AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Senior Citizens IT Returns: ಹಿರಿಯ ನಾಗರಿಕರು ಐಟಿ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ; ಷರತ್ತುಗಳು ಅನ್ವಯ

75 ವರ್ಷ ಮೇಲ್ಪಟ್ಟವರು ಆದಾಯ ತೆರಿಗೆ ರಿಟರ್ನ್ಸ್​ ಅನ್ನು ಫೈಲ್ ಮಾಡುವ ಅಗತ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಷರತ್ತುಗಳು ಅನ್ವಯಿಸುತ್ತದೆ.

Senior Citizens IT Returns: ಹಿರಿಯ ನಾಗರಿಕರು ಐಟಿ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ; ಷರತ್ತುಗಳು ಅನ್ವಯ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on:Sep 07, 2021 | 11:56 AM

Share

2021-22ರ ಹಣಕಾಸು ವರ್ಷದಿಂದ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಯಾರು ಪೆನ್ಷನ್ ಮತ್ತು ಫಿಕ್ಸೆಡ್​ ಡೆಪಾಸಿಟ್​​ಗಳ ಮೂಲಕ ಆದಾಯ ಗಳಿಸುವವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ. ಆದರೆ ಅವರು ಕೆಲವು ನಿಯಮಗಳನ್ನು ಪೂರ್ತಿ ಮಾಡಬೇಕಾಗುತ್ತದೆ. ಅದರ ಬದಲಿಗೆ ತಮ್ಮ ಆದಾಯವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ (CBDT) ಅಧಿಸೂಚನೆ ಹೊರಡಿಸಿದ ಫಾರ್ಮ್ 12BBAನಲ್ಲಿ ಭರ್ತಿ ಮಾಡಬೇಕು. ಯಾವ ನಿರ್ದಿಷ್ಟ ಬ್ಯಾಂಕ್​ನಲ್ಲಿ ಖಾತೆ ಹೊಂದಿರುತ್ತಾರೋ ಮತ್ತು ಪೆನ್ಷನ್ ಬರುತ್ತದೋ ಅಲ್ಲಿಗೆ ಈ ಫಾರ್ಮ್ ಸಲ್ಲಿಸಬೇಕು. ಸಿಬಿಡಿಟಿ ತಿಳಿಸಿರುವುದನ್ನೇ ಹೇಳುವುದಾದರೆ, ಬಹುತೇಕ ಶೆಡ್ಯೂಲ್ಡ್ ಬ್ಯಾಂಕ್​ಗಳು ನಿರ್ದಿಷ್ಟ ಬ್ಯಾಂಕ್​ಗಳು ಎನಿಸಿಕೊಳ್ಳುವುದಕ್ಕೆ ಅರ್ಹವಾಗುತ್ತವೆ.

ಕಾಗದದ ಕೆಲಸಗಳು ಕಡಿಮೆ, ಟ್ಯಾಕ್ಸ್ ಕನ್ಸಲ್ಟೆಂಟ್​ಗಳನ್ನು ಭೇಟಿ ಆಗಬೇಕಿಲ್ಲ 2021ರ ಕೇಂದ್ರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂಥ ಹಿರಿಯ ನಾಗರಿಕರಿಗೆ ವಿನಾಯಿತಿ ಘೋಷಣೆ ಮಾಡಿದ್ದರು. ಸೆಕ್ಷನ್ 80C, 80D ಸೇರಿದಂತೆ ಚಾಪ್ಟರ್ VI-A ಕಡಿತವನ್ನು ಗಣನೆಗೆ ತೆಗೆದುಕೊಂಡ ನಂತರ ಅನ್ವಯ ಆಗುವ ತೆರಿಗೆಯನ್ನು ಮೂಲದಲ್ಲೇ ಕಡಿತ ಮಾಡುವುದು ಬ್ಯಾಂಕ್​ಗಳ ಜವಾಬ್ದಾರಿ ಆಗುತ್ತದೆ. ಆದ್ದರಿಂದ ಅಂಥ ಹಿರಿಯ ನಾಗರಿಕರು ಪ್ರತ್ಯೇಕವಾಗಿ ತೆರಿಗೆ ಪಾವತಿಸಬೇಕಿಲ್ಲ. ಜತೆಗೆ ಕಾಗದ-ಪತ್ರಗಳ ವ್ಯವಹಾರ ಕಡಿಮೆಯಾಗಿ, ತೆರಿಗೆ ಕನ್ಸಲ್ಟೆಂಟ್​ಗಳನ್ನು ಭೇಟಿ ಆಗಬೇಕಾಗುವುದಿಲ್ಲ.

ಇದು ಉತ್ತಮವಾದ ಹೆಜ್ಜೆ. ಹಿರಿಯ ನಾಗರಿಕರು ಬ್ಯಾಂಕ್​ಗಳ ಅಧಿಕಾರಿಗಳ ಜತೆಗೆ ವ್ಯವಹರಿಸುವಾಗ ನಂಬಿಕೆಯ ಸಂಗತಿ ಕೂಡ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇ-ಫೈಲಿಂಗ್​ ಅನುಕೂಲಕರವಾಗಿ ಇರುವಾಗ ಹಲವರು ಆನ್​ಲೈನ್ ವಿಧಾನದಲ್ಲಿ ಆರಾಮವಾಗಿ ಇಲ್ಲ. ಭವಿಷ್ಯದಲ್ಲಿ ಇದಿನ್ನೂ ಹೆಚ್ಚು ಆಟೋಮೆಟೆಡ್ ಆಗಲಿದೆ. ಪ್ರೀ-ಫಿಲ್ಡ್ ಘೋಷಣೆ ದೊರೆಯುವಂತೆ ಮಾಡಲಾಗುವುದು ಎಂದು ತಜ್ಞರು ಹೇಳುತ್ತಾರೆ. ಇನ್ನು ಅವರ ಬ್ಯಾಂಕ್​ಗಳ ಬಳಿ ದೊಡ್ಡ ಮಟ್ಟದಲ್ಲಿ ಎಲ್ಲ ಮಾಹಿತಿ ಇರುವುದರಿಂದ ಸಂಪೂರ್ಣ ಪ್ರಕ್ರಿಯೆ ಸರಾಗವಾಗಿ ಆಗುತ್ತದೆ ಎಂದು ಕೂಡ ಸೇರಿಸುತ್ತಾರೆ.

ಹಲವು ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಕಾನೂನುಗಳು ಸುಲಭದ್ದಲ್ಲ ಮತ್ತು ಇ-ಫೈಲಿಂಗ್ ಅನ್ನೋದು ಅಡೆತಡೆ ಇದ್ದಂತೆ. ಈ ವಿನಾಯಿತಿ ಮೂಲಕ ಹಿರಿಯ ನಾಗರಿಕರ ಜೀವನ ಸಲೀಸಾಗುತ್ತದೆ. ಯಾರಿಗೆ ಹೆಚ್ಚಿನ ದರದಲ್ಲಿ ತೆರಿಗೆ ಕಡಿತ ಆಗುತ್ತಿತ್ತೋ ಅವರಿಗೂ ಇದರಿಂದ ಅನುಕೂಲ ಆಗಲಿದೆ. ಒಂದು ಉದಾಹರಣೆ ನೋಡಿ, ಒಬ್ಬ ಹಿರಿಯ ನಾಗರಿಕರಿಗೆ ವಾರ್ಷಿಕವಾಗಿ 6 ಲಕ್ಷ ರೂಪಾಯಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯ ಇದೆ ಅಂತಿಟ್ಟುಕೊಳ್ಳಿ. ಅವರ ಬ್ಯಾಂಕ್​​ನಿಂದ ಫಿಕ್ಸೆಡ್​ ಡೆಪಾಸಿಟ್​ ಮೇಲಿನ ಬಡ್ಡಿಗೆ ಶೇ 10ರಷ್ಟು ಟಿಡಿಎಸ್​ ಹಿಡಿಯುತ್ತಾರೆ. ಆದರೆ ತೆರಿಗೆ ಸ್ಲ್ಯಾಬ್​ನ ಲೆಕ್ಕಾಚಾರ ನೋಡಿದರೆ, ಪರಿಣಾಮಕಾರಿ ದರ ಅಂದರೆ ಶೇ 5.6ರಷ್ಟು ಮಾತ್ರ. ಒಂದು ವೇಳೆ ಅವರು 12BBA ಮಾರ್ಗ ಅನುಸರಿಸಿದಲ್ಲಿ ಶೇ 5.6ರಷ್ಟು ಮಾತ್ರ ತೆರಿಗೆ ಕಡಿತ ಆಗುತ್ತದೆ. ತೆರಿಗೆ ಇಲಾಖೆಯಿಂದ ಮರುಪಾವತಿಗೆ ಕ್ಲೇಮ್ ಮಾಡಬೇಕಾದ ಅಗತ್ಯ ಇರುವುದಿಲ್ಲ.

ವಿಪರೀತ ಷರತ್ತುಗಳು ವಿನಾಯಿತಿಗೆ ಅದರದೇ ಮಿತಿಗಳಿವೆ. ಹಿರಿಯ ನಾಗರಿಕರ ಮೇಲೆ ನಿಯಮಗಳ ಹೊರೆ ಬೀಳಬಾರದು ಎಂಬ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಹಿರಿಯ ನಾಗರಿಕರಿಗೆ ಬಹಳ ಮಂದಿಗೆ ಇದರಿಂದ ಅನುಕೂಲ ಆಗುವ ಸಾಧ್ಯತೆ ಇಲ್ಲ; ಏಕೆಂದರೆ ಅದಕ್ಕೆ ಅರ್ಹತೆ ಷರತ್ತುಗಳನ್ನು ಸೇರಿಸಲಾಗಿದೆ. ಮುಖ್ಯವಾಗಿ, ಹಿರಿಯ ನಾಗರಿಕರಿಗೆ ಪೆನ್ಷನ್ ಮತ್ತು ಬಡ್ಡಿ ಹೊರತಾದ ಬೇರೆ ಆದಾಯ ಇರಬಾರದು. ಆದರೆ ಹಲವು ಹಿರಿಯ ನಾಗರಿಕರು ಪೆನ್ಷನ್ ಮತ್ತು ಫಿಕ್ಸೆಡ್ ಡೆಪಾಸಿಟ್​ಗಳ ಮೂಲಕ ಆದಾಯ ಗಳಿಸುತ್ತಾರೆ.

ಇದರ ಜತೆಗೆ ಹಲವು ಹಿರಿಯ ನಾಗರಿಕರಿಗೆ ಒಂದಕ್ಕಿಂತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್​ನಲ್ಲಿ ಖಾತೆ ಹೊಂದಿರುತ್ತಾರೆ. ಅಂಥ ಹಿರಿಯ ನಾಗರಿಕರಿಗೆ ವಿನಾಯಿತಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಹಲವು ಬ್ಯಾಂಕ್​ಗಳಲ್ಲಿ ಖಾತೆ ಇರುವವರು ಈ ವ್ಯವಸ್ಥೆ ಪಡೆಯಲು ಎಲ್ಲವನ್ನೂ ಒಗ್ಗೂಡಿಸಬೇಕು ಎನ್ನುತ್ತಾರೆ ವಿಷಯ ತಜ್ಞರು. ಇದಕ್ಕಿಂತ ಹೆಚ್ಚಾಗಿ ಹಲವು ಹಿರಿಯ ನಾಗರಿಕರು ಕಂಪೆನಿ ಫಿಕ್ಸೆಡ್​ ಡೆಪಾಸಿಟ್​ಗಳು, ಲಿಕ್ವಿಡ್​ ಫಂಡ್​ಗಳು ಮತ್ತು ಇತರ ಸಾಲದ ಇನ್​ಸ್ಟ್ರುಮೆಂಟ್​ಗಳಿಂದ ಹೆಚ್ಚಿನ ರಿಟರ್ನ್ಸ್​ ಪಡೆಯುತ್ತಾರೆ. ಮತ್ತು ಅವರಿಗೆ ಸಹ ವ್ಯವಸ್ಥೆ ದೊರೆಯುವುದಿಲ್ಲ.

ಸೆಕ್ಷನ್ 80C ಪ್ರೂಫ್ ಸಲ್ಲಿಕೆ ಕಡ್ಡಾಯ ಒಂದು ವೇಳೆ ಸೆಕ್ಷನ್ 80C ಅಥವಾ 80D ಅಡಿಯಲ್ಲಿ ಕ್ಲೇಮ್ ಮಾಡಲು ಬಯಸಿದರೆ ಬ್ಯಾಂಕ್​ಗೆ ಪ್ರೂಫ್​ ಸಲ್ಲಿಸಬೇಕು. ಸಿಬಿಡಿಟಿಯ ಅಧಿಸೂಚನೆ ಪ್ರಕಾರ, “ಚಾಪ್ಟರ್ VI-A ಅಡಿಯಲ್ಲಿ ಕಡಿತಕ್ಕೆ ನೀಡುವ ಅವಕಾಶವನ್ನು ಬಳಸಿಕೊಳ್ಳಬೇಕಾದರೆ ಆಯಾ ಹಿರಿಯ ನಾಗರಿಕರು ಹಿಂದಿನ ವರ್ಷಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನು ನೀಡಬೇಕಾಗುತ್ತದೆ.”

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್ ಕೊನೆ ದಿನಾಂಕ ಸೆಪ್ಟೆಂಬರ್ 30ರ ತನಕ ವಿಸ್ತರಣೆ

Income Tax: ಹೆಚ್ಚುವರಿಯಾಗಿ ಪಾವತಿಸಿದ ಬಡ್ಡಿ, ವಿಳಂಬ ಶುಲ್ಕ ಹಿಂತಿರುಗಿಸಲಿದೆ ಆದಾಯ ತೆರಿಗೆ ಇಲಾಖೆ

(Senior Citizens Exempt From Filing Income Tax Returns But Conditions Apply)

Published On - 11:54 am, Tue, 7 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ