itel Power 450: ಯುಎಸ್‌ಬಿ ಟೈಪ್-ಸಿ ಪೋರ್ಟ್ ಇರುವ ಭಾರತದ ಮೊದಲ ಫೀಚರ್ ಫೋನ್
ಐಟೆಲ್ ಕಂಪನಿ, ಯುಎಸ್‌ಬಿ ಟೈಪ್- ಸಿ ಚಾರ್ಜಿಂಗ್ ಪೋರ್ಟ್ ಇರುವ ಫೀಚರ್ ಫೋನ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಏಕರೂಪದಲ್ಲಿ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಹೀಗಾಗಿ ಬಳಕೆಗೆ ಸುಲಭವಾಗುವಂತೆ, ಈ ಫೋನ್ ರೂಪಿಸಲಾಗಿದೆ. ಚಾರ್ಜರ್ ಮರೆತು ಬಂದಿದ್ದರೂ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಚಾರ್ಜಿಂಗ್ ಬೆಂಬಲ ಇರುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಅದೆಷ್ಟೇ ಸೂಪರ್ ಸ್ಮಾರ್ಟ್ಫೋನ್ ಬಂದರೂ, ಬೇಸಿಕ್ ಫೀಚರ್ ಫೋನ್ಗಳ ಬೇಡಿಕೆ ಮಾತ್ರ ಕಡಿಮೆಯಾಗುವುದಿಲ್ಲ. ಹೊಸ ಹೊಸ ಫೀಚರ್ ಫೋನ್ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಈ ಬಾರಿ ಐಟೆಲ್ ಕಂಪನಿ, ಯುಎಸ್‌ಬಿ ಟೈಪ್- ಸಿ ಚಾರ್ಜಿಂಗ್ ಪೋರ್ಟ್ ಇರುವ ಫೀಚರ್ ಫೋನ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಏಕರೂಪದಲ್ಲಿ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಹೀಗಾಗಿ ಬಳಕೆಗೆ ಸುಲಭವಾಗುವಂತೆ, ಈ ಫೋನ್ ರೂಪಿಸಲಾಗಿದೆ. ಚಾರ್ಜರ್ ಮರೆತು ಬಂದಿದ್ದರೂ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಚಾರ್ಜಿಂಗ್ ಬೆಂಬಲ ಇರುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.