AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Glenmark Life Sciences Listing: ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್ ಕೇವಲ ಶೇ 4ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್

ಗ್ಲೆನ್​ಮಾರ್ಕ್​ ಲೈಫ್​ಸೈನ್ಸಸ್​ ಆಗಸ್ಟ್​ 6ನೇ ತಾರೀಕಿನ ಶುಕ್ರವಾರ ಶೇ 4ರ ಪ್ರೀಮಿಯಂನೊಂದಿಗೆ ಲಿಸ್ಟಿಂಗ್ ಆಗಿದೆ. ಆ ಬಗೆಗಿನ ವಿವರ ಇಲ್ಲಿದೆ.

Glenmark Life Sciences Listing: ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್ ಕೇವಲ ಶೇ 4ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 06, 2021 | 7:54 PM

Share

ಗ್ಲೆನ್​ಮಾರ್ಕ್​ ಫಾರ್ಮಾಸ್ಯುಟಿಕಲ್ಸ್​ನ ಅಂಗ ಸಂಸ್ಥೆಯಾದ ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್​ ಲಿಸ್ಟಿಂಗ್​ ಶುಕ್ರವಾರ ಆಗಿದೆ. ಆದರೆ ಅಷ್ಟೇನೂ ಉತ್ತಮವಾಗಿಲ್ಲ. ಬಿಎಸ್​ಇಯಲ್ಲಿ ಶೇ 4ರ ಪ್ರೀಮಿಯಂನಲ್ಲಿ 751 ರೂಪಾಯಿಗೆ ಲಿಸ್ಟಿಂಗ್ ಆಗಿದೆ. ಈ ಷೇರನ್ನು 720 ರೂಪಾಯಿಗೆ ವಿತರಿಸಲಾಗಿತ್ತು. ಎನ್​ಎಸ್​ಇಯಲ್ಲಿ 750 ರೂಪಾಯಿಗೆ ಲಿಸ್ಟಿಂಗ್​ ಆಯಿತು. ದಿನದ ಗರಿಷ್ಠ ಮಟ್ಟವಾಗಿ ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್​ ಬಿಎಸ್​ಇಯಲ್ಲಿ 766.30 ರೂಪಾಯಿ ಮತ್ತು ಎನ್​ಎಸ್​ಇಯಲ್ಲಿ 766 ರೂಪಾಯಿ ತಲುಪಿತು. 1513 ಕೋಟಿ ರೂಪಾಯಿಯ ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಜುಲೈ 27ರಿಂದ 29ರ ತನಕ ಸಬ್​ಸ್ಕ್ರಿಪ್ಷನ್​ಗೆ ಲಭ್ಯವಿತ್ತು. ಈ ಪೈಕಿ 1060 ಕೋಟಿ ರೂಪಾಯಿ ಹೊಸದಾಗಿ ಹಾಗೂ 453.60 ಕೋಟಿ ರೂಪಾಯಿ ಆಫರ್ ಫಾರ್ ಸೇಲ್ ಮೂಲಕ ಷೇರು ವಿತರಣೆ ಮಾಡಲಾಯಿತು. ಆಫರ್​ ಮಾಡಿದ್ದಕ್ಕಿಂತ 44.17 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು.

ಹೊಸದಾಗಿ ಷೇರು ವಿತರಣೆ ಮೂಲಕ ಸಂಗ್ರಹ ಆಗುವ ಮೊತ್ತವನ್ನು ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್​ನಿಂದ ಪ್ರವರ್ತಕರ ಎಪಿಐ ಬಿಜಿನೆಸ್​ಗೆ ಮತ್ತು ಕ್ಯಾಪಿಟಲ್ ಎಕ್ಸ್​ಪೆಂಡಿಚರ್ (ಬಂಡವಾಳ ವೆಚ್ಚ) ಅಗತ್ಯಕ್ಕೆ ಬಳಸಲಾಗುತ್ತದೆ. ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್​ ಕಂಪೆನಿ 2011ರಲ್ಲಿ ಇನ್​ಕಾರ್ಪೊರೇಟ್​ ಆಗಿದೆ. ಇದು ಗ್ಲೆನ್​ಮಾರ್ಕ್​ ಫಾರ್ಮಾಸ್ಯುಟಿಕಲ್ಸ್​ ಕಂಪೆನಿಯ ಎಪಿಐ (ಆ್ಯಕ್ಟಿವ್ ಫಾರ್ಮಸ್ಯುಟಿಕಲ್ ಇಂಗ್ರೆಡಿಯೆಂಟ್ಸ್) ಅಂಗಸಂಸ್ಥೆ. ಇದರ 120ಕ್ಕೂ ಹೆಚ್ಚು ಉತ್ಪನ್ನಗಳು ಪೋರ್ಟ್​ಫೋಲಿಯೋಗಳಿವೆ ಮತ್ತು ಯುರೋಪ್, ಉತ್ತರ ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕಾ ಹಲವು ದೇಶಗಳಿಗೆ ಎಪಿಐಗಳ ರಫ್ತು ಮಾಡುತ್ತದೆ.

ಅಂದ ಹಾಗೆ ಈ ಕಂಪೆನಿಯ ಐಪಿಒಗೆ ಕೊಟಕ್ ಮಹೀಂದ್ರಾ ಕ್ಯಾಪಿಟಲ್, BofA ಸೆಕ್ಯೂರಿಟೀಸ್, ಗೋಲ್ಡ್​ಮ್ಯಾನ್ ಸ್ಯಾಚ್ಸ್, ಡಿಎಎಂ ಕ್ಯಾಪಿಟಲ್, ಎಸ್​ಬಿಐ ಕ್ಯಾಪಿಟಲ್ ಮತ್ತು BoB ಕ್ಯಾಪಿಟಲ್ ಇನ್ವೆಸ್ಟ್​ಮೆಂಟ್ ಬ್ಯಾಂಕರ್ಸ್​ ಆಗಿದ್ದವು. KFintech ಈ ಇಶ್ಯೂವಿನ ರಿಜಿಸ್ಟ್ರಾರ್ ಆಗಿತ್ತು. ಶುಕ್ರವಾರ ದಿನದ ಕೊನೆಗೆ ಸೆನ್ಸೆಕ್ಸ್​ 215.12 ಪಾಯಿಂಟ್ಸ್​ ಇಳಿದು, 54,277.72 ಪಾಯಿಂಟ್ಸ್​ನೊಂದಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 56.40 ಪಾಯಿಂಟ್ಸ್​ ಕುಸಿದು, 16,238.20 ಪಾಯಿಂಟ್ಸ್​ನೊಂದಿಗೆ ವಹಿವಾಟು ಮುಗಿಸಿದೆ.

ಇದನ್ನೂ ಓದಿ: Investments In IPO: ಬ್ಯಾಂಕ್​ಗಳಿಂದ ಐಪಿಒಗಳ ಮೇಲಿನ ಹೂಡಿಕೆ 4 ವರ್ಷಗಳ ಗರಿಷ್ಠ ಮಟ್ಟಕ್ಕೆ

(Glenmark Life Sciences Listing With 4 Percent Premium On August 6th 2021)

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ