AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Public Alert: ಹಳೇ ನೋಟು, ನಾಣ್ಯಗಳಿಗೆ ಹೆಚ್ಚಿನ ಮೊತ್ತ ನೀಡುವುದಾಗಿ ವಂಚಿಸುವವರ ವಿರುದ್ಧ ಎಚ್ಚರಿಕೆ ಎಂದ ಆರ್​ಬಿಐ

ಆರ್​ಬಿಐ ಹೆಸರು ಬಳಸಿಕೊಂಡು ಹಳೇ ನೋಟು, ನಾಣ್ಯಗಳನ್ನು ಖರೀದಿಸುವುದಾಗಿ ವಂಚನೆ ಮಾಡುತ್ತಿರುವ ದುಷ್ಕರ್ಮಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.

Public Alert: ಹಳೇ ನೋಟು, ನಾಣ್ಯಗಳಿಗೆ ಹೆಚ್ಚಿನ ಮೊತ್ತ ನೀಡುವುದಾಗಿ ವಂಚಿಸುವವರ ವಿರುದ್ಧ ಎಚ್ಚರಿಕೆ ಎಂದ ಆರ್​ಬಿಐ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 04, 2021 | 6:29 PM

Share

ಹಳೇ ಬ್ಯಾಂಕ್​ ನೋಟುಗಳು ಮತ್ತು ಹಳೇ ನಾಣ್ಯಗಳನ್ನು ಭಾರೀ ಮೊತ್ತಕ್ಕೆ ಖರೀದಿ ಮಾಡುವುದಾಗಿ ಹೇಳಿ, ಸಾರ್ವಜನಿಕರನ್ನು ಬಲೆಗೆ ಬೀಳಿಸಲಾಗುತ್ತಿದೆ. ಇಂಥವರಿಂದ ಎಚ್ಚರಿಕೆಯಾಗಿ ಇರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ತಿಳಿಸಿದೆ. “ಕೆಲವು ದುಷ್ಕರ್ಮಿಗಳು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾದ ಹೆಸರು/ಲೋಗೋ ಬಳಸಿಕೊಂಡು, ವಿವಿಧ ಆನ್​ಲೈನ್/ಆಫ್​ಲೈನ್​ ಪ್ಲಾಟ್​ಫಾರ್ಮ್​ಗಳ ಮೂಲಕ ಹಳೇ ಬ್ಯಾಂಕ್​ ನೋಟುಗಳು ಮತ್ತು ನಾಣ್ಯಗಳ ವ್ಯವಹಾರ ಮಾಡುವುದಾಗಿ, ಶುಲ್ಕ/ಕಮಿಷನ್/ತೆರಿಗೆ ಎಂದು ಆರ್​ಬಿಐ ಹೆಸರಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ,” ಎಂದು ಹೇಳಲಾಗಿದೆ. “ಇದೀಗ ಈ ಮೂಲಕ ಸ್ಪಷ್ಟಪಡಿಸಲಾಗಿದ್ದು, ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾದಿಂದ ಇಂಥ ಯಾವ ವ್ಯವಹಾರ ಮಾಡುವುದಿಲ್ಲ ಹಾಗೂ ಎಂದಿಗೂ ಯಾವುದೇ ಶುಲ್ಕ/ಕಮಿಷನ್​ಗಳನ್ನು ಕೇಳುವುದಿಲ್ಲ,” ಎನ್ನಲಾಗಿದೆ.

ಇಂಥ ವ್ಯವಹಾರಗಳಿಗೆ ತನ್ನ ಪರವಾಗಿ ಯಾವುದೇ ಶುಲ್ಕಗಳು/ಕಮಿಷನ್ ಸಂಗ್ರಹಿಸಲು ಆರ್​ಬಿಐನಿಂದ ಇಂಥ ಯಾವುದೇ ಸಂಸ್ಥೆಗಳು/ಕಂಪೆನಿ/ವ್ಯಕ್ತಿಗಳು ಮುಂತಾದವುಗಳನ್ನು ಅಂಗೀಕೃತ ಮಾಡಿಲ್ಲ ಎಂದು ಮಾಹಿತಿಯನ್ನು ನೀಡಲಾಗಿದೆ. ವಂಚನೆ ಆಫರ್​ಗಳನ್ನು ನೀಡುವ ಮೂಲಕವಾಗಿ ಹಣವನ್ನು ವಸೂಲಿ ಮಾಡಿ, ವಂಚನೆ ಮಾಡುವಂಥವರಿಂದ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಹಳೇ ನಾಣ್ಯ, ನೋಟುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸುವುದಾಗಿ ಕೆಲವು ಜಾಹೀರಾತುಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ.

ಅಷ್ಟೇ ಅಲ್ಲ, ಹೀಗೆ ಜಾಹೀರಾತು ಅಥವಾ ಪ್ರಚಾರ ಮಾಡುವಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಇದು ನಿಜ ಎಂದು ನಂಬುವ ಕೆಲವರು ತಮ್ಮ ಬಳಿ ಆ ನೋಟು ಅಥವಾ ನಾಣ್ಯ ಇದೆ ಎಂದು ಹೇಳಿಕೊಂಡ ಮೇಲೆ, ಬಹುಮಾನದ ಹಣವನ್ನು ಪಡೆಯುವುದಕ್ಕೆ ಮುಂಚೆ ಇಂತಿಷ್ಟು ಹಣವನ್ನು ಕಟ್ಟಬೇಕು. ಅದು ಆರ್​ಬಿಐಗೆ ಬರಬೇಕಾದ ಕಮಿಷನ್, ಶುಲ್ಕ ಎಂದು ಹೇಳಿ, ಜನರಿಗೆ ವಂಚನೆ ಮಾಡಲಾಗುತ್ತಿದೆ. ಇಂಥವರಿಂದ ಎಚ್ಚರಿಕೆ ವಹಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಹೇಳಿದೆ.

ಇದನ್ನೂ ಓದಿ: Master Card: ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಮಾಸ್ಟರ್​ ಕಾರ್ಡ್​ಗೆ ನಿರ್ಬಂಧ ವಿಧಿಸಿದ ಆರ್​ಬಿಐ

(RBI Public Caution Notice Regarding Frauds In The Name Of Old Notes And Coins)

Published On - 6:29 pm, Wed, 4 August 21

Follow Us
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ