ಹಬ್ಬದ ಸೀಸನ್: ಶಾಮಿ ಎಮ್ ಐ 11 ಲೈಟ್ ಎನ್ಈ 5 ಜಿ ಶಾಮಿ ವೆಬ್​ಸೈಟ್​ನಲ್ಲಿ ರೂ. 21,999 ಗಳಿಗೆ ಸಿಗಲಿದೆ!

ಶಾಮಿ ಇಂಡಿಯ ಅಧಿಕೃತ ವೆಬ್ ಸೈಟ್​ನಲ್ಲಿ ಶಾಮಿ ಎಮ್ ಐ 11 ಲೈಟ್ ಎನ್ಈ 5 ಜಿ ಪೋನಿನ ಬೆಲೆ 26,999 ಅಂತ ಸೂಚಿಸಲಾಗಿದೆ. ಆದರೆ ಗ್ರಾಹಕರು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳನ್ನು ಬಳಸಿ 2,000 ರೂ. ಗಳ ರಿಯಾಯಿತಿ ಪಡೆಯಬಹುದಾಗಿದೆ.

ಹಬ್ಬದ ಸೀಸನಲ್ಲಿ ನಿಮ್ಮ ಪೋನ್ ಶಾಪಿಂಗ್ ಮುಗಿದಿಲ್ಲವಾದರೆ, ಶಾಮಿ ಎಮ್ ಐ 11 ಲೈಟ್ ಎನ್ಈ 5 ಜಿ ನಿಮಗೋಸ್ಕರ ಕಾಯುತ್ತಿದೆ ಮಾರಾಯ್ರೇ. ಈ ಫೋನ್ 6.55 ಇಂಚಿನ ಟಚ್ ಸ್ಕ್ರೀನ್ ಡಿಸ್ ಜೊತೆ 1080×2400 ಪಿಕ್ಸೆಲ್ ರೆಸ್ಯೂಲೂಶನ್ ನೊಂದಿಗೆ ಬರುತ್ತದೆ. ಶಾಮಿ ಎಮ್ ಐ ಲೈಟ್ ಎನ್ ಈ 5ಜಿ 6ಜಿಬಿ ಱಮ್ ಮತ್ತು 128 ಜಿಬಿ ಸ್ಟೋರೇಜ್​ನೊಂದಿಗೆ ಲಭ್ಯವಿದೆ. ಶಾಮಿ ಎಮ್ ಐ 11 ಲೈಟ್ ಎನ್ಈ 5 ಜಿ ಬೆಲೆ 26,999 ರಿಂದ ಶುರುವಾಗುತ್ತದೆ. 8ಜಿಬಿ ಱಮ್ ಮತ್ತು 128ಜಿಬಿ ಸ್ಟೋರೇಜ್ ಮಾಡೆಲ್ ಬೆಲೆ ರೂ. 28,999 ರಿಂದ ಆರಂಭವಾಗುತ್ತದೆ. ಆದರೆ, ದಿವಾಳಿ ವಿತ್ ಎಮ್ ಐ ಸೇಲ್​ನಲ್ಲಿ ಸ್ಮಾರ್ಟ್​ಫೋನನ್ನು ರೂ 21,999 ಗಳಿಗೆ ಖರೀದಿಸಬಹುದಾಗಿದೆ. ಇದು 6 ಜಿಬಿ ಱಮ್ ಮತ್ತು 128 ಜಿಬಿ ಸ್ಟೋರೇಜ್ ಆವೃತ್ತಿ ಫೋನಿನ ಬೆಲೆಯಾಗಿದೆ.

ಶಾಮಿ ಇಂಡಿಯ ಅಧಿಕೃತ ವೆಬ್ ಸೈಟ್​ನಲ್ಲಿ ಶಾಮಿ ಎಮ್ ಐ 11 ಲೈಟ್ ಎನ್ಈ 5 ಜಿ ಪೋನಿನ ಬೆಲೆ 26,999 ಅಂತ ಸೂಚಿಸಲಾಗಿದೆ. ಆದರೆ ಗ್ರಾಹಕರು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳನ್ನು ಬಳಸಿ 2,000 ರೂ. ಗಳ ರಿಯಾಯಿತಿ ಪಡೆಯಬಹುದಾಗಿದೆ. ಇದಲ್ಲದೆ, ಶಾಮಿ ಕಂಪನಿಯು ರಿವಾರ್ಡ್ ಎಮ್ ಐ ಕೂಪನ್ ಒಂದಿಗೆ ರೂ. 3,000 ಗಳ ಡಿಸ್ಕೌಂಟ್ ಸಹ ನೀಡುತ್ತಿದೆ. ಹೀಗಾಗಿ, ಒಟ್ಟು 5,000 ರೂ. ಗಳ ರಿಯಾಯಿತಿಯನ್ನು ಗಣನೆಗೆ ತೆಗೆದುಕೊಂಡರೆ, ನಿಮಗೆ ರೂ. 21,999 ರೂ. ಗಳಿಗೆ ಫೋನ್ ದೊರಕಲಿದೆ.

ಶಾಮಿ ಎಮ್ ಐ 11 ಲೈಟ್ ಎನ್ಈ 5 ಜಿ ಫೋನಲ್ಲಿ ಅಳವಡಿಸಿರುವ ಕೆಮೆರಾಗಳ ಬಗ್ಗೆ ಮಾತಾಡುವುದಾದರೆ, ಹಿಂಭಾಗದಲ್ಲಿರುವ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕೆಮೆರಾ, 8 ಮೆಗಾಪಿಕ್ಸೆಲ್ ಕೆಮೆರಾ, ಮತ್ತು 5 ಮೆಗಾಪಿಕ್ಸೆಲ್ ಕೆಮೆರಾಗಳನ್ನು ಒಳಗೊಂಡ ಟ್ರಿಪಲ್ ಕೆಮೆರಾ ಸೆಟಪ್ ಇದೆ. ಸೆಲ್ಫಿಗಾಗಿ ಸಿಂಗಲ್ ಫ್ರಂಟ್ ಕೆಮೆರಾ ಸೆಟಪ್ ಇದ್ದು, 20 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ.

ಇದನ್ನೂ ಓದಿ:  Terrorists Attack: ಜಮ್ಮು ಕಾಶ್ಮೀರದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ; ವಿಡಿಯೋದಿಂದ ಬಯಲು

Click on your DTH Provider to Add TV9 Kannada