Sign In

By signing in or creating an account, you agree with Associated Broadcasting Company's Terms & Conditions and Privacy Policy.

Real Estate: ಈಗ ಮನೆ ಖರೀದಿಸುವುದಕ್ಕೆ ಅತ್ಯುತ್ತಮ ಸಮಯ ಎನ್ನಲು ಇಲ್ಲಿವೆ 9 ಕಾರಣಗಳು

ಕೊರೊನಾ ನಂತರದಲ್ಲಿ ಕೆಲ ರಾಜ್ಯಗಳು ಆಸ್ತಿ ಮುದ್ರಾಂಕ ಶುಲ್ಕಗಳನ್ನು ಕಡಿಮೆ ಮಾಡಿವೆ, ಮಾರುಕಟ್ಟೆಯಲ್ಲಿ ಮನೆಗಳ ಬೆಲೆಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಿವೆ, ಬ್ಯಾಂಕ್​ಗಳ ಬಡ್ಡಿ ದರ ಕಡಿಮೆ ಆಗಿದೆ. ಒಟ್ಟಾರೆ ನೋಡಿದಾಗ ಮನೆ ಖರೀದಿಸಲು ಇಲ್ಲಿವೆ 9 ಕಾರಣಗಳು.

Real Estate: ಈಗ ಮನೆ ಖರೀದಿಸುವುದಕ್ಕೆ ಅತ್ಯುತ್ತಮ ಸಮಯ ಎನ್ನಲು ಇಲ್ಲಿವೆ 9 ಕಾರಣಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 19, 2021 | 2:49 PM

ರಿಯಲ್ ಎಸ್ಟೇಟ್ ವಲಯವು ಕಳೆದ ಕೆಲವು ವರ್ಷದಿಂದ ಏರಿಳಿತ ಕಾಣುತ್ತಲೇ ಇದೆ. ಕಡಿಮೆ ಬೇಡಿಕೆ, ಲಿಕ್ವಿಡಿಟಿ ಸಮಸ್ಯೆ ಮತ್ತಿತರ ಸಮಸ್ಯೆಗಳು ಈ ವಲಯವನ್ನು ಹೈರಾಣಾಗಿಸಿವೆ. ಇದರ ಜತೆಗೆ ಹಲವು ಪ್ರಾಜೆಕ್ಟ್​ಗಳು ಪೂರ್ತಿ ಆಗಿಯೇ ಇಲ್ಲ. ಇದರಲ್ಲಿ ಖರೀದಿದಾರರ ದೊಡ್ಡ ಮೊತ್ತವೇ ತಗಲು ಹಾಕಿಕೊಂಡಿದೆ. ಇದರಿಂದ ಬಿಲ್ಡರ್​ಗಳು ಕೂಡ ಹೊರತಾಗಿಲ್ಲ. ಹಣಕಾಸು ಸಚಿವಾಲಯ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಧ್ಯಪ್ರವೇಶಿಸಿ, ರಿಯಲ್ ಎಸ್ಟೇಟ್ ವಲಯ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಕಡಿಮೆ ಬೇಡಿಕೆ ಹಾಗೂ ಬೆಲೆ ಕಡಿಮೆ ಮಾಡಲು ಸಿದ್ಧರಿಲ್ಲದ ಬಿಲ್ಡರ್​ಗಳ ಕಾರಣಕ್ಕೆ ಅಂದುಕೊಂಡಂತೆ ಸುಧಾರಣೆ ಕಾಣುತ್ತಿಲ್ಲ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಖರೀದಿದಾರರ ರಿಯಲ್ ಎಸ್ಟೇಟ್ ಆದ್ಯತೆಗಳಲ್ಲಿ ಬದಲಾವಣೆ ಕಾಣಿಸಿಕೊಂಡಿದೆ. ಒಂದು ವೇಳೆ ನೀವೇನಾದರೂ ಮನೆ ಖರೀದಿ ಮಾಡಬೇಕು ಅಂತಿದ್ದಲ್ಲಿ ಮೊದಲಿಗೆ ಸ್ಥಿರವಾದ ಉದ್ಯೋಗವೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಸದ್ಯದ ಸ್ಥಿತಿಯು ಮನೆ ಖರೀದಿಗೆ ಏಕೆ ಸೂಕ್ರ ಎಂಬುದನ್ನು ವಿವರಿಸುವಂಥ 9 ಅಂಶಗಳು ಇಲ್ಲಿವೆ.

1. ವಾಸ್ತವ್ಯಕ್ಕೆ ಸಿದ್ಧವಿರುವ ಪ್ರಾಜೆಕ್ಟ್​ಗಳು ಹಲವಾರಿವೆ ಕಳೆದ ಕೆಲವು ವರ್ಷದಿಂದ ಸೇರ್ಪಡೆ ಆಗುತ್ತಲೇ ಸಾಗಿದ ಕಾರಣಕ್ಕೆ ಹಲವು ಪ್ರಾಜೆಕ್ಟ್​ಗಳು ವಾಸ್ತವ್ಯ ಹೂಡುವುದಕ್ಕೆ ತಕ್ಷಣವೆ ಸಿದ್ಧವಾಗಿವೆ. ದಿನ- ತಿಂಗಳ ಲೆಕ್ಕದಲ್ಲೇ ಅಲ್ಲಿಗೆ ತೆರಳಬಹುದು. ಕಾಯುವ ಅಗತ್ಯ ಇಲ್ಲ. ಸಾಮಾನ್ಯವಾಗಿ ಖರೀದಿದಾರರು ಸಾಲ ಮಾಡಿ, ದುಡ್ಡು ಕಟ್ಟಿ, ಇಎಂಐ ಪಾವತಿ ಆರಂಭಿಸಿದರೂ ಪ್ರಾಜೆಕ್ಟ್​ಗಳು ಪೂರ್ತಿ ಆಗಿರುವುದಿಲ್ಲ. ಈ ಕಾರಣಕ್ಕೆ ತಾವಿರುವ ಮನೆಯ ಬಾಡಿಗೆಯನ್ನೂ ಕಟ್ಟುತ್ತಾ, ಲೋನ್ ಇಎಂಐ ಕೂಡ ಸೇರಿಕೊಂಡು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾರೆ. ಆದ್ದರಿಂದ ವಾಸಕ್ಕೇ ಯೋಗ್ಯವಾದ ಮನೆ ಖರೀದಿ ಮಾಡಿಬಿಟ್ಟರೆ ಬಾಡಿಗೆ ಖರ್ಚು ಉಳಿಯುತ್ತದೆ.

2. ಪ್ರಮುಖ ಮಾರ್ಕೆಟ್​ಗಳಲ್ಲಿ ಬೆಲೆ ಇಳಿಕೆ ಆಗಿದೆ ಮನೆಗಳು ಮಾರಾಟ ಆಗದೆ ಉಳಿದಿರುವುದು ಹಾಗೂ ಕೊರೊನಾದ ಬಿಕ್ಕಟ್ಟು ಸೇರಿಕೊಂಡು ಒತ್ತಡವನ್ನು ಹೆಚ್ಚಿಸಿದೆ. ದೇಶದ ದೊಡ್ಡ ರಿಯಲ್ ಎಸ್ಟೇಟ್​ ಮಾರ್ಕೆಟ್​ಗಳಲ್ಲಿ ಬೆಲೆ ಇಳಿಕೆ ಆಗಿದೆ. ಕೆಲವು ನಗರಗಳಲ್ಲಂತೂ ಶೇ 30ರಷ್ಟು ಇಳಿಕೆ ಆಗಿದೆ. ಆದ್ದರಿಂದ ಒಳ್ಳೆ ಬೆಲೆಗೆ ದೊರೆಯುತ್ತಿವೆ.

3. RERA ಮತ್ತು ಪ್ರಬಲ ಗ್ರಾಹಕ ಹಕ್ಕುಗಳು ಈ ಹಿಂದೆಲ್ಲ ಗ್ರಾಹಕರಿಂಗೆ ಭಯ ಇತ್ತು. ದುಡ್ಡು ಕಟ್ಟಿದ ಮೇಲೆ ಪ್ರಾಜೆಕ್ಟ್​ ಪೂರ್ತಿ ಮಾಡದೆ ವರ್ಷಗಟ್ಟಲೆ ತಮ್ಮ ಹಣ ತಗುಲಿ ಹಾಕಿಕೊಳ್ಳುತ್ತದೆ ಎಂದು ಹೆದರುತ್ತಿದ್ದರು. RERA ಪರಿಚಯಿಸುವುದರೊಂದಿಗೆ ಈ ಸಮಸ್ಯೆಯು ದೊಡ್ಡ ಮಟ್ಟದಲ್ಲಿ ನಿವಾರಣೆ ಆಗಿದೆ. ಗ್ರಾಹಕರ ಹಕ್ಕುಗಳ ರಕ್ಷಣೆಗೆ ಪ್ರಯತ್ನಿಸಲಾಗಿದೆ. ಇದರಿಂದಾಗಿ ರಿಯಲ್​ ಎಸ್ಟೇಟ್​ನಲ್ಲಿ ಹಣ ಹೂಡಲು ಹೆದರುತ್ತಿದ್ದವರಿಗೆ ಧೈರ್ಯ ತುಂಬಿದೆ.

4. ಜಾಗತಿಕ ಮಟ್ಟದಲ್ಲಿ ವಸತಿ ರಿಯಲ್​ ಎಸ್ಟೇಟ್​ಗೆ ಒಳ್ಳೆ ಬೇಡಿಕೆ ಇದೆ ವಾಣಿಜ್ಯ ರಿಯಲ್ ಎಸ್ಟೇಟ್​ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಹೌದಾದರೂ ವಸತಿ ಮಾರ್ಕೆಟ್​ಗೆ ಚಾಲನೆ ಸಿಕ್ಕಿದೆ. ಇಡೀ ವಿಶ್ವದಾದ್ಯಂತ ಚೇತರಿಸಿಕೊಂಡಿದೆ. ಇದಕ್ಕಾಗಿಯೇ ರೂಪಿಸಿದ ನಿಯಮಗಳಿಂದ ಖರೀದಿದಾರರು ಉತ್ತೇಜಿತರಾಗಿದ್ದಾರೆ. ಒಂದೋ ಈಕ್ವಿಟಿ ರೂಪದಲ್ಲಿ ಅಥವಾ ವಸತಿ ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

5. ಕಡಿಮೆ  ಬಡ್ಡಿ ದರ ಬ್ಯಾಂಕ್​ಗಳ ಸಾಲದ ಮೇಲಿನ ಬಡ್ಡಿ ದರದಲ್ಲಿ ಭಾರೀ ಇಳಿಕೆ ಆಗಿರುವುದರಿಂದ ಮನೆ ಖರೀದಿಯ ವೆಚ್ಚವನ್ನೂ ಕಡಿಮೆ ಮಾಡುತ್ತಿದೆ. ಬಹುತೇಕ ಗ್ರಾಹಕರು ಮನೆಯನ್ನು ಬ್ಯಾಂಕ್​ನಲ್ಲಿ ಅಡಮಾನ ಮಾಡಿಯೇ ಸಾಲ ಪಡೆಯುತ್ತಾರೆ. ಬಡ್ಡಿ ದರದಲ್ಲಿ ಕಡಿಮೆ ಅಂತಾದರೆ ಇಎಂಐ ಕೂಡ ಕಡಿಮೆ ಎಂದರ್ಥ. ಕೆಲವು ಕಡೆಗಳಲ್ಲಿ ಜನರು ತಾವು ಕಟ್ಟುವ ಬಾಡಿಗೆಗೆ ಒಂದಿಷ್ಟು ಮೊತ್ತ ಸೇರಿಸಿದರೆ ಮನೆ ಖರೀದಿಸಿ, ಅದಕ್ಕೆ ಇಎಂಐ ಪಾವತಿಸಬಹುದು. ಆದ್ದರಿಂದ ಬಾಡಿಗೆ ಕಟ್ಟುವ ಬದಲಿಗೆ ಇಎಂಐ ಪಾವತಿಸಿದರೆ ಮನೆ ಸ್ವಂತ ಮಾಡಿಕೊಳ್ಳಬಹುದು.

6. ಮುದ್ರಾಂಕ ಶುಲ್ಕ ಕಡಿತ ರಿಯಲ್ ಎಸ್ಟೇಟ್ ವಲಯ ಚೇತರಿಸಿಕೊಳ್ಳಲಿ ಎಂಬ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳು ಮುದ್ರಾಂಕ ಶುಲ್ಕಗಳನ್ನು (Stamp Duty) ಕಡಿತ ಮಾಡಿವೆ. ಇದರಿಂದ ಕೂಡ ಮನೆ ಖರೀದಿಯ ವೇಳೆ ಆಗುತ್ತಿದ್ದ ವೆಚ್ಚದ ಉಳಿತಾಯ ಆಗುತ್ತದೆ. ಇನ್ನು ರಿಯಲ್ ಎಸ್ಟೇಟ್ ವಲಯದಲ್ಲಿ ಆಗಿರುವ ದರ ಇಳಿಕೆ ಮತ್ತು ಮುದ್ರಾಂಕ ಶುಲ್ಕ ಕಡಿಮೆ ಆಗಿರುವುದು ಇವೆಲ್ಲ ಸೇರಿ ಖರೀದಿದಾರರಿಗೆ ಅನುಕೂಲ ಆಗುತ್ತದೆ.

7. ತೆರಿಗೆ ಅನುಕೂಲಗಳು ಮನೆ ಖರೀದಿಸುವುದರಿಂದ ಸಾಕಷ್ಟು ತೆರಿಗೆ ಪ್ರಯೋಜನಗಳಿವೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ, 24 ಮತ್ತು 80 ಇಇಎ ಅಡಿಯಲ್ಲಿ ಬರುತ್ತವೆ ಮತ್ತು ತೆರಿಗೆ ಸೌಲಭ್ಯಗಳು 5 ಲಕ್ಷ ರೂಪಾಯಿ ತನಕ ಎರಡನೆಯ ಮನೆ ಖರೀದಿಸುವವರಿಗೂ ದೊರೆಯುತ್ತವೆ. ಮನೆ ಖರೀದಿಸುವ ಮೂಲಕ ಎಷ್ಟು ತೆರಿಗೆ ಉಳಿತಾಯ ಪಡೆಯಬಹುದು ಎಂಬುದನ್ನು ನೋಡಲು ಈ ಪ್ರಯೋಜನಗಳನ್ನು ಪರಿಗಣಿಸಬಹುದು. ಕಡಿಮೆ ಬಡ್ಡಿದರಗಳು, ರಿಯಲ್ ಎಸ್ಟೇಟ್ ಬೆಲೆಗಳಲ್ಲಿ ಇಳಿಕೆ ಮತ್ತು ಮುದ್ರಾಂಕ ಶುಲ್ಕ ಕಡಿತವೂ ಒಳಗೊಂಡಂತೆ ಎಷ್ಟೆಲ್ಲ ಅನುಕೂಲ ಆಗುತ್ತವೆ ಎಂಬಯದನ್ನು ಲೆಕ್ಕ ಹಾಕಬಹುದು.

8. ಹೂಡಿಕೆಯಾಗಿ – ಏರಿಕೆ ನಿರೀಕ್ಷೆಯಿಂದ ಬಾಡಿಗೆ ಮಾರುಕಟ್ಟೆ ಇನ್ನೂ ಮೇಲೆದ್ದಿಲ್ಲ. ಆದರೆ ಎರಡನೇ ಮನೆ ಯಾವಾಗಲೂ ಬಾಡಿಗೆ ರೂಪದಲ್ಲಿ ಆದಾಯದ ಹರಿವನ್ನು ತರುತ್ತದೆ. ಆದರೂ ಈಗ ಕೂಡ ಹೆಚ್ಚಿನ ಬಡ್ಡಿದರವನ್ನು ನೀಡುವ ಅನೇಕ ಸ್ವತ್ತುಗಳಿವೆ. ಆದರೆ ಅನೇಕರು ರಿಯಲ್ ಎಸ್ಟೇಟ್ ಅನ್ನು ಕೇವಲ ಬಳಕೆಯ ಉದ್ದೇಶಗಳಿಗಾಗಿ ಪರಿಗಣಿಸುವ ಬದಲು ಹೂಡಿಕೆಯಾಗಿಯೇ ಆದ್ಯತೆ ನೀಡಬಹುದು. ನಿಜಕ್ಕೂ ರಿಯಲ್ ಎಸ್ಟೇಟ್ ಮಾರುಕಟ್ಟೆ ಬಿಸಿಯೇರಿದರೆ ಮುಂಬರುವ ಕೆಲವು ವರ್ಷಗಳಲ್ಲಿ ಮೌಲ್ಯಮಾಪನಗಳಲ್ಲಿ ನಾವು ಸ್ವಲ್ಪ ಏರಿಕೆಯನ್ನು ನೋಡಬಹುದು. ಆದರೆ ಇದು ಸಂಪೂರ್ಣವಾಗಿ ಊಹಾತ್ಮಕವಾಗಿದೆ. ಮತ್ತು ಒಂದೇ ರೀತಿಯ (ಅಥವಾ ಕಡಿಮೆ ಅಪಾಯಗಳನ್ನು ಹೊಂದಿರುವ) ಹಲವಾರು ಇತರ ಇನ್​ಸ್ಟ್ರುಮೆಂಟ್​ಗಳಿವೆ, ಅವು ಉತ್ತಮ ಲಾಭದ ಆಯ್ಕೆಗಳಾಗಬಹುದಾಗಿವೆ.

9. WFH (ವರ್ಕ್ ಫ್ರಮ್ ಹೋಮ್​)ಗೆ ಹೊಂದುವಂಥ ಮನೆ ಖರೀದಿ ‘ಮನೆಯಿಂದ ಕೆಲಸ’ (WFH) ಮಾಡುವುದಕ್ಕೆ ಸೂಕ್ತ ಆಗಲಿ ಎಂಬುದು ಹೊಸ ಮನೆ ಖರೀದಿಗೆ ಮತ್ತೂ ಒಂದು ಪ್ರಮುಖ ಕಾರಣ. ಈಗಿರುವ ಬಹುತೇಕ ಮನೆಗಳು ವರ್ಕ್​ ಫ್ರಮ್ ಹೋಮ್ ಅನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿರ್ಮಿಸಿರುವಂಥದ್ದಲ್ಲ. ಭವಿಷ್ಯದಲ್ಲಿ ಇದು ಸಾಮಾನ್ಯ ಆಗುತ್ತಿದ್ದಂತೆ ಜನರು ಗೃಹ ಕಚೇರಿಗೆ (Home ofiice) ಸಾಕಷ್ಟು ಸ್ಥಳಾವಕಾಶವಿರುವ ದೊಡ್ಡ ಮನೆಗೆ ತೆರಳಲು ನೋಡುತ್ತಿದ್ದಾರೆ. ಹೀಗಾಗಿ, ವರ್ಕ್​ ಫ್ರಮ್ ಹೋಮ್​ಗೆ ಹೊಂದುವಂಥ ಮನೆಯನ್ನು ಆರಿಸಿಕೊಳ್ಳುವುದಕ್ಕೆ ಈಗ ಕಾರಣ ಇದೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಹಾಗೂ ಸನ್ನಿಲಿಯೋನ್ ಒಂದೇ ಅಪಾರ್ಟ್​ಮೆಂಟ್​ನ ನೆರೆಹೊರೆಯವರು; ಕೋಟಿಕೋಟಿಯ ಫ್ಲ್ಯಾಟ್ ಖರೀದಿ

ಇದನ್ನೂ ಓದಿ: GROHE ಹ್ಯುರನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತರ ಪಟ್ಟಿ 2020ರಲ್ಲಿ ಮಂಗಲ್ ಪ್ರಭಾತ್ ಲೋಧಾ ನಂಬರ್ 1

(Including low interest rate, price correction, income tax benefits here are the 9 reasons to buy residential property now)

‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..