AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಕ್ರೀಡೆಗಳ ಭವಿಷ್ಯಕ್ಕೆ ಅಜೆಂಡಾ ರೂಪಿಸಿದ ಐಎಸ್​ಎಸ್​ಒ ಸಮಿಟ್ 2025

ಶಾಲಾ ಕ್ರೀಡೆಗಳ ಭವಿಷ್ಯಕ್ಕೆ ಅಜೆಂಡಾ ರೂಪಿಸಿದ ಐಎಸ್​ಎಸ್​ಒ ಸಮಿಟ್ 2025

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 14, 2025 | 5:57 PM

Share

ISSO Summit and Awards 2025: ಇಂಟರ್​ನ್ಯಾಷನಲ್ ಸ್ಕೂಲ್ ಸ್ಪೋರ್ಟ್ಸ್ ಆರ್ಗನೈಸೇಶನ್ (ಐಎಸ್​ಎಸ್​ಒ) ಮೊದಲ ಐಎಸ್​ಎಸ್​ಒ ಸಮಿಟ್ ಮತ್ತು ಅವಾರ್ಡ್ 2025 ಕಾರ್ಯಕ್ರಮವನ್ನು ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್​ನಲ್ಲಿ ಇಂದು ಆಯೋಜಿಸಿತು. ಅಂತಾರಾಷ್ಟ್ರೀಯ ಪಠ್ಯಕ್ರಮದ ಶಾಲೆಗಳು, ಒಲಿಂಪಿಯನ್​ಗಳು, ರಾಷ್ಟ್ರಮಟ್ಟದ ಅಥ್ಲೀಟ್​ಗಳು, ಕ್ರೀಡಾ ವೃತ್ತಿಪರರು ಹೀಗೆ 300ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಂಬೈ, ಆಗಸ್ಟ್ 14: ಇಂಟರ್​ನ್ಯಾಷನಲ್ ಸ್ಕೂಲ್ ಸ್ಪೋರ್ಟ್ಸ್ ಆರ್ಗನೈಸೇಶನ್ (ಐಎಸ್​ಎಸ್​ಒ) ಮೊದಲ ಐಎಸ್​ಎಸ್​ಒ ಸಮಿಟ್ ಮತ್ತು ಅವಾರ್ಡ್ 2025 ಕಾರ್ಯಕ್ರಮವನ್ನು (ISSO Summit & Awards) ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್​ನಲ್ಲಿ ಇಂದು ಆಯೋಜಿಸಿತು. ಅಂತಾರಾಷ್ಟ್ರೀಯ ಪಠ್ಯಕ್ರಮದ ಶಾಲೆಗಳು, ಒಲಿಂಪಿಯನ್​ಗಳು, ರಾಷ್ಟ್ರಮಟ್ಟದ ಅಥ್ಲೀಟ್​ಗಳು, ಕ್ರೀಡಾ ವೃತ್ತಿಪರರು ಹೀಗೆ 300ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಪಿಎಂಜಿ, ಡ್ರಿಮ್ ಸೆಟ್ ಗೋ ಮತ್ತು ಲೆಸ್ ರೋಚಸ್ ಈ ಕಾರ್ಯಕ್ರಮ ಆಯೋಜನೆಯಲ್ಲಿ ಕೈ ಜೋಡಿಸಿದ್ದವು. ಅದಾನಿ ಗ್ರೂಪ್​ನ ನಮ್ರತಾ ಅದಾನಿ ಅವರು ಐಎಸ್​ಎಸ್​ಒದ ಅಡ್ವೈಸರಿ ಬೋರ್ಡ್​ಗೆ ಸೇರ್ಪಡೆ ಆಗಿರುವುದನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು. ‘ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಕ್ರೀಡೆಯನ್ನು ಕಡ್ಡಾಯವಾದ ಪ್ರಮುಖ ಸಬ್ಜೆಕ್ಟ್​ ಆಗಿಸಬೇಕಾ?’ ಎನ್ನುವ ವಿಚಾರದ ಬಗ್ಗೆ ಪ್ಯಾನಲ್ ಚರ್ಚೆ ನಡೆಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More