ಮಾತಾಡುವಾಗ ಮತ್ತೊಮ್ಮೆ ಎಡವಟ್ಟು ಮಾಡಿದ ಜಮೀರ್ ಅಹ್ಮದ್ ಇಂಡಿಯ ಬದಲು ಎನ್​ಡಿಎ ಅಂದರು!

ಮಾತಾಡುವಾಗ ಮತ್ತೊಮ್ಮೆ ಎಡವಟ್ಟು ಮಾಡಿದ ಜಮೀರ್ ಅಹ್ಮದ್ ಇಂಡಿಯ ಬದಲು ಎನ್​ಡಿಎ ಅಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 17, 2023 | 2:54 PM

ಇಬ್ರಾಹಿಂ ಅವರ ಬಗ್ಗೆ ಒಂದು ಮಾತನ್ನು ಹೇಳಬಹುದು, ನಿನ್ನೆ ಮಾತಾಡುವಾಗ ಅವರು ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸುತ್ತೇವೆ ಅಂತ ಹೇಳಿದ್ದು ಅಭಿನಂದನೀಯ, ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಅಂರ ಜಮೀರ್ ಹೇಳುತ್ತಾರೆ. ಎನ್ ಡಿಎ, ಬಿಜೆಪಿ ನೇತೃತ್ವದ ಮೈತ್ರಿಕೂಟ ಅನ್ನೋದು ಅವರು ಗೊತ್ತಿಲ್ಲವೋ ಅಥವಾ ಅಚಾತುರ್ಯದಿಂದ ಹಾಗೆ ಹೇಳಿದರೋ ಗೊತ್ತಾಗಲಿಲ್ಲ

ಚಿತ್ರದುರ್ಗ: ವಸತಿ ಖಾತೆ ಸಚಿವ ಬೆಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರಿಗೆ ಮಾತಾಡುವಾಗ ಏನಾದರೂ ಎಡವಟ್ಟು ಮಾಡದಿದ್ದರೆ ಸಮಾಧಾನವಾಗದು ಮಾರಾಯ್ರೇ. ನಿನ್ನೆ ಕಾರ್ಯಕರ್ತರ ಸಭೆಯೊಂದನ್ನು ನಡೆಸಿ ಅಸಲು ಜೆಡಿಎಸ್ ಪಕ್ಷ ತಮ್ಮದು, ಹೆಚ್ ಡಿ ದೇವೇಗೌಡ (HD Devegowda) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮನ್ನು ಉಚ್ಚಾಟಿಸಲಾಗದು ಎಂದು ಜೆಡಿಎಸ್ ನಾಯಕತ್ವಕ್ಕೆ ಸವಾಲೆಸೆದಿರುವ ಸಿಎಂ ಇಬ್ರಾಹಿಂ (CM Ibrahim) ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಜಮೀರ್, ಅದು ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದ ವಿಷಯ, ತನ್ನನ್ನು ಕೇಳಿದರೆ ಏನು ಹೇಳೋಕ್ಕಾಗುತ್ತೆ ಅನ್ನುತ್ತಾರೆ. ನಂತರ ಅವರು, ಇಬ್ರಾಹಿಂ ಅವರ ಬಗ್ಗೆ ಒಂದು ಮಾತನ್ನು ಹೇಳಬಹುದು, ನಿನ್ನೆ ಮಾತಾಡುವಾಗ ಅವರು ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸುತ್ತೇವೆ ಅಂತ ಹೇಳಿದ್ದು ಅಭಿನಂದನೀಯ, ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಅನ್ನುತ್ತಾರೆ. ಎನ್ ಡಿಎ, ಬಿಜೆಪಿ ನೇತೃತ್ವದ ಮೈತ್ರಿಕೂಟ ಅನ್ನೋದು ಅವರು ಗೊತ್ತಿಲ್ಲವೋ ಅಥವಾ ಅಚಾತುರ್ಯದಿಂದ ಹಾಗೆ ಹೇಳಿದರೋ ಗೊತ್ತಾಗಲಿಲ್ಲ, ನಿನ್ನೆ ಇಬ್ರಾಹಿಂ ಸಾಹೇಬರು ಸಹ ಮೊದಲು ಎನ್ ಡಿ ಎ ಅಂತ ಹೇಳಿ ನಂತರ ಸಾವರಿಸಿಕೊಂಡು ಎನ್ ಡಿಎ ಅನ್ನುತ್ತಾರೆ. ಜಮೀರ್ ಕರೆಕ್ಷನ್ ಮಾಡುವ ಉಸಾಬರಿಗೆ ಹೋಗೋದಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ