ಇಬ್ಬರಿಂದ ನಿರಂತರ ಕಿರುಕುಳ, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಕಿರುಕುಳದಿಂದ ಬೇಸತ್ತು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 12 ನೇ ತರಗತಿಯ ಬಾಲಕಿ ಮನೆಯಿಂದ ಶಾಲೆಯ ಹೋಗುವ ಮಾರ್ಗದಲ್ಲಿ ಇಬ್ಬರು ವ್ಯಕ್ತಿಗಳಿಂದ ಪದೇ ಪದೇ ಕಿರುಕುಳಕ್ಕೊಳಗಾಗಿದ್ದಳು. ಬಾಲಕಿ ಘಟನೆಯ ಬಗ್ಗೆ ತನ್ನ ಪೋಷಕರ ಬಳಿಯೂ ಈ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಪೊಲೀಸ್ ದೂರು ದಾಖಲಿಸಲು ಹಿಂಜರಿದಿದ್ದಳು. ಆಕೆಯ ತಂದೆ ಪೊಲೀಸರ ಬಳಿಗೆ ಹೋಗುವ ಬದಲು ಆರೋಪಿಗಳ ಕುಟುಂಬದವರಿಗೆ ಈ ವಿಷಯ ಮುಟ್ಟಿಸಿದ್ದರು. ಆದರೆ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು.

ಉತ್ತರ ಪ್ರದೇಶ, ಏಪ್ರಿಲ್ 28: ಇಬ್ಬರಿಂದ ನಿರಂತರವಾಗಿ ಕಿರುಕುಳಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಔರಿಯಾದಲ್ಲಿ ನಡೆದಿದೆ. 12 ನೇ ತರಗತಿಯ ಬಾಲಕಿ ಮನೆಯಿಂದ ಶಾಲೆಯ ಹೋಗುವ ಮಾರ್ಗದಲ್ಲಿ ಇಬ್ಬರು ವ್ಯಕ್ತಿಗಳಿಂದ ಪದೇ ಪದೇ ಕಿರುಕುಳಕ್ಕೊಳಗಾಗಿದ್ದಳು. ಬಾಲಕಿ ಘಟನೆಯ ಬಗ್ಗೆ ತನ್ನ ಪೋಷಕರ ಬಳಿಯೂ ಈ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಪೊಲೀಸ್ ದೂರು ದಾಖಲಿಸಲು ಹಿಂಜರಿದಿದ್ದಳು.
ಆಕೆಯ ತಂದೆ ಪೊಲೀಸರ ಬಳಿಗೆ ಹೋಗುವ ಬದಲು ಆರೋಪಿಗಳ ಕುಟುಂಬದವರಿಗೆ ಈ ವಿಷಯ ಮುಟ್ಟಿಸಿದ್ದರು. ಆದರೆ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು. ಏಪ್ರಿಲ್ 19 ರಂದು, ಅಖಿಲೇಶ್ ಮತ್ತು ರಾಮ್ ಎಂದು ಗುರುತಿಸಲಾದ ಆರೋಪಿಗಳು ಬೈಕ್ನಲ್ಲಿ ಬಂದು ವಿದ್ಯಾರ್ಥಿನಿಯನ್ನು ಮತ್ತೆ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅವರು ಫೋನ್ ಮೂಲಕ ಆಕೆಯನ್ನು ಬೆದರಿಸುವುದನ್ನು ಮುಂದುವರೆಸಿದರು ಮತ್ತು ಆಕೆಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದರು. ನಿರಂತರ ಬೆದರಿಕೆಗಳಿಂದ ನೊಂದ ವಿದ್ಯಾರ್ಥಿನಿ ಪರೀಕ್ಷೆ ಮುಗಿದ ನಂತರ ಮನೆಯಲ್ಲಿಯೇ ಇದ್ದಳು.
ಏಪ್ರಿಲ್ 24 ರ ರಾತ್ರಿ ಅವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ತಂದೆ ಅವಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದರೆ ಅಷ್ಟರಲ್ಲಾಗಲೇ ಆಕೆ ಉಸಿರು ಚೆಲ್ಲಿದ್ದಳು.
ಮತ್ತಷ್ಟು ಓದಿ:ಕೆಎಸ್ಆರ್ಟಿಸಿ ಬಸ್ನಲ್ಲಿ ಕಂಡಕ್ಟರ್ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಪೊಲೀಸ್ ಬಲೆಗೆ
ಎರಡು ದಿನಗಳ ನಂತರ, ಏಪ್ರಿಲ್ 26 ರಂದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ಮಧ್ಯಂತರ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ಒಂದು ದಿನ ಮೊದಲು ಈ ಕಠಿಣ ಹೆಜ್ಜೆ ಇಟ್ಟಿದ್ದ ಬಾಲಕಿ 500 ರಲ್ಲಿ 348 ಅಂಕಗಳನ್ನು ಪಡೆಯುವ ಮೂಲಕ ಫಸ್ಟ್ಕ್ಲಾಸ್ನಲ್ಲಿ ಪಾಸಾಗಿದ್ದಾಳೆ.
ರಾಷ್ಟ್ರೀಯ ಸುದ್ದಿಗಳಿಗಾಗು ಇಲ್ಲಿ ಕ್ಲಿಕ್ ಮಾಡಿ




