Income Tax: ಆದಾಯ ತೆರಿಗೆ ಪಾವತಿದಾರರ ಕುಂದುಕೊರತೆ ದಾಖಲಿಸುವುದಕ್ಕೆ ಅಂತಲೇ ಇ-ಮೇಲ್ ವಿಳಾಸ ಸೃಷ್ಟಿ
ತೆರಿಗೆ ಪಾವತಿದಾರರ ಕುಂದುಕೊರತೆಗಳನ್ನು ದಾಖಲಿಸಲು ಮೂರು ಇ-ಮೇಲ್ ಐ.ಡಿ.ಗಳನ್ನು ಸೃಷ್ಟಿಸಲಾಗಿದೆ. ಆ ಬಗೆಗಿನ ವಿವರ ಇಲ್ಲಿದೆ.
ಕೇಂದ್ರ ಸರ್ಕಾರದಿಂದ ಮೂರು ಇಮೇಲ್ ವಿಳಾಸವನ್ನು ಸೃಷ್ಟಿಸಲಾಗಿದೆ. ಆದಾಯ ತೆರಿಗೆ ಪಾವತಿದಾರರು ಫೇಸ್ಲೆಸ್ ತೆರಿಗೆ ಅಸೆಸ್ಮೆಂಟ್ಹೆ ಸಂಬಂಧಿಸಿದ ಕುಂದುಕೊರತೆಗಳನ್ನು, ದಂಡ, ಮನವಿಗಳನ್ನು ಇದರ ಮೂಲಕ ನೋಂದಾಯಿಸಬಹುದು, ಎಂದು ಆದಾಯ ತೆರಿಗೆ (I-T) ಇಲಾಖೆಯು ಶನಿವಾರ ಹೇಳಿದೆ. ಆ ಇ-ಮೇಲ್ ವಿಳಾಸಗಳು ಹೀಗಿವೆ: samadhan.faceless.assessment@incometax.gov.in; samadhan.faceless.penalty@incometax.gov.in; and samadhan.faceless.appeal@incometax.gov.in ತೆರಿಗೆದಾರರ ಚಾರ್ಟರ್ ಜತೆಗೆ ಸೇವೆ ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ನಡೆಯು ಗುರಿ ಹೊಂದಿದೆ, ಎಂದು ತೆರಿಗೆ ಇಲಾಖೆ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 74ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿಯಾಗಿ, ಆಗಸ್ಟ್ 13, 2020ರಂದು ತೆರಿಗೆದಾರರ ಹಕ್ಕುಗಳು ಮತ್ತು ಕರ್ತವ್ಯದ ಮೊದಲ ಚಾರ್ಟೆ್ ಬಿಡುಗಡೆ ಮಾಡಿದ್ದರು. ಕಳೆದ ವರ್ಷ ಆಗಸ್ಟ್ 13ಕ್ಕೆ “ಪ್ರಾಮಾಣಿಕತೆಯನ್ನು ಗೌರವಿಸಿ” ಪ್ಲಾಟ್ಫಾರ್ಮ್ ಆರಂಭಿಸಿದ್ದರು. ಆಗ ಪ್ರಧಾನಿ ಮೋದಿ ಮಾತನಾಡಿ, ಪ್ರಮುಖ ಸುಧಾರಣೆಗಳಾಗಿ ಫೇಸ್ಲೆಸ್ ಅಸೆಸ್ಮೆಂಟ್, ಫೇಸ್ಲೆಸ್ ಅರ್ಜಿ ಹಾಗೂ ತೆರಿಗೆದಾರರ ಚಾರ್ಟರ್ಗಳನ್ನು ಒಳಗೊಂಡಿದೆ. ಫೇಸ್ಲೆಸ್ ಅಸೆಸ್ಮೆಂಟ್ ಮತ್ತು ತೆರಿಗೆದಾರರ ಚಾರ್ಟರ್ ಇಂದಿನಿಂದ ಜಾರಿಯಾಗುತ್ತದೆ. ಇನ್ನು ಫೇಸ್ಲೆಸ್ ಅಪೀಲ್ ಜನರಿಗೆ ಸೆಪ್ಟೆಂಬರ್ 25ರಿಂದ ಜಾರಿಗೆ ಬರುತ್ತದೆ. ಅಂದು ದೀನ್ ದಯಾಳ್ ಉಪಾಧ್ಯಾಯ್ ಜೀ ಜನ್ಮವರ್ಷಾಚರಣೆ ಎಂದಿದ್ದರು.
ಚಾರ್ಟರ್ ಉದ್ದೇಶಗಳನ್ನು ಪೂರೈಸುವ ನಿಟ್ಟಿನಲ್ಲಿ, ತೆರಿಗೆ ಆಡಳಿತಾತ್ಮಕ ಸಂಗತಿಯನ್ನು ಪಾರದರ್ಶಕವಾಗಿಸುವುದಕ್ಕೆ ಮತ್ತು ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂಬ ತೊಂದರೆಯಿಂದ ತಪ್ಪಿಸಲು ಆದಾಯ ತೆರಿಗೆ ಇಲಾಖೆಯಿಂದ ತಂತ್ರಜ್ಞಾನದ ಆಧಾರಿತ ಫೇಸ್ಲೆಸ್ ಯೋಜನೆ ಅಳವಡಿಸಿಕೊಂಡಿದೆ. ಫೇಸ್ಲೆಸ್ ತೆರಿಗೆ ಪ್ರಕ್ರಿಯೆ ವ್ಯವಸ್ಥೆಯನ್ನು ಮೊದಲ ಬಾರಿಗೆ 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ 2017ರಲ್ಲಿ ಪ್ರಸ್ತಾವ ಮಾಡಿದರು. ನಿರ್ಮಲಾ ಸೀತಾರಾಮನ್ ಮಂಡಿಸಿದ ಅವರ ಮೊದಲ ಬಜೆಟ್ ಜುಲೈ 5, 2019ರಲ್ಲಿ ಪ್ರಸ್ತಾವ ಮಾಡಿದ್ದರು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್ ಮೂಲಕವಾಗಿ ಸಿಸ್ಟಮ್ ಮೂಲಕ ತೆರಿಗೆ ಪ್ರಕರಣಗಳನ್ನು Random ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಅಧಿಕಾರಿಗಳ ವಿವೇಚನೆ ಅಂತ ಇರುವುದಿಲ್ಲ.
ಫೇಸ್ಲೆಸ್ ಅಸೆಸ್ಮೆಂಟ್ ಉದ್ದೇಶ ಏನೆಂದರೆ, ತೆರಿಗೆಪಾವತಿದಾರರು ಹಾಗೂ ಅಧಿಕಾರಿಗಳ ಮಧ್ಯೆ ಸಂಪರ್ಕ ಇರುವುದಿಲ್ಲ. ಆ ಮೂಲಕ ತೆರಿಗೆ ಆಡಳಿತವು ಪಾರದರ್ಶಕ ಮತ್ತು ಭ್ರಷ್ಟಾಚಾರಮುಕ್ತ ಆಗಿರಬೇಕು.
ಇದನ್ನೂ ಓದಿ: Income Tax Return: ಆದಾಯ ತೆರಿಗೆ ರಿಟರ್ನ್ಸ್ಗೆ ಅವಧಿ ವಿಸ್ತರಣೆ; ಯಾವುದಕ್ಕೆ ಯಾವುದು ಗಡುವು ಇಲ್ಲಿದೆ ಮಾಹಿತಿ
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ಬಾರದಿದ್ದರೂ ಐಟಿಆರ್ ಫೈಲ್ ಮಾಡುವುದರಿಂದ ಸಿಗುವ 6 ಅನುಕೂಲಗಳಿವು
(Income Tax Department Created Dedicated E Mail ID For Tax Payers Grievances)