Dinesh Gundu Rao: ಆರೋಗ್ಯ ಸಚಿವರೇ, ಎಲ್ಲ ಕೆಲಸ ಬದಿಗಿಟ್ಟು ಚಾಮರಾಜನಗರಕ್ಕೆ ಹೋಗಿ, ಜಿಲ್ಲಾಸ್ಪತ್ರೆ ಅಧೋಗತಿ ತಲುಪಿದೆ!

ಅರುಣ್​ ಕುಮಾರ್​ ಬೆಳ್ಳಿ

Updated on: May 29, 2023 | 3:58 PM

ಅರೋಗ್ಯ ಸಚಿವರೇ, ರಾಜ್ಯದ ಜನತೆ ಬದಲಾವಣೆ ಬಯಸಿ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ, ದೂರುವ ಅವಕಾಶ ಅವರಿಗೆ ಕೊಡಬೇಡಿ.

ಚಾಮರಾಜನಗರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್   (Dinesh Gundu Rao) ಅವರೇ, ಈ ವಿಡಿಯೋ ಎಕ್ಸ್ ಕ್ಲ್ಯೂಸಿವ್ಲೀ ನಿಮಗಾಗಿ. ವಿಡಿಯೋ ಕಾಣುತ್ತಿರುವ ಹಾಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯ (district hospital) ಇಂಥ ಹೀನ ಸ್ಥಿತಿಗೆ ಖಂಡಿತ ನೀವು ಕಾರಣರಲ್ಲ. ಆದರೆ ಇದನ್ನು ಕೂಡಲೇ ಸರಿಮಾಡುವ ಹೊಣೆಗಾರಿಕೆ (responsibility) ನಿಮ್ಮ ಮೇಲಿದೆ. ಇಲ್ಲಿನ ದುರವಸ್ಥೆಯನ್ನು ಕೊಂಚ ಗಮನಿಸಿ. ಕಡು ಬೇಸಿಗೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವ ರೋಗಿಗಳು ಸೆಕೆಯ ಬಗ್ಗೆ ದೂರಬಾರದು, ಆರಾಮವಾಗಿ ನಿದ್ರಿಸಬೇಕು ಅಂತಾದರೆ ಅದಕ್ಕೆ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂದರೆ ಮನೆಯಿಂದ ತಾವೇ ಫ್ಯಾನ್ ತಂದುಕೊಳ್ಳಬೇಕು! ಎಲ್ಲೂ ಕಂಡು ಕೇಳಿರಿಯದ ಸ್ಥಿತಿ ಇದು. ಅರೋಗ್ಯ ಸಚಿವರೇ, ರಾಜ್ಯದ ಜನತೆ ಬದಲಾವಣೆ ಬಯಸಿ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ, ದೂರುವ ಅವಕಾಶ ಅವರಿಗೆ ಕೊಡಬೇಡಿ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.