Gold Rate Today: ಗ್ರಾಹಕರಿಗೆ ಗುಡ್ ನ್ಯೂಸ್; ಇಂದು ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ! ಇಂದೇ ಆಭರಣ ಖರೀದಿಸಿ
Gold Silver Price Today, 7th August: ಇಂದು ಕೂಡ ಚಿನ್ನದ ದರದಲ್ಲಿ ಇಳಿಕೆಯಾಗಿದೆ. ನಿನ್ನೆ ಮತ್ತು ಇಂದು ಎರಡು ದಿನ ಚಿನ್ನದ ದರದಲ್ಲಿ ಇಳಿಕೆ ಕಂಡಿದ್ದು, ವಾರಾಂತ್ಯದಲ್ಲಿ ಜನರಿಗೆ ಹೆಚ್ಚು ಖುಷಿ ತಂದಿದೆ.
Gold Silver Price Today | ಬೆಂಗಳೂರು: ನಿನ್ನೆ ಎಲ್ಲಾ ಪ್ರಮುಖ ಮಹಾನಗರಗಳಲ್ಲಿಯೂ ಸಹ ಚಿನ್ನಾಭರಣದ ದರ ಇಳಿಕೆ ಕಂಡಿತ್ತು. ಅಂತೆಯೇ ಇಂದು (ಆಗಸ್ಟ್ 7, ಶನಿವಾರ) ಕೂಡ ಚಿನ್ನದ ದರದಲ್ಲಿ (Gold Price) ಇಳಿಕೆಯಾಗಿದೆ. ನಿನ್ನೆ ಮತ್ತು ಇಂದು ಎರಡು ದಿನ ಚಿನ್ನದ ದರದಲ್ಲಿ ಇಳಿಕೆ ಕಂಡಿದ್ದು, ವಾರಾಂತ್ಯದಲ್ಲಿ ಜನರಿಗೆ ಹೆಚ್ಚು ಖುಷಿ ತಂದಿದೆ. ಅಷ್ಟೇ ಅಲ್ಲ ಬೆಳ್ಳಿ (Silver Price) ಬೆಲೆಯಲ್ಲಿ ಕೂಡ ಇಳಿಕೆ ಕಂಡಿದೆ. ಆಭರಣ ಖರೀದಿಸಬೇಕು ಎಂದು ಯೋಚಿಸಿದ್ದರೆ ಇಂದು ನಿಮ್ಮೂರಿನಲ್ಲಿ ಚಿನ್ನದ ದರ ಎಷ್ಟಿದೆ ಪರಿಶೀಲಿಸಿ. ಆಭರಣಗಳ ದರ ವಿವರ ಮಾಹಿತಿ ಈ ಕೆಳಗಿನಂತಿದೆ.
ಚಿನ್ನದ ದರ ವಿವರ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,600 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,36,000 ರೂಪಾಯಿಗೆ ಇಳಿಕೆಯಾಗಿದೆ. ದೈನಂದಿನ ದರ ಏರಿಳಿತದಲ್ಲಿ 1,000 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,570 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,75,700 ರೂಪಾಯಿ ಇಳಿಕೆಯಾಗಿದೆ. ಸುಮಾರು 1,090 ರೂಪಾಯಿ ಇಳಿಕೆ ಕಂಡಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,000 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,40,000 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,000 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,80,000 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 1,100 ರೂಪಾಯಿ ಇಳಿಕೆಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,750 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,57,500 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 1000 ರೂಪಾಯಿಯಷ್ಟು ಇಳಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,900 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,99,000 ರೂಪಾಯಿ ನಿಗದಿಯಾಗಿದೆ. ನಿನ್ನೆಯ ದರಕ್ಕಿಂತ ಸರಿಸುಮಾರು 1,100 ರೂಪಾಯಿ ಇಳಿಕೆಯಾಗಿದೆ.
ಬೆಳ್ಳಿ ದರ ವಿವರ ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 65,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1600 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿಗೆ 71,700 ರೂಪಾಯಿ ನಿಗದಿಯಾಗಿದೆ. ದೆಹಲಿಯಲ್ಲಿ 1600 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 65,000 ರೂಪಾಯಿ ಆಗಿದೆ.
ಪ್ರಮುಖ ಎಲ್ಲಾ ಮಹಾನಗರಗಳಲ್ಲಿ ನಿನ್ನೆಯೂ ಸಹ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಕಂಡಿತ್ತು. ಅದರಂತೆ ಇಂದು ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಚಿನ್ನ, ಬೆಳ್ಳಿ ಆಭರಣಗಳ ದರ ಇಳಿಕೆ ಕಂಡಿರುವುದು ಚಿನ್ನ ಖರೀದಿಸಲು ಮುಂದಾಗಿದ್ದ ಜನರಿಗೆ ಹೊಸ ಚೈತನ್ಯ ನೀಡಿದೆ.
ಇದನ್ನೂ ಓದಿ: Gold Price Today: ನೀವು ಕೂಡಿಟ್ಟ ಹಣದಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದಾದರೆ ದರ ವಿವರ ಪರಿಶೀಲಿಸಿ
Gold Price Today: ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ- ಬೆಳ್ಳಿ ದರದ ಮಾಹಿತಿ ಇಲ್ಲಿದೆ
Published On - 8:22 am, Sat, 7 August 21