International Yoga Day 2023; ಸಂಪುಟದಲ್ಲಿರುವ ವಿವೇಕಹೀನ ಸಚಿವರಿಗೆ ಸಿದ್ದರಾಮಯ್ಯ ಓರಿಯೆಂಟೇಶನ್ ಶಿಬಿರ ಆಯೋಜಿಸಲಿ: ಪ್ರತಾಪ್ ಸಿಂಹ
ಸತೀಶ್ ಜಾರಕಿಹೊಳಿಯವರ ಹೇಳಿಕೆಯಿಂದ ಖುದ್ದು ಅವರ ಸರ್ಕಾರಕ್ಕೆ ಮುಜುಗುರವಾಗುತ್ತದೆ, ಇನ್ನು ಮುಂದಾದರೂ ಅವರು ಮಾತಾಡುವ ಮೊದಲು ಯೋಚಿಸಲಿ ಎಂದು ಸಂಸದ ಹೇಳಿದರು.
ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರ ಎನಿಸಿಕೊಂಡಿರುವ ಮೈಸೂರಲ್ಲಿ ಕಳೆದ ಬಾರಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಭಾಗವಹಿಸಿದ್ದರು. ಆದರೆ ಈ ವರ್ಷ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಅರಮನೆ ಮೈದಾನದಲ್ಲಿ ಇಂದು ನಡೆದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ (Pratap Simha) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಸರ್ವರ್ ಹ್ಯಾಕ್ ಆಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾಡಿರುವ ಆಪಾದನೆಗೆ ಪ್ರತಿಕ್ರಿಯಿಸಿದ ಸಂಸದ, ಸಿದ್ದರಾಮಯ್ಯ ಸಂಪುಟದಲ್ಲಿ ವಿವೇಕಹೀನ ಸಚಿವರಿದ್ದಾರೆ, ವಿಷಯದ ಬಗ್ಗೆ ಯಾವುದೇ ಜ್ಞಾನವಿಲ್ಲದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಮುಖ್ಯಾಮಂತ್ರಿಗಳು ಇಂಥವರಿಗೆಲ್ಲ ಒಂದು ಓರಿಯೆಂಟೇಶನ್ ಶಿಬಿರ ಏರ್ಪಡಿಸಬೇಕು ಎಂದು ನಗುತ್ತಾ ಹೇಳಿದರು. ಸತೀಶ್ ಜಾರಕಿಹೊಳಿಯವರ ಹೇಳಿಕೆಯಿಂದ ಖುದ್ದು ಅವರ ಸರ್ಕಾರಕ್ಕೆ ಮುಜುಗುರವಾಗುತ್ತದೆ, ಇನ್ನು ಮುಂದಾದರೂ ಅವರು ಮಾತಾಡುವ ಮೊದಲು ಯೋಚಿಸಲಿ ಎಂದು ಸಂಸದ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ