AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cairn energy: ಭಾರತದ ವಿರುದ್ಧ ಎಲ್ಲ ವ್ಯಾಜ್ಯಗಳನ್ನು ಕೈಬಿಡಲು ಕೇರ್ನ್ ಎನರ್ಜಿ ಒಪ್ಪಿಗೆ

ಪೂರ್ವಾನ್ವಯ ತೆರಿಗೆ ವಿಚಾರವಾಗಿ ಭಾರತ ಸರ್ಕಾರದ ವಿರುದ್ಧ ಹೂಡಿದ್ದ ಎಲ್ಲ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಕೇರ್ನ್ ಎನರ್ಜಿ ಒಪ್ಪಿಕೊಂಡಿದೆ.

Cairn energy: ಭಾರತದ ವಿರುದ್ಧ ಎಲ್ಲ ವ್ಯಾಜ್ಯಗಳನ್ನು ಕೈಬಿಡಲು ಕೇರ್ನ್ ಎನರ್ಜಿ ಒಪ್ಪಿಗೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 07, 2021 | 4:18 PM

ಯುನೈಟೆಡ್​ ಕಿಂಗ್​ಡಮ್​ (ಯು.ಕೆ.) ಮೂಲದ ಕೇರ್ನ್ ಎನರ್ಜಿ ಪಿಎಲ್‌ಸಿ ಮಂಗಳವಾರಂದು ಹೇಳಿರುವ ಪ್ರಕಾರ, ಫ್ರಾನ್ಸ್‌ನಿಂದ ಅಮೆರಿಕದವರೆಗೆ ಭಾರತ ಸರ್ಕಾರದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ವ್ಯಾಜ್ಯಗಳನ್ನು ಇನ್ನು ಕೆಲ ದಿನಗಳಲ್ಲೇ ಕೈಬಿಡಲಿದೆ. ಪೂರ್ವಾನ್ವಯ ತೆರಿಗೆ ಕಾನೂನು ಕೈ ಬಿಟ್ಟು, ಅದರ ಫಲಿತಾಂಶವಾಗಿ 100 ಕೋಟಿ ಅಮೆರಿಕನ್ ಡಾಲರ್ ಮರುಪಾವತಿ ಆದ ಮೇಲೆ ಹೀಗೆ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ. ಭಾರತಕ್ಕೆ ತನ್ನ ಅತಿದೊಡ್ಡ ಒಳನಾಡಿನ ತೈಲ ನಿಕ್ಷೇಪ ನೀಡಿದ ಸಂಸ್ಥೆ ಕೇರ್ನ್, “ದಿಟ್ಟ” ಎಂದು ಕರೆಯಲಾಗುವ ಕಾನೂನು ಜಾರಿಗೊಳಿಸಿ, 2012ರ ನೀತಿಯನ್ನು ಕೇಂದ್ರ ಸರ್ಕಾರದಿಂದ ರದ್ದುಗೊಳಿಸಲಾಯಿತು. ಅದಕ್ಕೂ ಮುನ್ನ ಹೇಗಿತ್ತು ಅಂದರೆ, 50 ವರ್ಷಗಳ ಹಿಂದಿನ ಕ್ಯಾಪಿಟಲ್​ ಗೇಯ್ನ್ಸ್ ತೆರಿಗೆಯನ್ನು ವಿಧಿಸಬಹುದಿತ್ತು. ಅದು ಆ ವಾಣಿಜ್ಯ ಆಸ್ತಿ ಭಾರತದಲ್ಲಿ ಇದ್ದು, ಮಾಲೀಕತ್ವವು ಎಲ್ಲೇ ಬದಲಾದರೂ ತೆರಿಗೆ ಹಾಕಬಹುದಿತ್ತು. ಅಂಥದ್ದೊಂದು ಕಾನೂನು ಕಳೆದ ತಿಂಗಳು ರದ್ದು ಮಾಡಲಾಯಿತು.

ಸರ್ಕಾರದ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ಕೈ ಬಿಟ್ಟಲ್ಲಿ ಅದರ ಬದಲಿಗೆ ಈ ಹಿಂದಿನ ತೆರಿಗೆ ಬೇಡಿಕೆಯನ್ನು ಜಾರಿಗೊಳಿಸಲು ವಶಕ್ಕೆ ಪಡೆದ ಹಣವನ್ನು ಹಿಂದಿರುಗಿಸುವ ಪ್ರಸ್ತಾವಕ್ಕೆ ನಮಗೆ ಸಹಮತ ಇದೆ ಎಂದು ಕೇರ್ನ್ ಸಿಇಒ ಸೈಮನ್ ಥಾಮ್ಸನ್ ಅವರು ಲಂಡನ್‌ನಿಂದ ನೀಡಿದ ಸಂದರ್ಶನದಲ್ಲಿ ಪಿಟಿಐಗೆ ತಿಳಿಸಿದ್ದಾರೆ. ಮರುಪಾವತಿಯ ನಂತರದಲ್ಲಿ ಪ್ಯಾರಿಸ್‌ನಲ್ಲಿನ ರಾಜತಾಂತ್ರಿಕ ಅಪಾರ್ಟ್‌ಮೆಂಟ್‌ಗಳು ಮತ್ತು ಅಮೆರಿಕದಲ್ಲಿ ಏರ್ ಇಂಡಿಯಾ ವಿಮಾನಗಳನ್ನು ವಶಪಡಿಸಿಕೊಳ್ಳಲು ಕೇರ್ನ್​ನಿಂದ ಹಾಕಿರುವ ಪ್ರಕರಣಗಳನ್ನು ಕೈಬಿಡಲಾಗುವುದು ಎಂದು ಅವರು ಹೇಳಿದ್ದಾರೆ.

ದೃಷ್ಟಿಕೋನಕ್ಕೆ ಬೆಂಬಲ “ನಮ್ಮ ಕೆಲವು ಮುಖ್ಯ ಷೇರುದಾರರು ಬ್ಲ್ಯಾಕ್‌ರಾಕ್ ಮತ್ತು ಫ್ರಾಂಕ್ಲಿನ್ ಟೆಂಪಲ್‌ಟನ್​ನಂಥವರು ಈ ಆಫರ್​ ಅನ್ನು ಇಷ್ಟಪಟ್ಟಿದ್ದಾರೆ. ಮುಖ್ಯ ಪಾಲುದಾರರು ನಮ್ಮ ದೃಷ್ಟಿಕೋನವನ್ನು ಬೆಂಬಲಿಸಿದ್ದಾರೆ. ಹಲವು ವರ್ಷಗಳ ಕಾಲ ಹಾಗೇ ಉಳಿಸಿಕೊಂಡು ಹೋಗಿ, ಎರಡೂ ಕಡೆಯವರಿಗೆ ಸಮಸ್ಯೆ ಆಗುವಂಥದ್ದನ್ನು ಕೈಬಿಟ್ಟು, ಪರಿಹಾರವನ್ನು ಒಪ್ಪಿಕೊಂಡು, ಮುಂದುವರಿಯುವುದು ಉತ್ತಮ,” ಎಂದು ಅವರು ಹೇಳಿದ್ದಾರೆ. ಹೂಡಿಕೆಯ ತಾಣವಾಗಿ ಭಾರತಕ್ಕೆ ಆಗಿರುವ ಖ್ಯಾತಿಯ ಹಾನಿಯನ್ನು ಸರಿಪಡಿಸಲು ಕೋರಿ, ಸರ್ಕಾರವು ಕಳೆದ ತಿಂಗಳು ಹೊಸ ಕಾನೂನನ್ನು ಜಾರಿಗೊಳಿಸಿತು. ಟೆಲಿಕಾಂ ಗ್ರೂಪ್ ವೊಡಾಫೋನ್, ಫಾರ್ಮಾಸ್ಯುಟಿಕಲ್ಸ್ ಕಂಪೆನಿ ಸನೋಫಿ ಮತ್ತು ಬ್ರೂವರ್ SABMiller (ಈಗ ಎಬಿ ಇನ್ಬೆವ್ ಮತ್ತು ಕೇರ್ನ್ ಒಡೆತನದಲ್ಲಿದೆ)ನಂತಹ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ 1.1 ಲಕ್ಷ ಕೋಟಿ ರೂಪಾಯಿಗಳ ಬಾಕಿ ಕೈಬಿಡಲು ಕೇಂದ್ರ ಸರ್ಕಾರವು ಕಾನೂನು ರೂಪಿಸಿದೆ.

ಕೇರ್ನ್​ನಿಂದ ಬಾಕಿ ಇರುವ ಮೊಕದ್ದಮೆಗಳನ್ನು ಕೈಬಿಡಲು ಒಪ್ಪಿಕೊಂಡರೆ ರದ್ದಾದ ತೆರಿಗೆ ನಿಬಂಧನೆಗಳ ಅಡಿಯಲ್ಲಿ ಕಂಪೆನಿಗಳಿಂದ ಸಂಗ್ರಹಿಸಿದ ಸುಮಾರು 8,100 ಕೋಟಿ ರೂಪಾಯಿಗಳನ್ನು ಬಡ್ಡಿ ಮತ್ತು ದಂಡದ ಕ್ಲೇಮ್‌ಗಳು ಸೇರಿದಂತೆ ಮರುಪಾವತಿ ಮಾಡಲಾಗುವುದು. ಇದರಲ್ಲಿ 7,900 ಕೋಟಿ ಮಾತ್ರ ಕೇರ್ನ್‌ಗೆ ಬಾಕಿ ಇದೆ. “ಒಮ್ಮೆ ನಾವು ಅಂತಿಮ ನಿರ್ಣಯಕ್ಕೆ ಬಂದರೆ, ಆ ನಿರ್ಣಯದ ಒಂದು ಭಾಗವಾಗಿ ವ್ಯಾಜ್ಯದ ವಿಷಯದಲ್ಲಿ ಎಲ್ಲವನ್ನೂ ಕೈಬಿಡುತ್ತೇವೆ. ನಾವು ಅದನ್ನು ಬಹಳ ಕಡಿಮೆ ಅವಧಿಯಲ್ಲಿ ಮಾಡಬಹುದು, ಕೇವಲ ಒಂದೆರಡು ದಿನಗಳು ಅಥವಾ ಕೆಲ ದಿನಗಳಲ್ಲಿ,” ಎಂದು ಥಾಮ್ಸನ್ ಹೇಳಿದ್ದಾರೆ. “ಆದ್ದರಿಂದ ನಾವು ಈ ನಿರ್ಣಯವನ್ನು ಶೀಘ್ರವಾಗಿ ಪಡೆಯುವ ಆಧಾರದ ಮೇಲೆ ತಯಾರಿ ನಡೆಸುತ್ತಿದ್ದೇವೆ. ಈ ಎಲ್ಲ ಪ್ರಕರಣಗಳನ್ನು ಕೈಬಿಡಲಾಗುವುದು,” ಎಂದಿದ್ದಾರೆ

ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಆದೇಶ ಗೌರವಿಸದ ಭಾರತ ಪೂರ್ವಾನ್ವಯ ತೆರಿಗೆ ಬೇಡಿಕೆಯನ್ನು ಜಾರಿಗೊಳಿಸಲು ವಶಪಡಿಸಿಕೊಂಡ ಹಣದ ಮೌಲ್ಯವನ್ನು ಹಿಂತಿರುಗಿಸುವಂತೆ ಕೇಳಿದಾಗ ಭಾರತ ಸರ್ಕಾರವು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಆದೇಶವನ್ನು ಗೌರವಿಸಲು ನಿರಾಕರಿಸಿದ ಕಾರಣ ಜಾರಿಗೊಳಿಸಿದ ಎಲ್ಲ ಪ್ರಕ್ರಿಯೆಗಳನ್ನು ಕೈಬಿಡಲಾಗುವುದು ಎಂದು ಅವರು ಹೇಳಿದರು. “ಎಲ್ಲವನ್ನೂ ಕೈಬಿಡಲಾಗುವುದು. ಯಾವುದೇ ಮೊಕದ್ದಮೆ ಇರುವುದಿಲ್ಲ, ಅದು ಆಗುತ್ತದೆ. ಇದು ವಿಷಯವನ್ನು ಸ್ಪಷ್ಟಪಡಿಸುತ್ತದೆ” ಎಂದು ಅವರು ಹೇಳಿದರು. ಕೇರ್ನ್ ಮಂಗಳವಾರ ತನ್ನ ಅರ್ಧ ವಾರ್ಷಿಕ ವರದಿಯಲ್ಲಿ ಭಾರತ ಸರ್ಕಾರದಿಂದ ಪಡೆಯಬೇಕಾದ 7,900 ಕೋಟಿ ರೂಪಾಯಿಗಳಲ್ಲಿ (1.06 ಬಿಲಿಯನ್) 700 ಮಿಲಿಯನ್ ಡಾಲರ್‌ಗಳನ್ನು ಹಿಂತಿರುಗಿಸುವುದಾಗಿ ಹೇಳಿದೆ. “ತೆರಿಗೆ ಮರುಪಾವತಿಯ ಪಾವತಿಯು 500 ಮಿಲಿಯನ್ ಡಾಲರ್ ವಿಶೇಷ ಲಾಭಾಂಶ ಮತ್ತು 200 ಮಿಲಿಯನ್ ಯುಎಸ್​ಡಿವರೆಗಿನ ಷೇರು ಮರುಪಾವತಿ ಕಾರ್ಯಕ್ರಮದ ಮೂಲಕ 700 ಮಿಲಿಯನ್ ಯುಎಸ್​ಡಿ ಷೇರುದಾರರಿಗೆ ಉದ್ದೇಶಿತ ರಿಟರ್ನ್ ಅನ್ನು ಮರುಪಾವತಿಸುತ್ತದೆ. ಉಳಿದ ಹಣವನ್ನು ಕಡಿಮೆ ವೆಚ್ಚದ, ಸಮರ್ಥನೀಯ ಉತ್ಪಾದನಾ ನೆಲೆ (ಪ್ರೊಡಕ್ಷನ್ ಬೇಸ್) ಮತ್ತಷ್ಟು ವಿಸ್ತರಿಸಲು ಹಂಚಲಾಗುತ್ತದೆ,”ಎಂದು ಅದು ಹೇಳಿದೆ.

ಪೂರ್ವಾನ್ವಯ ತೆರಿಗೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಕೇರ್ನ್ ಈಗ ಭಾರತ ಸರ್ಕಾರದೊಂದಿಗೆ “ಉತ್ತಮ, ಮುಕ್ತ ಮತ್ತು ಪಾರದರ್ಶಕ ಸಂವಹನ ಮಾರ್ಗವನ್ನು” ಹೊಂದಿದೆ ಎಂದು ಥಾಮ್ಸನ್ ಹೇಳಿದ್ದಾರೆ. “ನಮ್ಮ ಗುರಿ ಒಂದು ನಿರ್ಣಯವನ್ನು ಪಡೆಯುವುದು; ಅದು ನಮ್ಮ ಷೇರುದಾರರಿಗೆ ಸ್ವೀಕಾರಾರ್ಹವಾಗಿರಬೇಕು,” ಎಂದಿದ್ದಾರೆ. 2012ರಲ್ಲಿನ ಕಾನೂನು ಯು.ಕೆ. ಟೆಲಿಕಾಂ ದೈತ್ಯ ವೊಡಾಫೋನ್ ಸೇರಿದಂತೆ 17 ಸಂಸ್ಥೆಗಳ ಮೇಲೆ 1.10 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಲು ಬಳಸಲಾಗುತ್ತಿತ್ತು. ಆದರೆ ಅಂತಹ ಬೇಡಿಕೆಗಳನ್ನು ಜಾರಿಗೊಳಿಸುವ ಪೈಕಿ ವಶಪಡಿಸಿಕೊಂಡಿದ್ದರಲ್ಲಿ 8100 ಕೋಟಿ ರೂಪಾಯಿ ಕೇರ್ನ್​ಗೆ ಸೇರಿದ್ದಾಗಿದೆ.

ಇದನ್ನೂ ಓದಿ: Retrospective Tax: ಹಿಂದಿನ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಸ್ತಾವದ ಮಹತ್ವ ಏನು? ವಿವರಣೆ ಇಲ್ಲಿದೆ

(Cairn Energy Plc Agreed To Withdraw Cases Against India Relating To Retrospective Tax)

ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್
VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್