ಹಿಂದೂ ಆಗಿದ್ದರೂ ಹಿಂದುತ್ವದ ವಿರೋಧಿ ಅಂತ ಸಿದ್ದರಾಮಯ್ಯ ಹೇಳುವುದು ಅರ್ಥಹೀನ: ಮಂತ್ರಾಲಯ ಸ್ವಾಮೀಜಿ
ನಮ್ಮ ಸಂವಿಧಾನವೇ ಜಾತ್ಯಾತೀತ ಎಲ್ಲ ಧರ್ಮಗಳಿಗೆ ಸಮಾನ ಪ್ರಾಶಸ್ತ್ಯ ನೀಡಿದೆ, ಧರ್ಮ-ಜಾತಿಗಳಲ್ಲಿ ತಾರತಮ್ಯ ಮಾಡಿದರೆ ಅದು ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ಶ್ರೀಗಳು ಹೇಳಿದರು.
ಬಾಗಲಕೋಟೆ: ನಾನು ಹಿಂದೂ ಅದರೆ ಹಿಂದೂತ್ವದ ವಿರೋಧಿ ಅಂತ ಸಿದ್ದರಾಮಯ್ಯನವರು (Siddaramaiah) ಹೇಳೋದು ಅರ್ಥಹೀನವಾದದ್ದು ಎಂದು ಮಂತ್ರಾಲಯ ರಾಘವೇಂದ್ರ ಮಠದ ಸುಬುದೇಂದ್ರತೀರ್ಥ ಸ್ವಾಮೀಜಿ (Sri Subudendrateertha Swamiji) ಹೇಳಿದರು. ಬಾಗಲಕೋಟೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತಾಡಿದ ಶ್ರೀಗಳು ಹಿಂದೂ ಅಂತಾದ ಮೇಲೆ ಹಿಂದೂತ್ವವನ್ನು ಗೌರವಿಸಲೇ ಬೇಕು, ಹಿಂದೂತ್ವದ ಬಗ್ಗೆ ಭಿನಾಭಿಪ್ರಾಯಗಳಿರಬಹುದು ಆದರೆ ಹಿಂದೂತ್ವವನ್ನೇ ವಿರೋಧಿಸುತ್ತೇನೆ ಅಂತ ಹೇಳುವುದು ಸರ್ವಥಾ ತಪ್ಪು ಎಂದು ಅವರು ಹೇಳಿದರು. ರಾಜಕೀಯ ಪಕ್ಷಗಳು ತಾವು ಜಾತ್ಯಾತೀತ ಅಂತ ಹೇಳಿಕೊಳ್ಳುವುದರಲ್ಲೂ ಅರ್ಥವಿಲ್ಲ, ಯಾಕೆಂದರೆ ನಮ್ಮ ಸಂವಿಧಾನವೇ ಜಾತ್ಯಾತೀತ (the Constitution), ಎಲ್ಲ ಧರ್ಮಗಳಿಗೆ ಸಮಾನ ಪ್ರಾಶಸ್ತ್ಯ ನೀಡಿದೆ, ಧರ್ಮ-ಜಾತಿಗಳಲ್ಲಿ ತಾರತಮ್ಯ ಮಾಡಿದರೆ ಅದು ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ಶ್ರೀಗಳು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ