ವಿಜಯಪುರದ ಹುಣಶ್ಯಾಳ ಗ್ರಾಮದಲ್ಲಿ ನಾಯಿಯೊಂದು ಮಾನವರಂತೆಯೇ ಗುಡಿಯ ಪ್ರದಕ್ಷಿಣೆ ಹಾಕುತ್ತದೆ!

ವಿಜಯಪುರದ ಹುಣಶ್ಯಾಳ ಗ್ರಾಮದಲ್ಲಿ ನಾಯಿಯೊಂದು ಮಾನವರಂತೆಯೇ ಗುಡಿಯ ಪ್ರದಕ್ಷಿಣೆ ಹಾಕುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 10, 2023 | 3:04 PM

ಇದು ಸಾಕು ನಾಯಿಯೋ ಅಥವಾ ಬೀದಿ ನಾಯಿಯೋ ಅಂತ ಸ್ಪಷ್ಟವಾಗಿಲ್ಲ. ಗುಡಿಗೆ ಪೂಜೆ ಸಲ್ಲಿಸಿರುವ ಬರುವ ಜನರು ಪ್ರದಕ್ಷಿಣೆ ಹಾಕುವುದನ್ನು ನೋಡಿ ಪ್ರಾಯಶಃ ನಾಯಿಯಲ್ಲಿ ಕುತೂಹಲ ಹುಟ್ಟಿರಬಹುದು.

ವಿಜಯಪುರ: ಮಾನವರಂತೆ ಗುಡಿಯೊಂದರ ಸುತ್ತ ಪ್ರದಕ್ಷಿಣೆ (circumambulate) ಹಾಕುತ್ತಿರುವ ನಾಯಿಯ (dog) ದೃಶ್ಯ ವೈರಲ್ ಆಗಿದೆ. ಸ್ಥಳೀಯ ಜನ ಶ್ವಾನದ ಭಕ್ತಿಕಂಡು ಆಶ್ಚರ್ಯಚಕಿತರಾಗಿದ್ದಾರೆ. ಅಂದಹಾಗೆ ಈ ದೃಶ್ಯ ಕಂಡುಬಂದಿದ್ದು ಜಿಲ್ಲೆಯ ಬಸವನ ಬಾಗೇವಾಡಿ (Basavan Bagewadi) ತಾಲ್ಲೂಕಿನ ಹುಣಶ್ಯಾಳ ಪಿ ಬಿ ಗ್ರಾಮದಲ್ಲಿ. ಗ್ರಾಮದ ಮೂಲಕ ರಾಜ್ಯ ಹೆದ್ದಾರಿ ಹಾದುಹೋಗುತ್ತದೆ ಮತ್ತು ರಸ್ತೆಯ ಪಕ್ಕದಲ್ಲೇ ವಿಡಿಯೋದಲ್ಲಿ ಕಾಣುತ್ತಿರುವ ಲಕ್ಕಮ್ಮ ಗುಡಿಯಿದೆ. ಇದಕ್ಕೂ ಮೊದಲು ನೀವು ಇಂಥ ದೃಶ್ಯವನ್ನು ನೋಡಿರಲಿಕ್ಕಲ್ಲ. ಇದು ಸಾಕು ನಾಯಿಯೋ ಅಥವಾ ಬೀದಿ ನಾಯಿಯೋ ಅಂತ ಸ್ಪಷ್ಟವಾಗಿಲ್ಲ. ಗುಡಿಗೆ ಪೂಜೆ ಸಲ್ಲಿಸಿರುವ ಬರುವ ಜನರು ಪ್ರದಕ್ಷಿಣೆ ಹಾಕುವುದನ್ನು ನೋಡಿ ಪ್ರಾಯಶಃ ನಾಯಿಯಲ್ಲಿ ಕುತೂಹಲ ಹುಟ್ಟಿರಬಹುದು. ಹಾಗಾಗೇ, ಅವರಂತೆ ತಾನು ಸಹ ಗುಡಿ ಸುತ್ತ ಪ್ರದಕ್ಷಿಣೆ ಹಾಕುತ್ತಿದೆ. ಒಂದು ಸಂಗತಿಯನ್ನು ನಾವಿಲ್ಲಿ ಗಮನಿಸಬೇಕಿದೆ, ನಾಯಿ ಆಹಾರ ಅರಸುತ್ತಾ ಗುಡಿಯ ಪ್ರದಕ್ಷಿಣೆ ಹಾಕುತ್ತಿಲ್ಲ, ಹುಣಶ್ಯಾಳ ಗ್ರಾಮದ ಜನ ಪ್ರತಿನಿತ್ಯ ಮಾಡುವುದನ್ನು ಅನುಕರಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ