ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಿ ‘ತಗ್ಗೆದೆಲೆ..’ ಡೈಲಾಗ್ ಹೊಡೆದ ಅಲ್ಲು ಅರ್ಜುನ್; ವಿಡಿಯೋ ನೋಡಿ
ನಟ ಅಲ್ಲು ಅರ್ಜುಜ್ ಅವರು ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಇಂದು (ಅಕ್ಟೋಬರ್ 17) ದೆಹಲಿಗೆ ತೆರಳಿದ್ದಾರೆ. ಪ್ರಶಸ್ತ್ರಿ ಪ್ರದಾನ ಸಮಾರಂಭ ಆರಂಭ ಆಗುವುದಕ್ಕೂ ಮುನ್ನ ಅವರು ಮಾಧ್ಯಮದ ಜತೆ ಮಾತನಾಡಿದ್ದಾರೆ. ಕಮರ್ಷಿಯಲ್ ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ದುಪ್ಪಟ್ಟು ಖುಷಿ ನೀಡಿದೆ ಎಂದು ಅವರು ಹೇಳಿದ್ದಾರೆ.
ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ‘ಪುಷ್ಪ’ (Pushpa Movie) ಸಿನಿಮಾದಲ್ಲಿನ ನಟನೆಗೆ ‘ರಾಷ್ಟ್ರ ಪ್ರಶಸ್ತಿ’ ಪಡೆದಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಅವರು ಇಂದು (ಅಕ್ಟೋಬರ್ 17) ದೆಹಲಿಗೆ ತೆರಳಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಆರಂಭ ಆಗುವುದಕ್ಕೂ ಮುನ್ನ ಅವರು ಡಿಡಿ ನ್ಯಾಷನಲ್ ವಾಹಿನಿ ಜೊತೆ ಮಾತನಾಡಿದ್ದಾರೆ. ತಮ್ಮ ಕಮರ್ಷಿಯಲ್ ಸಿನಿಮಾದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ (National Film Award) ಬಂದಿರುವುದು ದುಪ್ಪಟ್ಟು ಖುಷಿ ನೀಡಿದೆ ಎಂದು ಅರ್ಜುನ್ ಅವರು ಹೇಳಿದ್ದಾರೆ. ಇದೇ ವೇಳೆ ಅವರು ‘ತಗ್ಗೆದೆಲೆ..’ ಎಂದು ಡೈಲಾಗ್ ಹೊಡೆದಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ನ್ಯಾಷನಲ್ ಅವಾರ್ಡ್ ಪಡೆಯುತ್ತಿರುವ ಅಲ್ಲು ಅರ್ಜುನ್ (Allu Arjun) ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Oct 17, 2023 03:16 PM
Latest Videos