ಶಾಸಕ ಅಬ್ಬಯ್ಯ ಪ್ರಸಾದ್ ಗೆ ನಿಗಮ/ಮಂಡಳಿ ಅಧ್ಯಕ್ಷ ಸ್ಥಾನ ಕೋರಿ ಬೆಂಬಲಿಗರಿಂದ ಡಿಕೆ ಶಿವಕುಮಾರ್ ಮನೆಮುಂದೆ ಪ್ರದರ್ಶನ
ಪ್ರದರ್ಶನಕಾರರನ್ನು ತಮ್ಮ ಮನೆಯ ಬಾಲ್ಕನಿಯಿಂದ ನೋಡಿ ಮುಗುಳ್ನಕ್ಕು ಕೈ ಬೀಸುವ ಶಿವಕುಮಾರ್ ನಂತರ ಕೆಳಗಿಳಿದು ಬಂದು ಮನವಿ ಪತ್ರ ಸ್ವೀಕರಿಸುತ್ತಾರೆ. ಶಿವಕುಮಾರ್ ಕಾಣುತ್ತಲೇ ಅವರೆಲ್ಲ ಡಿಕೆ ಸಾಹೇಬರಿಗೆ ಜಯವಾಗಲಿ ಅಂತ ಕೂಗುತ್ತಾರೆ ಮತ್ತು ಒಕ್ಕೊರಲಿನಿಂದ ಡಿಕೆ ಡಿಕೆ ಅನ್ನುತ್ತಾರೆ. ಅಬ್ಬಯ್ಯ ಕೂಡ ಗುಂಪಿನಲ್ಲಿರುವುದನ್ನು ನೋಡಬಹುದು.
ಬೆಂಗಳೂರು: ಹುಬ್ಬಳ್ಳಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯಗೆ (Prasad Abbayya) ಒಂದು ಉತ್ತಮ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರು ಇಂದು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿವಾಸದ ಬಳಿ ಪ್ರದರ್ಶನ ನಡೆಸಿದರು. ನಿಮಗೆ ನೆನಪಿರಬಹುದು, ಮೇನಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗುವಾಗಲೂ ಅಬ್ಬಯ್ಯ ಬೆಂಬಲಿಗರು ಸಚಿವ ಸ್ಥಾನ ನೀಡಬೇಕೆಂದು ಪ್ರದರ್ಶನ ನಡೆಸಿದ್ದರು. ಅಬ್ಬಯ್ಯ ಬೆಂಬಲಿಗರೆಲ್ಲ, ಕರ್ನಾಟಕ ರಾಜ್ಯ ಛಲವಾದಿ ಮಹಸಭಾ ರಾಯಚೂರಿನ ಸದಸ್ಯರೂ ಆಗಿದ್ದಾರೆ. ಅವರ ಕೈಗಳಲ್ಲಿ ಮಹಾಸಭಾದ ಪ್ಲಕಾರ್ಡ್ ನೋಡಬಹುದು. ಪ್ರದರ್ಶನಕಾರರನ್ನು ತಮ್ಮ ಮನೆಯ ಬಾಲ್ಕನಿಯಿಂದ ನೋಡಿ ಮುಗುಳ್ನಕ್ಕು ಕೈ ಬೀಸುವ ಶಿವಕುಮಾರ್ ನಂತರ ಕೆಳಗಿಳಿದು ಬಂದು ಮನವಿ ಪತ್ರ ಸ್ವೀಕರಿಸುತ್ತಾರೆ. ಶಿವಕುಮಾರ್ ಕಾಣುತ್ತಲೇ ಅವರೆಲ್ಲ ಡಿಕೆ ಸಾಹೇಬರಿಗೆ ಜಯವಾಗಲಿ ಅಂತ ಕೂಗುತ್ತಾರೆ ಮತ್ತು ಒಕ್ಕೊರಲಿನಿಂದ ಡಿಕೆ ಡಿಕೆ ಅನ್ನುತ್ತಾರೆ. ಅಬ್ಬಯ್ಯ ಕೂಡ ಗುಂಪಿನಲ್ಲಿರುವುದನ್ನು ನೋಡಬಹುದು. ಅಬ್ಬಯ್ಯಗೆ ಆಶ್ವಾಸನೆ ನೀಡಿ ಶಿವಕುಮಾರ್ ವಾಪಸ್ಸು ಹೋಗುವಾಗ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅಲ್ಲಿಗೆ ಆಗಮಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ