ವೋಲ್ವೋ ಎಕ್ಸ್​ಸಿ ರೀಚಾರ್ಜ್ ಎಲೆಕ್ಟ್ರಿಕ್ ಕಂಪ್ಯಾಕ್ಟ್ ಎಸ್​ಯುವಿ ಮುಂದಿನ ವರ್ಷ ಭಾರತಕ್ಕೆ ಆಗಮಿಸಲಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 22, 2021 | 9:08 PM

ವೋಲ್ವೋ ಎಕ್ಸ್ ಸಿ 40 ರೀಚಾರ್ಜ್ ಈ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಮಾಡೆಲ್ ಆಗಿದ್ದು ಅದನ್ನು ವಿಶ್ವದ ನಾನಾ ದೇಶಗಳಲ್ಲಿ ಸದರಿ ಕಾರು ಲಭ್ಯವಿತ್ತು.

ವೊಲ್ವೋ ಕಾರ್ಸ್ ಇಂಡಿಯ ಮುಂದಿನ ವರ್ಷದಿಂದ ಸಂಪೂರ್ಣ ವಿದ್ಯುಚ್ಛಾಲಿತ ಎಕ್ಸ್ ಸಿ 40 ಕಾರನ್ನು ಭಾರತದಲ್ಲಿ ತಯಾರಿಸುವ ತನ್ನ ಯೋಜನೆಯನ್ನು ಬಹಿರಂಗಪಡಿಸಿದೆ. ಉತ್ಪಾದನೆಯ ಕೆಲಸ ಮುಂದಿನ ವರ್ಷವೇ ಶುರಾವಾದರೂ ಕಾರುಗಳನ್ನು ಮಾರ್ಕೆಟ್ ಗೆ ಲಾಂಚ್ ಮಾಡುವುದು 2025 ರಲ್ಲಿ ಎಂದು ಸಂಸ್ಥೆಯು ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸಂಸ್ಥೆಯನ್ನು 2025 ರ ಹೊತ್ತಿಗೆ ಸಂಪೂರ್ಣವಾಗಿ ವಿದ್ಯುಚ್ಛಾಲಿತ ಘಟಕವನ್ನಾಗಿ ಪರಿವರ್ತಿಸುವತ್ತ ಮೊದಲ ಹೆಜ್ಜೆ ಇದಾಗಿದ್ದು, 2030ರ ಹೊತ್ತಿಗೆ ತನ್ನ ಪೋರ್ಟ್ ಫೋಲಿಯೋನಲ್ಲಿ ಕೇವಲ ಇಲೆಕ್ಟ್ರಿಕ್ ಕಾರುಗಳನ್ನು ಹೊಂದುವ ಉದ್ದೇಶ ವೋಲ್ವೋ ಸಂಸ್ಥೆಗಿದೆ. ಡೀಸೆಲ್ ಕಾರುಗಳನ್ನು ಉತ್ಪಾದಿಸುವ ಕೆಲಸಕ್ಕೆ ವಿದಾಯ ಹೇಳಲು ನಿರ್ಧರಿಸಿರುವ ಸ್ವೀಡನ್ ಮೂಲದ ಕಂಪನಿಯು, ಇತ್ತೀಚಿಗೆ ವೋಲ್ವೋ ಎಕ್ಸ್ ಸಿ 60 ಹಾಗೂ ವೋಲ್ವೋ ಎಸ್90 ಮೈಲ್ಡ್-ಹೈಬ್ರಿಡ್ ಆವೃತ್ತಿಗಳನ್ನು ಭಾರತದಲ್ಲಿ ಲಾಂಚ್ ಮಾಡಿತ್ತು.

ವೋಲ್ವೋ ಎಕ್ಸ್ ಸಿ 40 ರೀಚಾರ್ಜ್ ಈ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಮಾಡೆಲ್ ಆಗಿದ್ದು ಅದನ್ನು ವಿಶ್ವದ ನಾನಾ ದೇಶಗಳಲ್ಲಿ ಸದರಿ ಕಾರು ಲಭ್ಯವಿತ್ತು. 2019 ರಲ್ಲಿ ಬಿಡುಗಡೆಯಾದ ಈ ಕಾರು, ರೀಚಾರ್ಜ್ ಎಲೆಕ್ಟ್ರಿಕ್ ಕಾರ್ ಲೈನ್ ಪರಿಕಲ್ಪನೆಯಲ್ಲಿ ತಯಾರಿಸಲಾಗಿತ್ತು.

ವೋಲ್ವೋ ಎಕ್ಸ್‌ಸಿ 40 ಆಧಾರದ ಮೇಲೆ, ಎಕ್ಸ್‌ಸಿ 40 ರೀಚಾರ್ಜ್ ಸಂಪೂರ್ಣ ಎಲೆಕ್ಟ್ರಿಕ್ ಆಲ್-ವೀಲ್-ಡ್ರೈವ್ ಪವರ್‌ಟ್ರೇನ್‌ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 400 ಕಿಮೀ ಕ್ರಮಿಸುತ್ತದೆ ಮತ್ತು 408 ಬಿಹೆಚ್‌ಪಿ ಔಟ್ಪುಟ್ ನೀಡುತ್ತದೆ. ಬ್ಯಾಟರಿಯು ತನ್ನ ಸಾಮರ್ಥ್ಯದ ಶೇಕಡಾ 80 ರಷ್ಟು ವೇಗದ ಚಾರ್ಜ್ ಕೇವಲ 40 ನಿಮಿಷಗಳಲ್ಲಿ ಆಗುತ್ತದೆ. ವೋಲ್ವೋ ಎಕ್ ಸಿ40 ರೀಚಾರ್ಜ್ ಕ್ಷಿಪ್ರಗತಿಯಲ್ಲಿ ಆಗುವುದರಿರೊಂದಿಗೆ ಇದು 0-100 ಕಿಮೀ/ಗಂಟೆ ವೇಗವನ್ನು 4.7 ಸೆಕೆಂಡುಗಳಲ್ಲಿ ತಲುಪುತ್ತದೆ.

ಇದನ್ನೂ ಓದಿ: Shilpa Shetty: ಪತಿ ರಾಜ್​ ಕುಂದ್ರಾ ಚಿಂತೆ ಮರೆತು ಬಿಂದಾಸ್​ ಆಗಿ ಕುಣಿದು ಕುಪ್ಪಳಿಸಿದ ನಟಿ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್​