Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲಿಂದಲೂ ಗೊತ್ತಿತ್ತು: ಬಿಜೆಡ್ ಜಮೀರ್ ಅಹ್ಮದ್ ಖಾನ್, ಸಚಿವ

ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲಿಂದಲೂ ಗೊತ್ತಿತ್ತು: ಬಿಜೆಡ್ ಜಮೀರ್ ಅಹ್ಮದ್ ಖಾನ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 02, 2023 | 4:55 PM

ದೇವೇಗೌಡರು ಸೆಕ್ಯುಲರ್ ಅಂತ ಗೊತ್ತಿತ್ತು ಮತ್ತು ಈಗಲೂ ಅವರು ಜಾತ್ಯಾತೀತರೇ, ಆದರೆ ಕುಮಾರಸ್ವಾಮಿಯ ಸೆಕ್ಯುಲರಿಸಂ ಬಗ್ಗೆ ಸದಾ ಸಂಶಯವಿತ್ತು. ಈಗ ಅವರು ತಮ್ಮ ಪ್ಯಾಂಟಿನೊಳಗೆ ಚೆಡ್ಡಿ ಧರಿಸಿ ಅದನ್ನು ಸಾಬೀತು ಮಾಡಿದ್ದಾರೆ ಎಂದು ಜಮೀರ್ ಹೇಳಿದರು.

ಬೆಂಗಳೂರು: ಅದೊಂದು ಕಾಲವಿತ್ತು. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ನಡುವೆ ಭಾರೀ ದೋಸ್ತಿ; ಗಳಸ್ಯ ಕಂಠಸ್ಯ ಅಂತಾರಲ್ಲ? ಹಾಗೆ. ಇಬ್ಬರು ಎದುರಾದಾಗ ಪರಸ್ಪರ ತಬ್ಬಿಕೊಂಡು ಕೆನ್ನೆಗಳಿಗೆ ಮುದ್ದಿಟ್ಟು ವಿಶ್ ಮಾಡಿಕೊಳ್ಳುತ್ತಿದ್ದರು! ಈಗ ಕಾಲ ಬದಲಾಗಿದೆ ಜೊತೆಗೆ ರಾಜಕೀಯ ಚಿತ್ರಣ ಕೂಡ. ಇವತ್ತು ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣದ ಮಾಜಿ ಶಾಸಕ ಎಂಸಿ ಅಶ್ವಥ್ (MC Ashwath) ಮತ್ತು ಇತರ ಹಲವಾರು ಕಾರ್ಯಕರ್ತರನ್ನು ಡಿಕೆ ಶಿವಕುಮಾರ್ (DK Shivakumar) ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತಾಡಿದ ಜಮೀರ್, ದೇವೇಗೌಡರು ಸೆಕ್ಯುಲರ್ ಅಂತ ಗೊತ್ತಿತ್ತು ಮತ್ತು ಈಗಲೂ ಅವರು ಜಾತ್ಯಾತೀತರೇ, ಆದರೆ ಕುಮಾರಸ್ವಾಮಿಯ ಸೆಕ್ಯುಲರಿಸಂ ಬಗ್ಗೆ ಸದಾ ಸಂಶಯವಿತ್ತು. ಈಗ ಅವರು ತಮ್ಮ ಪ್ಯಾಂಟಿನೊಳಗೆ ಚೆಡ್ಡಿ ಧರಿಸಿ ಅದನ್ನು ಸಾಬೀತು ಮಾಡಿದ್ದಾರೆ ಎಂದು ಜಮೀರ್ ಹೇಳಿದರು. ಅಶ್ವಥ್ ಬಗ್ಗೆ ಮಾತಾಡಿದ ಜಮೀರ್, ಚನ್ನಪಟ್ಟಣ ಭಾಗದಲ್ಲಿ ಅವರು ಬಹಳ ಜನಪ್ರಿಯ ನಾಯಕರಾಗಿದ್ದಾರೆ ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆದ್ದಿದ್ದು ಅವರಿಂದಲೇ ಅಂದರೆ ತಪ್ಪಾಗಲಾರದು, ಅವರು ಕಾಂಗ್ರೆಸ್ ಸೇರಿದ್ದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ