ಗುತ್ತಿಗೆದಾರನ ಮನೆಯಲ್ಲಿ ದೊರೆತ ಹಣ ಕಾಂಗ್ರೆಸ್ ನಾಯಕರಿಗೆ ಸೇರಿದ್ದು ಅಂತ ಆದಾಯ ತೆರಿಗೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಲ್ಲ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಕುಮಾರಸ್ವಾಮಿಗೆ ಮಾನ ಮರ್ಯಾದೆ ಏನಾದರೂ ಇದ್ದರೆ ಆದಾಯ ತೆರಿಗೆ ನಿನ್ನೆ ಹೊರಡಿಸಿರುವ ಪತ್ರಿಕಾ ಹೇಳಿಕೆ ನೋಡಲಿ ಎಂದು ಹೇಳಿದ ಲಕ್ಷ್ಮಣ್ ಪ್ರೆಸ್ ನೋಟ್ ಪ್ರದರ್ಶಿಸಿದರು. ತನ್ನ ಹೇಳಿಕೆಯಲ್ಲಿ ಇಲಾಖೆಯು ಬರಾಮತ್ತಾದ ಹಣ ಕಾಂಗ್ರೆಸ್ ನಾಯಕರಿಗೆ ಸೇರಿದ್ದು ಅಂತ ಹೇಳಿಲ್ಲ, ಸರ್ಕಾರಕ್ಕೆ ತೆರಿಗೆ ವಂಚಿಸಲು ಗುತ್ತಿಗೆದಾರ ಮನೆಯಲ್ಲಿ ಹಣ ಇಟ್ಟುಕೊಂಡಿದ್ದ ಎಂದು ಹೇಳಿದೆ ಎಂದು ಲಕ್ಷ್ಮಣ್ ಹೇಳಿದರು.
ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ (M Laxman), ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡೋದಿಕ್ಕೆ ಬಿಜೆಪಿಯಿಂದ ಸುಪಾರಿ ಪಡೆದಿದ್ದಾರೆ, ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಆಗಿರೋದೆ ಈ ಕಾರಣಕ್ಕೆ ಎಂದು ಹೇಳಿದರು. ರಾಜ್ಯದಲ್ಲಿ ಯಾವುದೇ ಘಟನೆ ನಡೆದರೂ ಅದನ್ನು ಕಾಂಗ್ರೆಸ್ ನಾಯಕರ ತಲೆಗೆ ಕಟ್ಟಬೇಕು ಎಂದು ಬಿಜೆಪಿ ನಾಯಕರು (BJP leaders) ಕುಮಾರಸ್ವಾಮಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು. ಬಿಜೆಪಿ ಯಿಂದ 3-ತಿಂಗಳು ಅವಧಿಯ ಪ್ರಬೋಷನರಿ ಪೀರಿಯಡ್ (probationary period) ನಲ್ಲಿರುವ ಕುಮಾರಸ್ವಾಮಿ ಯಾವುದೋ ಗುತ್ತಿಗೆದಾರನ ಮನೆಯಲ್ಲಿ ದಾಖಲೆರಹಿತ ಹಣ ಸಿಕ್ಕರೆ ಅದು ಕಾಂಗ್ರೆಸ್ ನಾಯಕರಿಗೆ ಮಿಸಲಾಗಿದ್ದ ಕಮೀಶನ್ ಹಣ ಅಂತ ಸುಳ್ಳು ಹೇಳುತ್ತಾರೆ. ಅವರಿಗೆ ಮಾನ ಮರ್ಯಾದೆ ಏನಾದರೂ ಇದ್ದರೆ ಆದಾಯ ತೆರಿಗೆ ನಿನ್ನೆ ಹೊರಡಿಸಿರುವ ಪತ್ರಿಕಾ ಹೇಳಿಕೆ ನೋಡಲಿ ಎಂದು ಹೇಳಿದ ಲಕ್ಷ್ಮಣ್ ಪ್ರೆಸ್ ನೋಟ್ ಪ್ರದರ್ಶಿಸಿದರು. ತನ್ನ ಹೇಳಿಕೆಯಲ್ಲಿ ಇಲಾಖೆಯು ಬರಾಮತ್ತಾದ ಹಣ ಕಾಂಗ್ರೆಸ್ ನಾಯಕರಿಗೆ ಸೇರಿದ್ದು ಅಂತ ಹೇಳಿಲ್ಲ, ಸರ್ಕಾರಕ್ಕೆ ತೆರಿಗೆ ವಂಚಿಸಲು ಗುತ್ತಿಗೆದಾರ ಮನೆಯಲ್ಲಿ ಹಣ ಇಟ್ಟುಕೊಂಡಿದ್ದ ಎಂದು ಹೇಳಿದೆ ಎಂದು ಲಕ್ಷ್ಮಣ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ