Income Tax: ಹೆಚ್ಚುವರಿಯಾಗಿ ಪಾವತಿಸಿದ ಬಡ್ಡಿ, ವಿಳಂಬ ಶುಲ್ಕ ಹಿಂತಿರುಗಿಸಲಿದೆ ಆದಾಯ ತೆರಿಗೆ ಇಲಾಖೆ

ಐಟಿ ವೆಬ್​ ಪೋರ್ಟಲ್​ನಲ್ಲಿನ ಸಾಫ್ಟ್​ವೇರ್​ ಸಮಸ್ಯೆಯಿಂದಾಗಿ ಹೆಚ್ಚುವರಿಯಾಗಿ ಸಂಗ್ರಹ ಆಗಿರುವ ಬಡ್ಡಿ ಹಾಗೂ ವಿಳಂಬ ಶುಲ್ಕವನ್ನು ಮರುಪಾವತಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

Income Tax: ಹೆಚ್ಚುವರಿಯಾಗಿ ಪಾವತಿಸಿದ ಬಡ್ಡಿ, ವಿಳಂಬ ಶುಲ್ಕ ಹಿಂತಿರುಗಿಸಲಿದೆ ಆದಾಯ ತೆರಿಗೆ ಇಲಾಖೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 11, 2021 | 11:32 PM

2020-21ನೇ ಸಾಲಿನ ಹಣಕಾಸು ವರ್ಷಕ್ಕೆ ಐಟಿಆರ್ (ಆದಾಯ ತೆರಿಗೆ ರಿಟರ್ನ್ಸ್) ಸಲ್ಲಿಸುವಾಗ ಸಾಫ್ಟ್‌ವೇರ್ ದೋಷದಿಂದಾಗಿ ತೆರಿಗೆದಾರರು ಪಾವತಿಸಿದ ಹೆಚ್ಚುವರಿ ಬಡ್ಡಿ ಮತ್ತು ವಿಳಂಬ ಶುಲ್ಕವನ್ನು ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿಸಲಾಗುತ್ತದೆ. ಕಳೆದ ಹಣಕಾಸು ವರ್ಷದ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವನ್ನು ಈ ವರ್ಷ ಜುಲೈ 31ರಿಂದ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ಆದರೂ ಕೆಲವು ತೆರಿಗೆದಾರರು ಜುಲೈ 31, 2021ರ ನಂತರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವಾಗ ಬಡ್ಡಿ ಮತ್ತು ವಿಳಂಬ ಶುಲ್ಕವನ್ನು ವಿಧಿಸಲಾಗಿದೆ ಎಂದು ದೂರಿದ್ದಾರೆ.

ತಪ್ಪಾದ ಲೆಕ್ಕಾಚಾರದ ಕಾರಣ ದೋಷವನ್ನು ತೆಗೆದುಹಾಕಲು ಆಗಸ್ಟ್ 1ರಂದು ಐಟಿಆರ್ ಸಾಫ್ಟ್‌ವೇರ್ ಸರಿಪಡಿಸಲಾಗಿದೆ ಎಂದು ತೆರಿಗೆ ಇಲಾಖೆ ಬುಧವಾರ ಹೇಳಿದೆ. ಐಟಿಆರ್ ತಯಾರಿಕೆ ಸಾಫ್ಟ್‌ವೇರ್ ಅಥವಾ ಆನ್‌ಲೈನ್‌ನಲ್ಲಿ ಫೈಲ್‌ನ ಇತ್ತೀಚಿನ ಆವೃತ್ತಿಯನ್ನು ಬಳಸಲು ತೆರಿಗೆದಾರರಿಗೆ ಸೂಚಿಸಲಾಗಿದೆ ಎಂದೂ ಅದು ಹೇಳಿದೆ. “ಆಕಸ್ಮಿಕವಾಗಿ, ಯಾರಾದರೂ ಈಗಾಗಲೇ ತಪ್ಪಾದ ಬಡ್ಡಿ ಅಥವಾ ವಿಳಂಬ ಶುಲ್ಕದೊಂದಿಗೆ ಐಟಿಆರ್ ಅನ್ನು ಸಲ್ಲಿಸಿದ್ದರೆ, ಸಿಪಿಸಿ-ಐಟಿಆರ್​ನಲ್ಲಿ ಪ್ರೊಸೆಸಿಂಗ್ ಮಾಡುವಾಗ ಅದನ್ನು ಸರಿಯಾಗಿ ಲೆಕ್ಕ ಹಾಕಲಾಗುತ್ತದೆ ಮತ್ತು ಅಧಿಕ ಮೊತ್ತವನ್ನು ಪಾವತಿಸಿದರೆ ಮರುಪಾವತಿಸಲಾಗುತ್ತದೆ,” ಎಂದು ಇಲಾಖೆ ಟ್ವಿಟ್ಟರ್‌ನಲ್ಲಿ ತಿಳಿಸಿದೆ.

ಈ ವಾರದ ಆರಂಭದಲ್ಲಿ, ಕೆಲವು ಚಾರ್ಟೆಡ್ ಅಕೌಂಟೆಂಟ್‌ಗಳು ಹೇಳಿದಂತೆ, ಬಳಕೆದಾರರು ಮೊದಲ ದಿನದಿಂದಲೇ ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ. ಮತ್ತು ಒಂದು ವಾರದ ನಂತರವೂ ಎಲ್ಲವನ್ನೂ ಸರಿಪಡಿಸಲಾಗಿಲ್ಲ. ತೆರಿಗೆದಾರರು ಹಿಂದಿನ ಇ-ಸಲ್ಲಿಕೆ ರಿಟರ್ನ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಮತ್ತು ಹಲವು ವೈಶಿಷ್ಟ್ಯಗಳು/ ಸೌಲಭ್ಯಗಳನ್ನು ‘ಶೀಘ್ರದಲ್ಲೇ ಬರಲಿದೆ’ ಎಂದು ಗುರುತಿಸುವುದನ್ನು ಮುಂದುವರಿಸಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಹಿಂದೆ ಹೊಸ ರಿಟರ್ನ್ ಫೈಲಿಂಗ್ ಸಾಫ್ಟ್‌ವೇರ್‌ನೊಂದಿಗೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಹೊಸ ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡಿದ ತಕ್ಷಣ ಮಾತನಾಡಿದ್ದ ಹಣಕಾಸು ಸಚಿವೆ: “ಬಹುನಿರೀಕ್ಷಿತ ಇ-ಫೈಲಿಂಗ್ ಪೋರ್ಟಲ್ 2.0 ಅನ್ನು ಕಳೆದ ರಾತ್ರಿ 20:45 ಗಂಟೆಗೆ ಬಿಡುಗಡೆ ಮಾಡಲಾಯಿತು. ನನ್ನ TLನಲ್ಲಿ ಕುಂದುಕೊರತೆ ಮತ್ತು ತೊಂದರೆಗಳನ್ನು ನೋಡಿದ್ದೇನೆ. ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ನಮ್ಮ ತೆರಿಗೆ ಪಾವತಿದಾರರನ್ನು ಸೇವೆಯ ಗುಣಮಟ್ಟದಲ್ಲಿ ನಿರಾಸೆ ಮಾಡುವುದಿಲ್ಲ,” ಎಂಬ ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ಉತ್ತರಿಸಿದ ನಿಲೇಕಣಿ, ದೋಷಗಳನ್ನು ಸರಿಪಡಿಸಲು ಇನ್ಫೋಸಿಸ್ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.

ಮುಂದಿನ ಪೀಳಿಗೆಯ ಆದಾಯ ತೆರಿಗೆ ಸಲ್ಲಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಒಪ್ಪಂದವನ್ನು ಇನ್ಫೋಸಿಸ್​ಗೆ 2019ರಲ್ಲಿ ನೀಡಲಾಯಿತು.

ಇದನ್ನೂ ಓದಿ: Income Tax: ಆದಾಯ ತೆರಿಗೆ ಪಾವತಿದಾರರ ಕುಂದುಕೊರತೆ ದಾಖಲಿಸುವುದಕ್ಕೆ ಅಂತಲೇ ಇ-ಮೇಲ್ ವಿಳಾಸ ಸೃಷ್ಟಿ

(Income Tax Department Will Refund Excess Interest And Late Fee Received Due To Software Issue In IT Portal)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ