ಚಂದ್ರು ಮಾಡಿದ ಅಡುಗೆ ಸವಿದು ಒನ್ ಮೋರ್ ಅಂತಿದ್ರು ಪುನೀತ್ ರಾಜ್ಕುಮಾರ್
‘13 ವರ್ಷಗಳಿಂದ ನಾನು ಅಡುಗೆ ಮಾಡುತ್ತಿದ್ದೇನೆ. ಪ್ರತಿ ಕ್ಷಣ ನಾನು ಪುನೀತ್ ರಾಜ್ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರು ಅಜರಾಮರ. ಆ ಮನೆಯ ಪ್ರೀತಿ ನನಗೆ ಸಿಕ್ಕಿದೆ. ಆ ಹೆಸರನ್ನು ಉಳಿಸಿಕೊಳ್ಳುತ್ತೇನೆ’ ಎಂದು ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಹೇಳಿದ್ದಾರೆ. ಪುನೀತ್ ಅವರಿಗೆ ಇಷ್ಟವಾಗಿದ್ದ ಅಡುಗೆಗಳ ಬಗ್ಗೆ ಚಂದ್ರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್ (Bellulli Kabab) ರೆಸಿಪಿ ಮೂಲಕ ವೈರಲ್ ಆಗಿರುವ ಚಂದ್ರು (Bellulli Kabab Chandru) ಅವರಿಗೆ ಡಾ. ರಾಜ್ಕುಮಾರ್ ಕುಟುಂಬದ ಜೊತೆ ಒಡನಾಟ ಇದೆ. ಅವರು ಮಾಡಿದ ಅಡಿಗೆಯನ್ನು ಪುನೀತ್ ರಾಜ್ಕುಮಾರ್ (Puneeth Rajkumar) ಸವಿದಿದ್ದರು. ಆ ದಿನಗಳನ್ನು ಈಗ ಚಂದ್ರು ನೆನಪಿಸಿಕೊಂಡಿದ್ದಾರೆ. ‘ನಾನು ಇವತ್ತು ಏನೇ ಹೋಟೆಲ್ ಮಾಡಿದ್ದರೂ ಅದಕ್ಕೆ ದೊಡ್ಡವ್ರು ಕಾರಣ. ಅವರು ನಮ್ಮ ಮನೆಯಲ್ಲಿ ಊಟ ಮಾಡಿಲ್ಲದೇ ಇದ್ದಿದ್ದರೆ ನಾನು ಹೋಟೆಲ್ ಮಾಡುತ್ತಿರಲಿಲ್ಲ. ನಾನು ಮೇಕಪ್ ಮ್ಯಾನ್ ಆಗಿಯೇ ಇರುತ್ತಿದ್ದೆ. ಇವತ್ತು ನಮ್ಮ ಚಿಕ್ಕ ಬಾಸ್ ಇರಬೇಕಿತ್ತು. ಇವತ್ತು ಅವರು ಮೇಲಿಂದ ಆಶೀರ್ವಾದ ಮಾಡುತ್ತಿದ್ದಾರೆ. ಒನ್ ಮೋರ್, ಒನ್ ಮೋರ್ ಎನ್ನುತ್ತಿದ್ದಾರೆ. ಇದೆಲ್ಲವೂ ನಮಗೆ ಆ ಮನೆಯಿಂದ ಸಿಕ್ಕಿದ್ದು. ನಾನು ಫುಟ್ಪಾತ್ನಿಂದ ಈ ಮಟ್ಟಕ್ಕೆ ಬಂದಿದ್ದೀನಿ ಎಂದರೆ ಕಸ್ಪಮರ್ಗಳನ್ನು ಪ್ರೀತಿಯಿಂದ ಮಾತನಾಡಿಸಿದ್ದೇ ಕಾರಣ. 13 ವರ್ಷದಿಂದ ಅಡುಗೆ ಮಾಡುತ್ತಿದ್ದೇನೆ. ಈಗ ಸೋಶಿಯಲ್ ಮೀಡಿಯಾ ಬಂದಿದ್ದರಿಂದ ವೈರಲ್ ಆಗಿದ್ದೇನೆ. ಪ್ರತಿ ಕ್ಷಣ ನಾನು ಪುನೀತ್ ರಾಜ್ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರು ಅಜರಾಮರ. ಆ ಮನೆಯ ಪ್ರೀತಿ ನನಗೆ ಸಿಕ್ಕಿದೆ. ಆ ಹೆಸರನ್ನು ಉಳಿಸಿಕೊಳ್ಳುತ್ತೇನೆ. ಪುನೀತ್ ಅವರಿಗೆ ಮಟನ್ ಸಾರು, ನಾಟಿ ಕೋಳಿ ಸಾರು ಅಂದರೆ ಬಹಳ ಇಷ್ಟ. ಕೊರೊನಾ ಸಮಯದಲ್ಲಿ ಮಟನ್ ಸಾರಿ ಮಾಡಲು ಐಡಿಯಾ ಕೇಳಿದ್ದರು. ನಾನು ವಿಡಿಯೋ ಮಾಡಿ ಕಳಿಸಿದ್ದೆ. ಅದೇ ರೀತಿ ಅವರು ಮಾಡಿ ತಿಂದ್ರು, ಒನ್ ಮೋರ್ ಅಂದ್ರು’ ಎಂದಿದ್ದಾರೆ ಚಂದ್ರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ