ಅಪಘಾತದಲ್ಲಿ ಗಾಯಗೊಂಡ ಮರಿ ಕೋತಿ, ತಾಯಿ ಕೋತಿಗೆ ಆಘಾತ - ನನ್ನ ಮಗುವನ್ನು ಕಾಪಾಡಿ ಪ್ಲೀಸ್ ಎಂದು ದೀನವಾಗಿ ಮೊರೆಯಿಟ್ಟಿತು

ಅಪಘಾತದಲ್ಲಿ ಗಾಯಗೊಂಡ ಮರಿ ಕೋತಿ, ತಾಯಿ ಕೋತಿಗೆ ಆಘಾತ – ನನ್ನ ಮಗುವನ್ನು ಕಾಪಾಡಿ ಪ್ಲೀಸ್ ಎಂದು ದೀನವಾಗಿ ಮೊರೆಯಿಟ್ಟಿತು

ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​

Updated on: Oct 17, 2023 | 3:48 PM

ಮರಿ ಕೋತಿಗೆ ಅಪಘಾತವಾಗಿರುವುದನ್ನು ಕಂಡು ತಾಯಿ ಕೋತಿ ಮಮ್ಮಲ ಮರುಗಿದ ಮನಕಲಕುವ ದೃಶ್ಯವೊಂದು ತುಮಕೂರು ನಗರದಲ್ಲಿ ಕಂಡುಬಂದಿದೆ. ತನ್ನ ಮಗುವಿನ ಆಕ್ರಂದನ ಕೇಳಿದ ತಾಯಿ ಕೋತಿ ತಕ್ಷಣ ಓಡಿ ಬಂದು ಮರಿಯನ್ನು ರಸ್ತೆಯಿಂದ ಪಕ್ಕಕ್ಕೆ ಎಳೆದುಕೊಂಡು ಹೋಗಿದೆ. ತನ್ನ ಮುದ್ದುಕಂದನ ಮೈ ಕೈ ಸವರಿ ಆರೈಕೆ ಮಾಡಿದೆ. ಮುತ್ತನ್ನಿಟ್ಟು ಸಂತೈಸಿದೆ.

ಮರಿ ಕೋತಿಗೆ (baby monkey) ಅಪಘಾತವಾಗಿರುವುದನ್ನು ಕಂಡು ತಾಯಿ ಕೋತಿ ಮಮ್ಮಲ ಮರುಗಿದ ಮನಕಲಕುವ ದೃಶ್ಯವೊಂದು ತುಮಕೂರು ನಗರದಲ್ಲಿ ಕಂಡುಬಂದಿದೆ. ನಗರದ (tumkur) ಹನುಮಂತಪುರ ಬಳಿಯ ಜ್ಯೋತಿಪುರದಲ್ಲಿ ಮರಿ ಕೋತಿ ರಸ್ತೆ ದಾಟುತ್ತಿರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ (road accident) ಕಾಲು ಮುರಿದಿದೆ. ತನ್ನ ಮಗುವಿನ ಆಕ್ರಂದನ ಕೇಳಿದ ತಾಯಿ ಕೋತಿ ತಕ್ಷಣ ಓಡಿ ಬಂದು ಮರಿಯನ್ನು ರಸ್ತೆಯಿಂದ ಪಕ್ಕಕ್ಕೆ ಎಳೆದುಕೊಂಡು ಹೋಗಿದೆ. ತನ್ನ ಮುದ್ದುಕಂದನ ಮೈ ಕೈ ಸವರಿ ಆರೈಕೆ ಮಾಡಿದೆ. ಮುತ್ತನ್ನಿಟ್ಟು ಸಂತೈಸಿದೆ. ಗಾಯಗೊಂಡ ಮರಿ ಚೇತರಿಸಿಕೊಳ್ಳದೇ ಇದ್ದಾಗ ತಾಯಿ ಕೋತಿ ಅಕ್ಕಪಕ್ಕ, ಸುತ್ತಮುತ್ತ ದೀನವಾಗಿ ನೋಡುತಿದ್ದುದ್ದನ್ನು ಕಂಡರೆ ಪ್ಲೀಸ್ ನನ್ನ ಮಗುವನ್ನು ಕಾಪಾಡಿ ಎನ್ನುವಂತಿತ್ತು. ಬಳಿಕ ಸ್ಥಳೀಯರು ಸೇರಿಕೊಂಡು ಗಾಯಗೊಂಡಿದ್ದ ಕೋತಿ ಮರಿಯನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ