‘ಅವನು ಮಾಡಿದ್ದು ಸರಿ ಇಲ್ಲ’; ತುಕಾಲಿ ಸಂತೋಷ್ ಬಗ್ಗೆ ಸ್ನೇಕ್ ಶ್ಯಾಮ್ ಅಸಮಾಧಾನ

‘ಅವನು ಮಾಡಿದ್ದು ಸರಿ ಇಲ್ಲ’; ತುಕಾಲಿ ಸಂತೋಷ್ ಬಗ್ಗೆ ಸ್ನೇಕ್ ಶ್ಯಾಮ್ ಅಸಮಾಧಾನ

ರಾಜೇಶ್ ದುಗ್ಗುಮನೆ
|

Updated on: Oct 17, 2023 | 12:09 PM

ಸ್ನೆಕ್ ಶ್ಯಾಮ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರಮುಖವಾಗಿ ತುಕಾಲಿ ಸಂತೋಷ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತುಕಾಲಿ ಸಂತೋಷ್ ಅವರು ‘ಡ್ರೋನ್’​ ಪ್ರತಾಪ್ ಬಗ್ಗೆ ಮಾಡಿರುವ ಟೀಕೆ ಖಂಡಿಸಿದ್ದಾರೆ.

ಸ್ನೇಕ್ ಶ್ಯಾಮ್ ಅವರು ‘ಬಿಗ್ ಬಾಸ್’ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅವರು ಮನೆಯಿಂದ ಹೊರ ಬಂದ ಬಳಿಕ ಟಿವಿ9 ಕನ್ನಡದ ಜೊತೆ ಮಾತಿಗೆ ಸಿಕ್ಕರು. ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರಮುಖವಾಗಿ ತುಕಾಲಿ ಸಂತೋಷ್ (Tukali Santosh) ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತುಕಾಲಿ ಸಂತೋಷ್ ಅವರು ‘ಡ್ರೋನ್’​ ಪ್ರತಾಪ್ ಬಗ್ಗೆ ಮಾಡಿರುವ ಟೀಕೆ ಖಂಡಿಸಿದ್ದಾರೆ. ‘ಆರಂಭದಲ್ಲಿ ತುಕಾಲಿ ಸಂತೋಷ್ ಮಾಡುತ್ತಿದ್ದ ಜೋಕ್ ಖುಷಿ ನೀಡುತ್ತಿತ್ತು. ಆದರೆ, ಬರುಬರುತ್ತಾ ಅವರು ಡ್ರೋನ್ ಪ್ರತಾಪ್​ನ ಟಾರ್ಗೆಟ್ ಮಾಡಲಾಯಿತು. ಇದು ಸರಿ ಅಲ್ಲ’ ಎಂದರು ಸ್ನೇಕ್ ಶ್ಯಾಮ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ