Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad: ಹಿರಿಯ ನಾಗರಿಕರೊಬ್ಬರು ಗ್ರಾಮ ಪಂಚಾಯಿತಿ ಸದಸ್ಯೆಯ ಮೇಲೆ ಸಾರ್ವಜನಿಕವಾಗಿ ರೇಗಾಡಿದ್ದು ಸರಿಯಲ್ಲ

Dharwad: ಹಿರಿಯ ನಾಗರಿಕರೊಬ್ಬರು ಗ್ರಾಮ ಪಂಚಾಯಿತಿ ಸದಸ್ಯೆಯ ಮೇಲೆ ಸಾರ್ವಜನಿಕವಾಗಿ ರೇಗಾಡಿದ್ದು ಸರಿಯಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 26, 2023 | 11:46 AM

ಹಿರಿಯ ನಾಗರಿಕರ ರಕ್ತದೊತ್ತ ಇದ್ದಕ್ಕಿದ್ದಂತೆ ಹೆಚ್ಚಾಗಿ ಸದಸ್ಯೆಗೆ ನೀನೆಂಥ ಪ್ರತಿನಿಧಿ ಅಂತ ರೇಗಾಡಲಾರಂಭಿಸುತ್ತಾರೆ.

ಧಾರವಾಡ: ಇಲ್ಲೊಬ್ಬ ಹಿರಿಯ ನಾಗರಿಕರು (senior citizens) ಜಿಲ್ಲೆಯ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರೊಬ್ಬರನ್ನು (female GP member) ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ದೂರು ಏನೆಂದರೆ ಧಾರವಾಡ ನಗರದ ಹೊರವಲಯದಲ್ಲಿರುವ ಸಾಧುನವರ್ ಎಸ್ಟೇಟ್ (Sadhunavar estate) ಮೂಲಕ ಹರಿಯುವ ಹಳ್ಳದಲ್ಲಿ ರಾಸಾಯನಿಕ ಮಿಶ್ರಿತ ನೀರು ಬರುತ್ತಿದೆ. ಅದನ್ನು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಸದಸ್ಯೆ ಏನೋ ಸಮಜಾಯಿಷಿ ನೀಡಲು ಪ್ರಯತ್ನಿಸುತ್ತಾರೆ. ಅವರ ಮಾತಿನಿಂದ ಹಿರಿಯ ನಾಗರಿಕರಿಗೆ ಸಮಾಧಾನವಾಗದು. ಅಲ್ಲಿ ನೆರೆದ ಬೇರೆ ನಾಗರಿಕರು ಸಹ ಅವರ ಪರವಾಗಿಯೇ ಮಾತಾಡುತ್ತಾರೆ. ಆದರೆ ಹಿರಿಯ ನಾಗರಿಕರ ರಕ್ತದೊತ್ತ ಇದ್ದಕ್ಕಿದ್ದಂತೆ ಹೆಚ್ಚಾಗಿ ಸದಸ್ಯೆಗೆ ನೀನೆಂಥ ಪ್ರತಿನಿಧಿ ಅಂತ ರೇಗಾಡಲಾರಂಭಿಸುತ್ತಾರೆ. ಅದು ಬೇಕಿರಲಿಲ್ಲ, ಹಿರಿಯರೊಬ್ಬರು ಸಾರ್ವಜನಿಕವಾಗಿ ಹೀಗೆ ಒಬ್ಬ ಮಹಿಳಾ ಜನಪ್ರತಿನಿಧಿಯೊಂದಿಗೆ ವರ್ತಿಸುವುದು ಸರಿಯಲ್ಲ. ತಮ್ಮ ಸಮಸ್ಯೆಯನ್ನು ಶಾಂತ ರೀತಿಯಿಂದ ಸಮಾಧಾನದಿಂದ ಹೇಳಿಕೊಳ್ಳಬಹುದಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ