ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆರಳಿಗೆ ಚುಚ್ಚಿದ ಒಂದು ಗುಂಡುಸೂಜಿಯ ಕತೆ!

|

Updated on: Aug 27, 2024 | 2:38 PM

ವಿಧಾನಸೌಧ, ವಿಕಾಸಸೌಧ ಅಥವಾ ಬೇರೆ ಯಾವುದೇ ಸರ್ಕಾರಿ, ಅರೆ ಸರ್ಕಾರೀ ಇಲ್ಲವೇ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕಾರಕೂನರ ಬೆರಳುಗಳಿಗೆ ಪ್ರತಿದಿನ ಗುಂಡುಸೂಚಿ ಚುಚ್ಚುತ್ತದೆ. ರಕ್ತ ಬಂದರೆ ಹೆಚ್ಚಿನವರು ಬೆರಳನ್ನು ಒಂದರೆಘಳಿಗೆ ಬಾಯಲ್ಲಿಟ್ಟುಕೊಂಡು ಪ್ರಥಮ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಮನೆಗೆ ಹೋದ ಮೇಲೆ ಹೆಂಡತಿ ಮಕ್ಕಳಿಗೂ ಅದನ್ನು ಅವರು ಹೇಳಲಾರರು! ಆದರೆ ಸಿಎಂಗೆ ಚುಚ್ಚಿದರೆ ರಾಜ್ಯಾದ್ಯಂತ ಸುದ್ದಿಯಾಗುತ್ತದೆ!

ಬೆಂಗಳೂರು: ನಮ್ಮ ರಾಜಕಾರಣಿಗಳಿಗೆ ಮುಖ್ಯಮಂತ್ರಿಯಾಗುವ ಹೆಬ್ಬಯಕೆ ಇರೋದು ಇದೇ ಕಾರಣಕ್ಕಾ ಅಂತ ಅನುಮಾನ ಮೂಡುತ್ತದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕಚೇರಿಯ ಮುಂದೆ ನೆರೆದಿರುವ ಜನರ ಆತಂಕಭರಿತ ಮುಖಗಳನ್ನು ಒಮ್ಮೆ ನೋಡಿ. ಸಿದ್ದರಾಮಯ್ಯನವರಿಗೆ ಆಗಿರುವ ಗಾಯದ ಬಗ್ಗೆ ಅವರಲ್ಲಿ ಚಿಂತೆ ಮೂಡಿದೆ. ಮುಖ್ಯ ಮಂತ್ರಿಯವರಿಗೆ ಚಿಕಿತ್ಸೆ ನೀಡಲು ಒಬ್ಬ ವೈದ್ಯ ಮತ್ತೊಬ್ಬ ನರ್ಸ್ ಪ್ರಥಮ ಚಿಕಿತ್ಸೆ ಕಿಟ್ ನೊಂದಿಗೆ ಧಾವಿಸಿದ್ದಾರೆ. ಕಚೇರಿ ಮುಂದಿನ ವಾತಾವರಣ ನೋಡಿದರೆ ಸಿದ್ದರಾಮಯ್ಯನವರಿಗೆ ದೊಡ್ಡಗಾಯವೇ ಆಗಿರಬಹುದೆಂಬ ಶಂಕೆ ಮೂಡದಿರದು. ಸೂಟು ಬೂಟು ಧರಿಸಿದ್ದ ಅಧಿಕಾರಿಯೊಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ವಸ್ತುಸ್ಥಿತಿಯನ್ನು ವಿವರಿಸುತ್ತಾರೆ. ಮುಖ್ಯಮಂತ್ರಿಯವರು ಅರ್ಜಿಯೊಂದನ್ನು ಪರಿಶೀಲಿಸುವಾಗ ಅದಕ್ಕಿದ್ದ ಗುಂಡುಸೂಜಿ ಕೈಗೆ ಚುಚ್ಚಿ ರಕ್ಕ ಬಂದು ಬಿಟ್ಟಿತ್ತಂತೆ! ದೊಡ್ಡವರಿಗೆ ಅದು ದೊಡ್ಡ ಗಾಯವೇ. ವೈದ್ಯರು ಧಾವಿಸಿದ್ದು ಅದೇ ಗಾಯಕ್ಕೆ ಡ್ರೆಸ್ಸಿಂಗ್ ಮಾಡಿ ವೈದ್ಯೋಪಚಾರ ನೀಡಲು. ಚಿಕಿತ್ಸೆಯ ಬಳಿಕ ಮುಖ್ಯಮಂತ್ರಿಯವರು ವಿಶ್ರಾಂತಿಗಾಗಿ ತೆರಳಿದರೆ? ಅಧಿಕಾರಿ ಅದರ ಬಗ್ಗೆ ಹೇಳಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮುಡಾ ಹಗರಣ: ವಿಡಿಯೋ ಸಮೇತ ‘ವೈಟ್ನರ್‌’ ಹಿಂದಿರುವ ಅಸಲಿ ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ