Income Tax Return: ಆದಾಯ ತೆರಿಗೆ ರಿಟರ್ನ್ಸ್​ಗೆ ಅವಧಿ ವಿಸ್ತರಣೆ; ಯಾವುದಕ್ಕೆ ಯಾವುದು ಗಡುವು ಇಲ್ಲಿದೆ ಮಾಹಿತಿ

ಆದಾಯ ತೆರಿಗೆ ರಿಟರ್ನ್ಸ್​ಗೆ ಸಂಬಂಧಿಸಿದ ವಿವಿಧ ಗಡುವನ್ನು ಸಿಬಿಡಿಟಿ ವಿಸ್ತರಣೆ ಮಾಡಿದೆ. ಆ ಬಗೆಗಿನ ವಿವರ ನಿಮ್ಮೆದುರು ಇದೆ.

Income Tax Return: ಆದಾಯ ತೆರಿಗೆ ರಿಟರ್ನ್ಸ್​ಗೆ ಅವಧಿ ವಿಸ್ತರಣೆ; ಯಾವುದಕ್ಕೆ ಯಾವುದು ಗಡುವು ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 04, 2021 | 2:43 PM

ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)ಯಿಂದ ತೆರಿಗೆ ಪಾವತಿದಾರರಿಗೆ ನಿರಾಳ ಆಗುವಂಥ ಸುದ್ದಿ ಬಂದಿದೆ. ಮಂಗಳವಾರದಂದು ಹೊಸದಾಗಿ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಕೆಲವು ಅರ್ಜಿಗಳ ಫೈಲಿಂಗ್​ಗೆ ಗಡುವು ವಿಸ್ತರಣೆ ಆಗಿದೆ. ಹೇಳಿಕೆಯೊಂದರಲ್ಲಿ ಸಿಬಿಡಿಟಿ ಈ ಬಗ್ಗೆ ತಿಳಿಸಿದ್ದು, ಈ ಅರ್ಜಿಗಳ ಎಲೆಕ್ಟ್ರಾನಿಕ್ ಫೈಲಿಂಗ್​ನಿಂದಾಗಿ ತೆರಿಗೆದಾರರಿಗೆ ಆಗಿರುವ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಈ ತೀರ್ಮಾನ ಮಾಡಲಾಗಿದೆ. ಕೆಲವು ಅರ್ಜಿಗಳಿಗೆ ಎಲೆಕ್ಟ್ರಾನಿಕ್ ಫೈಲಿಂಗ್​ಗೆ ಇರುವ ಗಡುವು ವಿಸ್ತರಣೆ ಮಾಡಲಾಗಿದೆ. ಇದರ ಹೊರತಾಗಿ, ಹೊಸ ಇ-ಫೈಲಿಂಗ್ ಪೋರ್ಟಲ್ http://incometax.gov.inನಲ್ಲಿ ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ವಿವಿಧ ಫಾರ್ಮ್​ಗಳನ್ನು ಫೈಲಿಂಗ್ ಮಾಡುವುದಕ್ಕೆ ಸಿಬಿಡಿಟಿಯಿಂದ ವಿನಾಯಿತಿ ನೀಡಲಾಗಿದೆ.

“ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ತೆರಿಗೆ ಪಾವತಿದಾರರು ಹಾಗೂ ಇತರರು ಎಲೆಕ್ಟ್ರಾನಿಕ್ ಫೈಲಿಂಗ್​ನಲ್ಲಿ ಸಮಸ್ಯೆ ಎದುರಾಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕ್ಯುಲರ್ ಸಂಖ್ಯೆ 15/2021, ದಿನಾಂಕ 03.08.2021ರಂತೆ ಗಡುವಿನ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ,” ಎಂದು ಆದಾಯ ತೆರಿಗೆ ಇಲಾಖೆಯಿಂದ ಟ್ವೀಟ್ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

1. CBDT ಪ್ರಕಾರ, ನಮೂನೆ ಸಂಖ್ಯೆ 15CCರಲ್ಲಿ ತ್ರೈಮಾಸಿಕ ಸ್ಟೇಟ್​ಮೆಂಟ್ ಅನ್ನು ಅಧಿಕೃತ ಡೀಲರ್​ಗಳು 30ನೇ ಜೂನ್, 2021ಕ್ಕೆ ಕೊನೆಗೊಳ್ಳುವ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ ಪಾವತಿಸಬೇಕಿದ್ದವರು, 37BB ನಿಯಮದ ಅಡಿಯಲ್ಲಿ 2021ರ ಜುಲೈ 15 ಅಥವಾ ಅದಕ್ಕಿಂತ ಮೊದಲು ಒದಗಿಸಬೇಕಾಗುತ್ತದೆ. 37BB ನಿಯಮಾವಳಿಯಂತೆ ಗಡುವನ್ನು 2021ರ ಜುಲೈ 31, 2021ಕ್ಕೆ ವಿಸ್ತರಿಸಲಾಯಿತು. ಆದರೆ 25.06.2021ರಂದು ಹೊರಡಿಸಿದ ಸುತ್ತೋಲೆ ಸಂಖ್ಯೆ 12ರಂತೆ, 31 ಆಗಸ್ಟ್, 2021 ಅಥವಾ ಅದಕ್ಕೂ ಮೊದಲು ಸಲ್ಲಿಸಬಹುದು.

2. 2020-21ರ ಹಣಕಾಸು ವರ್ಷಕ್ಕಾಗಿ ಫಾರ್ಮ್ ಸಂಖ್ಯೆ.1ರಲ್ಲಿನ ಈಕ್ವಲೈಸೇಷನ್ ಲೆವಿ ಸ್ಟೇಟ್‌ಮೆಂಟ್ ಪ್ರಕಾರ, 2021ರ ಜೂನ್ 30ರೊಳಗೆ ಸಲ್ಲಿಸಬೇಕಾದದ್ದನ್ನು 2021 ರ ಜುಲೈ 31 ರವರೆಗೆ ವಿಸ್ತರಿಸಲಾಗುವುದು ಎಂದು ಸಿಬಿಡಿಟಿ ಹೇಳಿತ್ತು. ಆದರೆ ನಂತರದಲ್ಲಿ ದಿನಾಂಕ 25.06.2021ರಂದು ಹೊರಡಿಸಿದ ಸುತ್ತೋಲೆ ಸಂಖ್ಯೆ 12ರ ಪ್ರಕಾತ, 31 ಆಗಸ್ಟ್, 2021ರಂದು ಅಥವಾ ಮೊದಲು ಸಲ್ಲಿಸಬಹುದು.

3. CBDT ತಿಳಿಸಿರುವಂತೆ, ಆದಾಯದ ಪಾವತಿ ಸ್ಟೇಟ್​ಮೆಂಟ್ ಅಥವಾ ನಿಧಿ ಹೂಡಿಕೆಯಿಂದ ತನ್ನ ಯೂನಿಟ್ ಹೋಲ್ಡರ್‌ಗೆ ಫಾರ್ಮ್ ನಂ 64D ಮೂಲಕ ಹಿಂದಿನ ವರ್ಷ 2020-21 ಕ್ಕೆ ಪಾವತಿಸಬೇಕು ಅಥವಾ ಕ್ರೆಡಿಟ್ ಮಾಡಬೇಕು. 12CB ನಿಯಮಗಳ ಪ್ರಕಾರ, ಜೂನ್ 15, 2021ಕ್ಕೆ ಪಾವತಿಸಬೇಕಿತ್ತು. ಅದು 15ನೇ ಜುಲೈ, 2021ರ ವರೆಗೆ ವಿಸ್ತರಣೆ ಆಯಿತು. 2021 ರ 25.06.2021ರಂದು ಹೊರಡಿಸಿದ ಸುತ್ತೋಲೆ ಸಂಖ್ಯೆ 12ರಂತೆ 15ನೇ ಸೆಪ್ಟೆಂಬರ್ 2021 ಅಥವಾ ಅದಕ್ಕಿಂತ ಮೊದಲು ಒದಗಿಸಬಹುದು.

4. ಇನ್ನು ಹಿಂದಿನ ವರ್ಷ, ಅಂದರೆ 2020-21ರಲ್ಲಿ ಫಾರ್ಮ್ ಸಂಖ್ಯೆ 64ಸಿಯಲ್ಲಿ ತನ್ನ ಯೂನಿಟ್ ಹೋಲ್ಡರ್‌ಗೆ ಹೂಡಿಕೆ ನಿಧಿಯಿಂದ ಪಾವತಿಸಿದ ಅಥವಾ ಕ್ರೆಡಿಟ್ ಮಾಡಲಾದ ಆದಾಯದ ಸ್ಟೇಟ್​ಮೆಂಟ್ ಅನ್ನು 12CB ಅಡಿಯಲ್ಲಿ 2021, ಜೂನ್ 30 ಅಥವಾ 2021ರ ಮೊದಲು ಒದಗಿಸಬೇಕಾಗಿತ್ತು. ಅದನ್ನು 31ನೇ ಜುಲೈ, 2021ರ ತನಕ ವಿಸ್ತರಿಸಲಾಯಿತು. 25.06.2021ರ ಸುತ್ತೋಲೆ ಸಂಖ್ಯೆ 12ರಂತೆ 2021ರ ಸೆಪ್ಟೆಂಬರ್ 30 ಅಥವಾ ಅದಕ್ಕಿಂತ ಮೊದಲು ಒದಗಿಸಬಹುದು.

5. ಸಿಬಿಡಿಟಿ ಕೆಲವು ನಮೂನೆಗಳ ಇ-ಫೈಲಿಂಗ್‌ಗಾಗಿ ಅಗತ್ಯ ಇರುವ ಸೇವೆಗಳು ಲಭ್ಯ ಇಲ್ಲದಿರುವುದನ್ನು ಪರಿಗಣಿಸಿದೆ. ಮತ್ತು ಅಂತಹ ಫಾರ್ಮ್‌ಗಳ ಎಲೆಕ್ಟ್ರಾನಿಕ್ ಫೈಲಿಂಗ್‌ಗೆ ಅಂತಿಮ ದಿನಾಂಕಗಳನ್ನು ವಿಸ್ತರಿಸಲು ನಿರ್ಧರಿಸಿದೆ:

6. 2021 ರ ಜೂನ್ 30 ರಂದು ಕೊನೆಗೊಳ್ಳುವ ತ್ರೈಮಾಸಿಕಕ್ಕೆ ನಮೂನೆ ಸಂಖ್ಯೆ 10BBBಯಲ್ಲಿ ಭಾರತದಲ್ಲಿ ಮಾಡಿದ ಪ್ರತಿ ಹೂಡಿಕೆಗೆ ಸಂಬಂಧಿಸಿದಂತೆ ಪಿಂಚಣಿ ನಿಧಿಯಿಂದ ನೀಡಬೇಕಾದ ಮಾಹಿತಿಯನ್ನು ನಿಯಮ 2DBಯ ಅಡಿಯಲ್ಲಿ 2021ರ ಜುಲೈ 31ರೊಳಗೆ ಒದಗಿಸಬೇಕಾಗುತ್ತದೆ. ಅದನ್ನು ಈಗ 30ನೇ ಸೆಪ್ಟೆಂಬರ್, 2021 ಅಥವಾ ಮೊದಲು ಒದಗಿಸಬಹುದು;

7. 30ನೇ ಜೂನ್, 2021ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಫಾರ್ಮ್ II SWFನಲ್ಲಿ ಭಾರತದಲ್ಲಿ ಮಾಡಿದ ಹೂಡಿಕೆಗಳಿಗೆ ಸಂಬಂಧಿಸಿದಂತೆ ಸವರನ್ ವೆಲ್ತ್​ ಫಂಡ್​ನಿಂದ ನೀಡಬೇಕಾದ ಮಾಹಿತಿಯನ್ನು 2021ರ ಜುಲೈ 31 ಅಥವಾ ಅದಕ್ಕೂ ಮೊದಲು ಒದಗಿಸಬೇಕಾಗುತ್ತದೆ. ಆದರೆ ಈಗ 30ನೇ ಸೆಪ್ಟೆಂಬರ್, 2021ರಂದು ಅಥವಾ ಮೊದಲು ಒದಗಿಸಬಹುದು.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ಬಾರದಿದ್ದರೂ ಐಟಿಆರ್ ಫೈಲ್ ಮಾಡುವುದರಿಂದ ಸಿಗುವ 6 ಅನುಕೂಲಗಳಿವು

(Deadline Of Certain Forms Under Income Tax Act 1961 Extended Here Is The Details)

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!