಇಲ್ಲಿದೆ. ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋವೊಂದನ್ನು ಇಸ್ರೋ (ISRO) ಇದೀಗತಾನೆ ರಿಲೀಸ್ ಮಾಡಿದೆ.. ಲ್ಯಾಂಡರ್ ಕೆಳಗಿಳಿಯುವ ವೇಗಕ್ಕೆ ತಕ್ಕಂತೆ ವಿಡಿಯೋವನ್ನು ಸೆರೆಹಿಡಿದಿದೆ. ಈ ವೇಳೆ ರೋವರ್‌ ಮೇಲ್ಮೈನ ಒಂದು ಭಾಗ ಮತ್ತು ಚಂದ್ರನ ಮೇಲಿರುವ ಗುಳಿಗಳು ಕ್ಯಾಮರಾ ಕಣ್ಣಿಗೆ ಗೋಚರಿಸಿವೆ

ತಾಜಾ ಆಗಿ ವಿಕ್ರಮ್ ಸೆರೆ ಹಿಡಿದ ಅದ್ಭುತ ವಿಡಿಯೋ ಇಲ್ಲಿದೆ. ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ (Pragyan rover landing) ಸೆರೆಹಿಡಿದ್ದ ವಿಡಿಯೋವೊಂದನ್ನು ಇಸ್ರೋ (ISRO) ಇದೀಗತಾನೆ ರಿಲೀಸ್ ಮಾಡಿದೆ.. ಲ್ಯಾಂಡರ್ ಕೆಳಗಿಳಿಯುವ ವೇಗಕ್ಕೆ ತಕ್ಕಂತೆ ವಿಡಿಯೋವನ್ನು ಸೆರೆಹಿಡಿದಿದೆ. ಈ ವೇಳೆ ರೋವರ್‌ ಮೇಲ್ಮೈನ ಒಂದು ಭಾಗ ಮತ್ತು ಚಂದ್ರನ ಮೇಲಿರುವ ಗುಳಿಗಳು ಕ್ಯಾಮರಾ ಕಣ್ಣಿಗೆ ಗೋಚರಿಸಿದೆ (Chandrayaan 3).

ಚಂದ್ರನ ಮೇಲೆ ಪ್ರಜ್ಞಾನ್ ರೋವರ್ ಓಡಾಟ: ಚಂದ್ರನ ಮೇಲೆ ಚಂದ್ರಯಾನ 3 ಪ್ರಜ್ಞಾನ್ ರೋವರ್‌ನ ರಥಯಾತ್ರೆ ಆರಂಭವಾಗಿದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ 3 ಗಂಟೆ ಬಳಿಕ ಪ್ರಜ್ಞಾನ್ ರೋವರ್ ಹೊರಬಂದಿದೆ. ಗುರುವಾರ ರಾತ್ರಿಯಿಂದಲೇ ಲ್ಯಾಂಡರ್ ಮತ್ತು ರೋವರ್ ಅಧ್ಯಯನ ಆರಂಭಿಸಿವೆ. 7 ಉಪಕರಣಗಳು, 7 ವಿಷಯಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿವೆ.

‘ರೋವರ್‌ನ ಎಲ್ಲಾ ಸಿಸ್ಟಂಗಳು ನಾರ್ಮಲ್’: ಪ್ರಗ್ಯಾನ್ ರೋವರ್‌ಗೆ ಚಕ್ರಗಳನ್ನು ಅಳವಡಿಸಲಾಗಿದ್ದು, ರ‍್ಯಾಂಪ್‌ ಮೂಲಕ ನಿಧಾನವಾಗಿ ರೋವರ್ ಕೆಳಗೆ ಇಳಿದಿದೆ. ಮೊದಲಿಗೆ ರೋವರ್‌ನ ಸೋಲಾರ್ ಫಲಕಗಳು ತೆರೆದುಕೊಂಡಿವೆ. ರೋವರ್ ಕಾರ್ಯಚಟುವಟಿಕೆ ಕುರಿತು ಇಸ್ರೋ ಟ್ವೀಟ್ ಮಾಡಿ ಅಪ್‌ಡೇಟ್ ನೀಡಿದೆ. ಪೂರ್ವನಿಗದಿಯಂತೆ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ. ವಿಕ್ರಮ್ ರೋವರ್‌ನ ಎಲ್ಲಾ ಸಿಸ್ಟಂಗಳು ಯಥಾ ಸ್ಥಿತಿಯಲ್ಲಿವೆ ಅಂತೇಳಿದೆ.

ವಿಕ್ರಂ ಲ್ಯಾಂಡರ್‌ನಿಂದ ಬೇರ್ಪಟ್ಟ ಪ್ರಜ್ಞಾನ್ ರೋವರ್: ಲ್ಯಾಂಡರ್ ಪೇಲೋಡ್ಸ್ ILSA, ರಂಭಾ ಮತ್ತು ಚಸ್ತೆ ಕಾರ್ಯಾರಂಭ ಮಾಡಿವೆ. ರೋವರ್ ಓಡಾಟ ಕೂಡ ಪ್ರಾರಂಭವಾಗಿದೆ. ಪ್ರಪೊಲ್ಷನ್ ಮಾಡ್ಯೂಲ್‌ನ ಶೇಪ್‌ ಪೇಲೋಡ್ ಕಾರ್ಯಾರಂಭ ಮಾಡಿದೆ ಅಂತಾ ಟ್ವೀಟ್ ಮೂಲಕ ಇಸ್ರೋ ಮಾಹಿತಿ ನೀಡಿದೆ. ವಿಕ್ರಮ್ ಲ್ಯಾಂಡರ್‌ನಿಂದ ರೋವರ್ ಕೆಳಗಿಳಿದು ಸರಾಗವಾಗಿ ಓಡಾಟ ಆರಂಭವಿಸಿದೆ. ಇದು ಖಚಿತವಾಗುತ್ತಿದ್ದಂತೆಯೇ ವಿಕ್ರಂ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಅಧಿಕೃತವಾಗಿ ಬೇರ್ಪಡೆಯಾಗಿದೆ.

Published on: Aug 25, 2023 12:00 PM