Investments In IPO: ಬ್ಯಾಂಕ್​ಗಳಿಂದ ಐಪಿಒಗಳ ಮೇಲಿನ ಹೂಡಿಕೆ 4 ವರ್ಷಗಳ ಗರಿಷ್ಠ ಮಟ್ಟಕ್ಕೆ

ಬ್ಯಾಂಕ್​ಗಳಿಂದ ಐಪಿಒಗಳಲ್ಲಿ ಹೂಡಿಕೆ ಮಾಡುವ ಮೊತ್ತವು 2021ರಲ್ಲಿ ನಾಲ್ಕು ವರ್ಷದ ಗರಿಷ್ಠ ಮಟ್ಟವನ್ನು ತಲುಪಿದೆ. ಯಾವ ಕಾರಣದಿಂದ ಬ್ಯಾಂಕ್​ಗಳು ಐಪಿಒಗಳಲ್ಲಿ ಹೂಡಿಕೆ ಮಾಡುತ್ತವೆ ಎಂಬ ವಿವರಗಳಿವೆ.

Investments In IPO: ಬ್ಯಾಂಕ್​ಗಳಿಂದ ಐಪಿಒಗಳ ಮೇಲಿನ ಹೂಡಿಕೆ 4 ವರ್ಷಗಳ ಗರಿಷ್ಠ ಮಟ್ಟಕ್ಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 21, 2021 | 1:15 PM

ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್ ಬೈಯರ್ (QIB) ಮಾರ್ಗದ ಮೂಲಕ ಐಪಿಒಗಳಲ್ಲಿ (IPO) ಬ್ಯಾಂಕ್​ಗಳ ಹೂಡಿಕೆ 2021ನೇ ಇಸವಿಯಲ್ಲಿ ನಾಲ್ಕು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಪ್ರೈಮ್​ ಡೇಟಾ ಬೇಸ್​ನಿಂದ ಪಡೆದ ದತ್ತಾಂಶದ ಆಧಾರದಲ್ಲಿ ಮಿಂಟ್ ವಿಶ್ಲೇಷಣೆ ಮಾಡಿದೆ. 2019ನೇ ಇಸವಿಯಲ್ಲಿ ಐಪಿಒಗಳಲ್ಲಿ ಬ್ಯಾಂಕ್​ಗಳಲ್ಲಿ ಮಾಡಿದ ಹೂಡಿಕೆ 461 ಕೋಟಿ ರೂಪಾಯಿ ಇದ್ದದ್ದು ಈ ವರ್ಷ ಹತ್ತಿರಹತ್ತಿರ ದುಪ್ಪಟ್ಟು ಆಗಿ, 870 ಕೋಟಿ ರೂಪಾಯಿ ತಲುಪಿದೆ. ಕಳೆದ ವರ್ಷ ಕೊವಿಡ್-19 ಸಂಬಂಧಿತ ಅನಿಶ್ಚಿತತೆ ಕಾರಣಕ್ಕೆ ಪ್ರಾಥಮಿಕ ಮಾರ್ಕೆಟ್ ನಿಂತ ನೀರಾಗಿದ್ದರೂ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಐಪಿಒಗಳಲ್ಲಿ 698 ಕೋಟಿ ರೂಪಾಯಿ ಪೂರೈಕೆ ಮಾಡಿವೆ. 2017ರಲ್ಲಿ ಐಪಿಒ ಮೂಲಕ ದಾಖಲೆ ಮೊತ್ತದ ಸಂಗ್ರಹ ಆಗಿತ್ತು. ಹಣಕಾಸು ಸಂಸ್ಥೆಗಳು 4,548 ಕೋಟಿ ರೂಪಾಯಿಯನ್ನು QIB ಮಾರ್ಗದ ಮೂಲಕ ಪೂರೈಸಲಾಗಿತ್ತು.

ದತ್ತಾಂಶಗಳ ಮಾಹಿತಿ ಪ್ರಕಾರ, 2021ರಲ್ಲಿ ಇಲ್ಲಿಯ ತನಕ ಐಪಿಒ ಮೂಲಕ 27,417 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಕಳೆದ ವರ್ಷ 26,108 ಕೋಟಿ ರೂಪಾಯಿ ಸಂಗ್ರಹ ಆಗಿತ್ತು. 2019ರಲ್ಲಿ 11,036 ಕೋಟಿ ರೂ., 2018ರಲ್ಲಿ 30,615 ಕೋಟಿ ರೂ. ಆಗಿತ್ತು. ಸರ್ಕಾರದ ಐಪಿಒಗಳು, ಆಂಕರ್ ಹೂಡಿಕೆಗಳನ್ನು ಹೊರಗಿಟ್ಟು ವಿಶ್ಲೇಷಕರು ಈ ಮಾಹಿತಿಯನ್ನು ನೀಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಬ್ಯಾಂಕ್​ಗಳು ತಮ್ಮ ಟ್ರೆಷರಿ ಬುಕ್​ಗಳ ಮೂಲಕ ಐಪಿಒಗಳಲ್ಲಿ ಹೂಡಿಕೆ ಮಾಡುತ್ತಿವೆ. ಬಹುತೇಕ ಬ್ಯಾಂಕ್​ಗಳು 300ರಿಂದ 500 ಕೋಟಿ ರೂಪಾಯಿಗೆ ಆಂತರಿಕವಾಗಿ ಅನುಮತಿ ಪಡೆದು, ಐಪಿಒಗಳಲ್ಲಿ 50ರಿಂದ 100 ಕೋಟಿ ರೂಪಾಯಿ ಹೂಡಿಕೆ ಮಾಡುತ್ತವೆ. ಬ್ಯಾಂಕ್​ಗಳ ಮುಖ್ಯ ಉದ್ದೇಶ ಏನೆಂದರೆ, ಐಪಿಒಗಳ ಲಿಸ್ಟಿಂಗ್​ನಲ್ಲಿ ಗಳಿಕೆ ಮಾಡಿಕೊಳ್ಳಬೇಕು. ಆದರೆ 2019ರಲ್ಲಿ ಹಾಗಾಗಿರಲಿಲ್ಲ. ಸ್ಟರ್ಲಿಂಗ್ ಮತ್ತು ವಿಲ್ಸನ್ ಈ ಎರಡು ಐಪಿಒಗಳಲ್ಲಿ ಕಷ್ಟವಾಗಿತ್ತು.

“ಈ ಹಿಂದೆ ಐಪಿಒಗಳಲ್ಲಿ ಹೂಡಿಕೆಗೆ ಬ್ಯಾಂಕ್​ಗಳ ಬೆನ್ನು ಬೀಳಬೇಕಿತ್ತು. ಈಗ ಅವರು ನಮ್ಮ ಬೆನ್ನು ಬೀಳುತ್ತಿದ್ದಾರೆ. 2020ರ ಸೆಪ್ಟೆಂಬರ್​ನಿಂದ ಬ್ಯಾಂಕ್​ಗಳ ಟ್ರೆಷರಿ ಹೂಡಿಕೆಯಲ್ಲಿ ಗಣನೀಯವಾದ ಏರಿಕೆ ಆಗಿದೆ. ಇದಕ್ಕೆ ಭಾಗಶಃ ಹೆಚ್ಚುವರಿ ಲಿಕ್ವಿಡಿಟಿ ಮತ್ತು ಈ ಐಪಿಒಗಳು ಉತ್ತಮ ರಿಟರ್ನ್ಸ್ ನೀಡುತ್ತಿರುವುದೂ ಭಾಗಶಃ ಕಾರಣ,” ಎನ್ನುತ್ತಾರೆ ವಿಶ್ಲೇಷಕರು. ಈ ಹೂಡಿಕೆಗಳಲ್ಲಿ ಪ್ರಮುಖವಾಗಿರುವ ಹೆಸರುಗಳೆಂದರೆ, ಐಡಿಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡ. ಯಾವ ಕಂಪೆನಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೋ ಅಂಥವುಗಳ ಐಪಿಒ ಮೇಲೆ ಬ್ಯಾಂಕ್​ಗಳು ಹೂಡಿಕೆ ಮಾಡುತ್ತವೆ.

ಕ್ಲೀನ್​ ಸೈನ್ಸ್​, ಲಕ್ಷ್ಮೀ ಆರ್ಗಾನಿಕ್ಸ್, ಸೋನ್ ಕಾಮ್​ಸ್ಟಾರ್​ನಂಥ ಕಂಪೆನಿಗಳ ಐಪಿಒಗಳಲ್ಲಿ ಬ್ಯಾಂಕ್​ಗಳು ಹೂಡಿಕೆ ಮಾಡಿವೆ. ಆದರೆ ಬ್ಯಾಂಕ್​ಗಳು ಝೊಮ್ಯಾಟೋ ಐಪಿಒದಲ್ಲಿ ಹೂಡಿಕೆ ಮಾಡಿದ್ದವಾ ಎಂಬ ಬಗ್ಗೆ ಅನುಮಾನ ಇದೆ. ನಾವು ಮಾಹಿತಿಗಾಗಿ ಎದುರು ನೋಡಬೇಕು ಎಂದು ಹೆಸರು ಹೇಳಲು ಇಚ್ಛಿಸಿದ ಬ್ಯಾಂಕರ್​ವೊಬ್ಬರು ತಿಳಿಸಿದ್ದಾರೆ. “ಐಪಿಒನಲ್ಲಿ ಹೂಡಿಕೆ ಮಾಡುವುದು ಲಿಸ್ಟಿಂಗ್​ನಲ್ಲಿ ಲಾಭ ಗಳಿಸಬೇಕು ಅಂತಲೇ ಅಲ್ಲ. ಪ್ರಾಥಮಿಕವಾಗಿ ಬಿಜಿನೆಸ್ ಮಾಡೆಲ್ ಹಾಗೂ ಮ್ಯಾನೇಜ್​ಮೆಂಟ್ ಗುಣಮಟ್ಟವನ್ನು ನೋಡುತ್ತೇವೆ. ಬ್ಯಾಂಕ್​ಗಳು ಜಿಆರ್​ ಇನ್​ಫ್ರಾ, MTAR ಟೆಕ್ನಾಲಜೀಸ್, ಹ್ಯಾಪಿಯೆಸ್ಟ್ ಮೈಂಡ್ಸ್, ಇಂಡಿಯಾಮಾರ್ಟ್​ನಂಥ ಐಪಿಒಗಳಲ್ಲಿ ಹೂಡಿಕೆ ಮಾಡಲಾಗಿದೆ. ಗುಣಮಟ್ಟದ ಐಪಿಒ ಆಗಿದ್ದರಿಂದ ಹೂಡಿಕೆ ಮಾಡಲಾಗಿದೆ. ಜಿಆರ್​ ಇನ್​ಫ್ರಾ ವಿಷಯಕ್ಕೆ ಬಂದಲ್ಲಿ ಮುಲಸೌಕರ್ಯ ವಲಯದಲ್ಲಿ ಎಲ್​ ಅಂಡ್ ಟಿ ಹೊರತುಪಡಿಸಿ ಉತ್ತಮ ಕಂಪೆನಿ ಇಲ್ಲ. ಆದ್ದರಿಂದ ಬ್ಯಾಂಕ್​ಗಳು ಉತ್ತಮ ಆಫರ್ ಎಂದ ಪರಿಗಣಿಸಿವೆ. ಆದರೆ ಝೊಮ್ಯಾಟೋದಂಥ ಸ್ಟಾರ್ಟ್ ಅಪ್​ಗಳಲ್ಲಿ ವಿಭಿನ್ನ ದೃಷ್ಟಿಕೋನ ಹೊಂದಿವೆ,” ಎನ್ನುತ್ತಾರೆ ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮತ್ತೊಬ್ಬ ಬ್ಯಾಂಕರ್.

ಇದನ್ನೂ ಓದಿ: GR Infra Projects: ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್ ಐಪಿಒ ಶೇ 100ಕ್ಕೂ ಹೆಚ್ಚು ಪ್ರೀಮಿಯಂಗೆ ಲಿಸ್ಟಿಂಗ್; ಹೂಡಿಕೆದಾರರಿಗೆ ಬಂಪರ್

ಇದನ್ನೂ ಓದಿ: Rakesh Jhunjhunwala: ಹೊಸ ತಲೆಮಾರಿನ ಐಪಿಒಗಳ ಬಗ್ಗೆ ಬಿಗ್​ ಬುಲ್ ರಾಕೇಶ್​ ಜುಂಜುನ್​ವಾಲಾ ಹೇಳೋದೇನು?

(Banks Investments In IPO at 4 year high in 2021)