Sign In

By signing in or creating an account, you agree with Associated Broadcasting Company's Terms & Conditions and Privacy Policy.

GR Infra Projects: ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್ ಐಪಿಒ ಶೇ 100ಕ್ಕೂ ಹೆಚ್ಚು ಪ್ರೀಮಿಯಂಗೆ ಲಿಸ್ಟಿಂಗ್; ಹೂಡಿಕೆದಾರರಿಗೆ ಬಂಪರ್

ನೀವು ಮಾಡಿದ 100 ರೂಪಾಯಿ ಹೂಡಿಕೆ ಹತ್ತು ದಿನದಲ್ಲಿ 200 ರೂಪಾಯಿ ಆದರೆ ಹೇಗನ್ನಿಸುತ್ತದೆ? ಜಿಆರ್​ ಇನ್​ಫ್ರಾ ಪ್ರಾಜೆಕ್ಟ್ಸ್​ನ ಐಪಿಒನಲ್ಲಿ ಷೇರು ವಿತರಣೆ ಆದವರಿಗೆ ಈಗ ಅದೇ ಸಂಭ್ರಮ. ಹತ್ತೇ ದಿನದಲ್ಲಿ ಹಾಕಿದ ಹಣ ಲಿಸ್ಟಿಂಗ್​ ವೇಳೆ ದುಪ್ಪಟ್ಟಿಗೂ ಹೆಚ್ಚಾಗಿದೆ.

GR Infra Projects: ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್ ಐಪಿಒ ಶೇ 100ಕ್ಕೂ ಹೆಚ್ಚು ಪ್ರೀಮಿಯಂಗೆ  ಲಿಸ್ಟಿಂಗ್; ಹೂಡಿಕೆದಾರರಿಗೆ ಬಂಪರ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 19, 2021 | 11:18 AM

ಜಿಆರ್ ಇನ್​ಫ್ರಾಪ್ರಾಜೆಕ್ಟ್ಸ್ (GR Infraprojects) ಷೇರು ಐಪಿಒ ದರಕ್ಕೆ ದೊರೆತಿರುವವರಿಗೆ ಬಂಪರ್ ಆಫರ್ ಸಿಕ್ಕಿದೆ. ಜುಲೈ 19ನೇ ತಾರೀಕಿನ ಸೋಮವಾರದಂದು ಸೆಕೆಂಡರಿ ಮಾರ್ಕೆಟ್​ನಲ್ಲಿ ಈ ಷೇರು ಶೇ 103ರಷ್ಟು ಪ್ರೀಮಿಯಂ ದರಕ್ಕೆ ಲಿಸ್ಟಿಂಗ್ ಆಗಿದೆ. ವಿಶ್ಲೇಷಕರು ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ದರಕ್ಕೆ ಲಿಸ್ಟ್ ಆಗಿದೆ. ಸರ್ಕಾರವು ಮೂಲಸೌಕರ್ಯ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ವಹಿಸುತ್ತಿರುವುದರಿಂದ ಉತ್ತಮ ನಿರೀಕ್ಷೆ ಸಹಜವಾಗಿತ್ತು. ಈ ಲೇಖನ ಬರೆಯುವ ಹೊತ್ತಿಗೆ ಜಿಆರ್​ ಇನ್​ಫ್ರಾ ಪ್ರಾಜೆಕ್ಟ್ಸ್ ಷೇರಿನ ಬೆಲೆ ವಿತರಣೆಗಿಂತ ಶೇ 95.96ರಷ್ಟು ಏರಿಕೆ ಆಗಿ 1641.20ರಲ್ಲಿ ವಹಿವಾಟು ನಡೆಸುತ್ತಿತ್ತು. ಆದರೆ ಕಂಪೆನಿಯ ಷೇರು ಲಿಸ್ಟಿಂಗ್ ಆಗಿದ್ದು 1715.85 ರೂಪಾಯಿಗೆ. ಐಪಿಒನಲ್ಲಿ ವಿತರಿಸಿದ 837 ರೂಪಾಯಿಗೆ ಹೋಲಿಸಿದಲ್ಲಿ 888.85 ರೂಪಾಯಿ ಹೆಚ್ಚಿಗೆ ಮೊತ್ತಕ್ಕೆ ಲಿಸ್ಟ್ ಆಯಿತು.

ಕಳೆದ ಎರಡು ದಶಕದಲ್ಲಿ ಜಿಆರ್​ ಇನ್​ಫ್ರಾಪ್ರಾಜೆಕ್ಟ್​ನಲ್ಲಿ ಅದ್ಭುತವಾದ ಬೆಳವಣಿಗೆಯನ್ನು ದಾಖಲಿಸಿದೆ. ಸದ್ಯಕ್ಕೆ ಹೆಸರುವಾಸಿಯಾದ ಇಪಿಸಿ ಕಂಪೆನಿ ಇದು. ಅದರಲ್ಲೂ ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ. 2021ರ ಮಾರ್ಚ್ ಕೊನೆ ಹೊತ್ತಿಗೆ 19,000 ಕೋಟಿ ರೂಪಾಯಿ ಆರ್ಡರ್ ಬುಕ್ ಪಡೆದಿದ್ದು, ಆರ್ಡರ್ ಬುಕ್ ಟು ಬಿಲ್ ರೇಷಿಯೋ FY21ಕ್ಕೆ 2.6x ಆದಾಯ ಗಳಿಸಿದೆ. ಮುಂಬರುವ ವರ್ಷಗಳಲ್ಲಿ ಉತ್ತಮ ಆದಾಯದ ಸಾಧ್ಯತೆಗಳಿವೆ ಎಂದು ಯೆಸ್ ಸೆಕ್ಯೂರಿಟೀಸ್ ಹೇಳಿದೆ.

2021ರ ಮಾರ್ಚ್​ಗೆ ಕಂಪೆನಿಯು ಬುಲ್ಡ್ ಆಪರೇಟ್ ಟ್ರಾನ್ಸ್​ಫರ್ (BOT) (annuity) ಪ್ರಾಜೆಕ್ಟ್ ಮತ್ತು 14 ರಸ್ತೆ ಯೋಜನೆಗಳು ಹೈಬ್ರಿಡ್ ಆನ್ಯುಯುಟಿ ಮೋಡ್ (HAM)ನಲ್ಲಿ ಇದೆ. 14 ಪ್ರಾಜೆಕ್ಟ್​ಗಳಲ್ಲಿ 5 ಪ್ರಾಜೆಕ್ಟ್​ ಕಾರ್ಯ ನಿರ್ವಹಿಸಿತ್ತು, 4 ಪ್ರಾಜೆಕ್ಟ್​ ನಿರ್ಮಾಣ ಹಂತದಲ್ಲಿದೆ ಹಾಗೂ 5 ಪ್ರಾಜೆಕ್ಟ್​ಗಳು ಆರಂಭವಾಗಬೇಕದೆ. ಕಂಪೆನಿಯು ಮೆಟ್ರೋ ಮತ್ತು ಹೈ ಸ್ಪೀಡ್ ರೈಲುಗಳ ಯೋಜನೆಗಳಿಗೆ ಬಿಡ್ ಮಾಡಿದೆ. ಈ ಸೆಗ್ಮೆಂಟ್​ನಲ್ಲಿ ಇನ್ನೂ ವೈವಿಧ್ಯಮಯ ಪ್ರಾಜೆಕ್ಟ್​ಗಳನ್ನು ಗೆಲ್ಲಲು ಬಯಸಿದೆ.

ಜಿಆರ್ ಇನ್​ಫ್ರಾಪ್ರಾಜೆಕ್ಟ್ಸ್​ ಪ್ರಬಲವಾದ ಬಿಜಿನೆಸ್ ಮಾಡೆಲ್ ಹೊಂದಿದೆ ಎಂದು ಯೆಸ್ ಸೆಕ್ಯೂರಿಟೀಸ್ ಹೇಳಿದೆ. 2021ರ ಮಾರ್ಚ್​ಗೆ ಈ ಕಂಪೆನಿಯ ಉಪಕರಣದ ಬೇಸ್ 7000ಕ್ಕೂ ನಿರ್ಮಾಣ ಉಪಕರಣ ಹಾಗೂ ವಾಹನಗಳನ್ನು ಹೊಂದಿದೆ. ಕಂಪೆನಿಯ ಇನ್​ಹೌಸ್ ಇಂಟಿಗ್ರೇಟೆಡ್ ಮಾಡೆಲ್​ (ಮಾದರಿ)ಯಿಂದ ಪ್ರಮುಖ ಕಚ್ಚಾ ವಸ್ತುಗಳಿಗೆ, ನಿರ್ಮಾಣ ಉಪಕರಣಗಳಿಗೆ ಮತ್ತು ಇತರ ಉತ್ಪನ್ನಗಳಿಗೆ ಥರ್ಡ್ ಪಾರ್ಟಿ​ ಪೂರೈಕೆದಾರರ ಮೇಲೆ ಅವಲಂಬಿಸುವುದು ಅಗತ್ಯ ಇಲ್ಲ.

ಕಂಪೆನಿಯ ಸಾಲ ಪ್ರಮಾಣ ಬಹಳ ಕಡಿಮೆ ಇದೆ. ನೆಟ್ ಡೆಟ್​ ಟು ಈಕ್ವಿಟಿ 0.2x ಇದ್ದು, ಬೆಳವಣಿಗೆಗೆ ಅಗತ್ಯವಾದ ಹಣಕಾಸಿನ ಅಗತ್ಯವನ್ನು ಪೂರೈಸಿಕೊಳ್ಳುವಷ್ಟು ಸಮರ್ಥವಾಗಿದೆ. ರಸ್ತೆ ಎಂಜಿನಿಯರಿಂಗ್, ಪ್ರಕ್ಯೂರ್​ಮೆಂಟ್ ಮತ್ತು ಕನ್​ಸ್ಟ್ರಕ್ಷನ್ (EPC) ಕಂಪೆನಿಯಿಂದ ಐಪಿಒ ಮೂಲಕ ಯಶಸ್ವಿಯಾಗಿ 963 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಜುಲೈ 7ರಿಂದ 9ರ ಮಧ್ಯೆ ಐಪಿಒ ಸಬ್​ಸ್ಕ್ರಿಪ್ಷನ್​ಗೆ ಅವಕಾಶ ಇತ್ತು. ಆಫರ್ ಮಾಡಿದ್ದಕ್ಕಿಂತ 102.58 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. 2021ರಲ್ಲಿ ಅತಿ ಹೆಚ್ಚು ಸಬ್​ಸ್ಕ್ರಿಪ್ಷನ್​ ಪಡೆದ 7ನೇ ಐಪಿಒ ಎಂಬ ಅಗ್ಗಳಿಕೆ ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್​ಗೆ ದೊರೆಯಿತು.

ಇದನ್ನೂ ಓದಿ: Rakesh Jhunjhunwala: ಹೊಸ ತಲೆಮಾರಿನ ಐಪಿಒಗಳ ಬಗ್ಗೆ ಬಿಗ್​ ಬುಲ್ ರಾಕೇಶ್​ ಜುಂಜುನ್​ವಾಲಾ ಹೇಳೋದೇನು?