AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol and Diesel Excise Duty: ಏಪ್ರಿಲ್​ನಿಂದ ಜೂನ್​ ಮಧ್ಯೆ ಪೆಟ್ರೋಲಿಯಂ ಉತ್ಪನ್ನಗಳ ಅಬಕಾರಿ ಸುಂಕದಿಂದ 94,181 ಕೋಟಿ ರೂ. ವಸೂಲಿ

ಪೆಟ್ರೋಲ್ ಮತ್ತು ಡೀಸೆಲ್​ ಮೇಲೆ ಅಬಕಾರಿ ಸುಂಕದಿಂದ 94,181 ಕೋಟಿ ರೂಪಾಯಿ ಮೊತ್ತವು 2021ನೇ ಇಸವಿಯ ಏಪ್ರಿಲ್​ನಿಂದ ಜೂನ್​ ಮಧ್ಯೆ ಕೇಂದ್ರ ಸರ್ಕಾರಕ್ಕೆ ವಸೂಲಿ ಆಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಜುಲೈ 19ರಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

Petrol and Diesel Excise Duty: ಏಪ್ರಿಲ್​ನಿಂದ ಜೂನ್​ ಮಧ್ಯೆ ಪೆಟ್ರೋಲಿಯಂ ಉತ್ಪನ್ನಗಳ ಅಬಕಾರಿ ಸುಂಕದಿಂದ 94,181 ಕೋಟಿ ರೂ. ವಸೂಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 19, 2021 | 6:10 PM

2021ನೇ ಇಸವಿಯ ಏಪ್ರಿಲ್​ನಿಂದ ಜೂನ್​ ಮಧ್ಯೆ ಪೆಟ್ರೋಲ್ ಮತ್ತು ಡೀಸೆಲ್​ ಮೇಲೆ ಅಬಕಾರಿ ಸುಂಕದಿಂದ 94,181 ಕೋಟಿ ರೂಪಾಯಿ ಮೊತ್ತ ಕೇಂದ್ರ ಸರ್ಕಾರಕ್ಕೆ ವಸೂಲಿ ಆಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಜುಲೈ 19ರಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. “ಪ್ರಸ್ತುತ ಆರ್ಥಿಕ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು, ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ವೆಚ್ಚವನ್ನು ಗಮನದಲ್ಲಿ ಇಟ್ಟುಕೊಂಡು, ಅಬಕಾರಿ ಸುಂಕದ ದರವನ್ನು ಹೊಂದಾಣಿಕೆ ಮಾಡಲಾಗುತ್ತದೆ,” ಎಂದು ಸಚಿವ ಚೌಧರಿ ಅವರು ತಿಳಿಸಿದ್ದಾರೆ. 2017-18ರಿಂದ 2020-21ರ ಮಧ್ಯೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕದ ಶೇ 12ರಷ್ಟು ಸಗಟು ಆದಾಯ ಸಂಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹವಾದ ಸೆಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಚೌಧರಿ ಉತ್ತರ ನೀಡಿದ್ದಾರೆ.

ಇದೇ ವಿಷಯವಾಗಿ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ರಾಮೇಶ್ವರ್ ತೆಲಿ ಮಾತನಾಡಿ, ಸದ್ಯಕ್ಕೆ ಅನ್​ಬ್ರ್ಯಾಂಡೆಡ್ ಪೆಟ್ರೋಲ್ ಮೇಲೆ ಲೀಟರ್​ಗೆ ಅಬಕಾರಿ ಸುಂಕ ರೂ. 32.90 ಮತ್ತು ಡೀಸೆಲ್ ಲೀಟರ್​ಗೆ 31.80 ರೂಪಾಯಿ ಎಂದು ಮಾಹಿತಿ ನೀಡಿದ್ದಾರೆ. ತೆಲಿ ಮಾತು ಮುಂದುವರಿಸಿ, 2020- 21ಕ್ಕೆ ಕೇಂದ್ರ ಸರ್ಕಾರದಿಂದ ಪೆಟ್ರೀಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕವಾಗಿ 3.45 ಲಕ್ಷ ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ. 2019-20ನೇ ಸಾಲಿಗೆ 1.98 ಲಕ್ಷ ಕೋಟಿ ಮತ್ತು 2018-19ನೇ ಸಾಲಿಗೆ ರೂ. 1.78 ಲಕ್ಷ ಕೋಟಿ ವಸೂಲಾಗಿತ್ತು.

ತೆಲಿ ಅವರು ಸದನಕ್ಕೆ ನೀಡಿದ ಮಾಹಿತಿಯಂತೆ, ಈವರೆಗೆ 2021ರ ಜುಲೈಗೆ ಕಚ್ಚಾ ತೈಲ ಬ್ಯಾಸ್ಕೆಟ್ ಬ್ಯಾರೆಲ್​ಗೆ 74.34 ಅಮೆರಿಕನ್ ಡಾಲರ್ ಇದೆ. 2018ರ ಅಕ್ಟೋಬರ್ ನಂತರ ತಿಂಗಳ ಗರಿಷ್ಠ ಮೊತ್ತ ಇದು. ಜಾಗತಿಕ ಕಮಾಡಿಟಿ ಪದಾರ್ಥಗಳ ಏರಿಕೆಯ ಬೆನ್ನಿಗೆ ಈ ಬೆಳವಣಿಗೆ ಆಗಿದೆ.

ಇದನ್ನೂ ಓದಿ: Fuel Demand: ಕೊರೊನಾ ಎರಡನೇ ಅಲೆ ಹೊಡೆತಕ್ಕೆ 9 ತಿಂಗಳ ಕನಿಷ್ಠ ಮಟ್ಟ ತಲುಪಿದ್ದ ಇಂಧನ ಬೇಡಿಕೆ ಜೂನ್​ನಲ್ಲಿ ಮತ್ತೆ ಚೇತರಿಕೆ

ಇದನ್ನೂ ಓದಿ: Sunny leone: ಪೆಟ್ರೋಲ್ ಬೆಲೆಯಿಂದ ತತ್ತರಿಸಿರುವ ಜನರಿಗೆ ಆರೋಗ್ಯದ ಪಾಠ ಹೇಳಿದ ಸನ್ನಿ ಲಿಯೋನ್

(Excise duty on petrol and diesel collected between FY22 April to June amounted to Rs 94,181 crores, said by union minister in parliament)